ಪ್ಯಾರಿಸ್: ಪೋಲೆಂಡ್ನ ಯುವ ಆಟಗಾರ್ತಿ ಇಗಾ ಸ್ವಿಯಾಟೆಕ್ ಅಮೆರಿಕಾದ ಸೋಫಿಯಾ ಕೆನೆನ್ ಅವರನ್ನು ಮಣಿಸಿ ತಮ್ಮ ದೇಶಕ್ಕೆ ಚೊಚ್ಚಲ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ತಂದು ಕೊಟ್ಟಿದ್ದಾರೆ.
54 ಶ್ರೇಯಾಂಕದ ಸ್ವಿಯಾಟೆಕ್ ಹಾಲಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ವಿರುದ್ಧ 6-4, 6-1ರ ನೇರ ಸೆಟ್ಗಳ ಅಂತರದಲ್ಲಿ ತಮ್ಮ ಚೊಚ್ಚಲ ಗ್ರ್ಯಾಂಡ್ಸ್ಲಾಮ್ಗೆ ಮುತ್ತಿಕ್ಕಿದರು. 1992 ರ ಬಳಿಕ ಫ್ರೆಂಚ್ ಓಪನ್ ಗೆದ್ದ ಕಿರಿಯ ಆಟಗಾರ್ತಿ ಎಂಬ ಶ್ರೇಯಕ್ಕೂ ಪಾತ್ರರಾದರು.
19 ವರ್ಷದ ಸ್ವಿಯಾಟೆಕ್ 54 ಶ್ರೇಯಾಂಕ ಹೊಂದಿದ್ದು, ಇದೇ ಮೊದಲ ಬಾರಿಗೆ ಇಷ್ಟು ಕೆಳ ಕ್ರಮಾಂಕದ ಆಟಗಾರ್ತಿಯೊಬ್ಬರು ಫ್ರೆಂಚ್ ಓಪನ್ ಗೆದ್ದ ದಾಖಲೆಗೆ ಕೂಡ ಸೇರಿದ್ದಾರೆ.
ಸ್ವಿಯಾಟೆಕ್ ಹೊರತು ಪಡಿಸಿದರೆ, ರಾಫೆಲ್ ನಡಾಲ್ 2005ರಲ್ಲಿ 19ನೇ ವಯಸ್ಸಿಗೆ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಗೆದ್ದು ದಾಖಲೆ ಬರೆದಿದ್ದರು. ಇನ್ನು 2007ರ ಬಳಿಕ ಒಂದೇ ಒಂದು ಸೆಟ್ ಸೋಲದೇ ಪ್ರಶಸ್ತಿ ಗೆದ್ದಿರುವು ಏಕೈಕ ಟೆನಿಸ್ ಪಟು ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.