ETV Bharat / sports

ವಿಶ್ವಕಪ್​​ನಲ್ಲಿಂದು ಸೋತವರ ಸವಾಲು... ವೆಸ್ಟ್​​ ಇಂಡೀಸ್​​​-ಬಾಂಗ್ಲಾಗೆ ಮಾಡು ಇಲ್ಲವೇ ಮಡಿ ಪಂದ್ಯ - ವೆಸ್ಟ್ ಇಂಡೀಸ್ ತಂಡ

ಐಸಿಸಿ ಟಿ-20 ವಿಶ್ವಕಪ್​​ನ ಸೂಪರ್​-12 ಹಂತದ ಗ್ರೂಪ್​ 1ರ ಪಂದ್ಯದಲ್ಲಿಂದು ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಬಾಂಗ್ಲಾದೇಶ- ವೆಸ್ಟ್​ ಇಂಡೀಸ್​ ಮುಖಾಮುಖಿಯಾಗುತ್ತಿವೆ.

ICC T20 World cup
ICC T20 World cup
author img

By

Published : Oct 29, 2021, 3:43 AM IST

Updated : Oct 29, 2021, 3:02 PM IST

ಶಾರ್ಜಾ: ವಿಶ್ವಕಪ್​ನಲ್ಲಿ ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಬಾಂಗ್ಲಾದೇಶ ಹಾಗೂ ಹಾಲಿ ಚಾಂಪಿಯನ್​ ವೆಸ್ಟ್ ಇಂಡೀಸ್​ ತಂಡಗಳು ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಸೆಮಿಫೈನಲ್​ ಆಸೆ ಜೀವಂತವಾಗಿಟ್ಟುಕೊಳ್ಳಲು ಎರಡು ತಂಡಗಳಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿಪಂದ್ಯವಾಗಿ.

ಶರ್ಜಾ ಮೈದಾನದಲ್ಲಿ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು, ಬಲಿಷ್ಠ ವೆಸ್ಟ್​ ಇಂಡೀಸ್​ ತಂಡ ಬಾಂಗ್ಲಾ ಹುಲಿಗಳ ವಿರುದ್ಧ ತಿರುಗಿಬೀಳುವ ಸಾಧ್ಯತೆ ಇದೆ.

ಕಳೆದ ವಿಶ್ವಕಪ್​​ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್​ ಆಗಿದ್ದ ವೆಸ್ಟ್​ ಇಂಡೀಸ್ ಈ ಸಲ ಸಂಪೂರ್ಣವಾಗಿ ವೈಫಲ್ಯ ಅನುಭವಿಸುತ್ತಿದ್ದು, ತಾನು ಆಡಿರುವ ಇಂಗ್ಲೆಂಡ್​ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 55ರನ್​ಗಳಿಗೆ ಆಲೌಟ್​ ಆಗಿದ್ದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮುಗ್ಗರಿಸಿದೆ. ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡುವ ಆಟಗಾರರಿದ್ದರೂ, ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬರುತ್ತಿಲ್ಲ. ಗೇಲ್​, ಪೂರನ್​, ಹೆಟ್ಮಾಯರ್​, ಪೊಲಾರ್ಡ್​, ಬ್ರಾವೋ, ಸಿಮನ್ಸ್​ ಬ್ಯಾಟ್​ನಿಂದ ರನ್​ ಹರಿದು ಬರಬೇಕಾಗಿದೆ.

ಇದನ್ನೂ ಓದಿರಿ: AFG vs PAK WC T20: ಪಾಕಿಸ್ತಾನದ ಗೆಲುವಿನ ಓಟಕ್ಕೆ ಆಫ್ಘಾನಿಸ್ತಾನ ಬ್ರೇಕ್​?

ಮತ್ತೊಂದೆಡೆ ಬಲಿಷ್ಠ ತಂಡಗಳಾದ ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾಗೆ ಶಾಕ್​ ನೀಡಿ ಗೆಲುವು ದಾಖಲು ಮಾಡಿದ್ದ ಬಾಂಗ್ಲಾ ಇದೀಗ ವಿಶ್ವಕಪ್​​ನಲ್ಲಿ ಸಂಪೂರ್ಣವಾಗಿ ಮಂಕಾಗಿದೆ. ಈಗಾಗಲೇ ಶ್ರೀಲಂಕಾ ಹಾಗೂ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿರುವ ಕಾರಣ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ತಂಡದಲ್ಲಿ ನಯೀಮ್​, ಲಿಟನ್ ದಾಸ್, ಶಕೀಬ್​​ ಅಲ್​ ಹಸನ್​, ಮೊಹಮ್ಮದುಲ್ಲ, ರಹೀಂರಂತಹ ಬ್ಯಾಟರ್​ಗಳಿದ್ದು, ನಿರೀಕ್ಷಿತ ಮಟ್ಟದಲ್ಲಿ ರನ್​​ ಬರುತ್ತಿಲ್ಲ. ಟಿ-20ಯಲ್ಲಿ ಉಭಯ ತಂಡಗಳು ಈಗಾಗಲೇ 11 ಸಲ ಮುಖಾಮುಖಿಯಾಗಿದ್ದು, ಆರು ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್, 5 ಪಂದ್ಯಗಳಲ್ಲಿ ಬಾಂಗ್ಲಾ ಗೆಲುವು ದಾಖಲು ಮಾಡಿದೆ.

ವೆಸ್ಟ್ ಇಂಡೀಸ್ ತಂಡ: ಸಿಮನ್ಸ್, ಎವಿನ್ ಲೆವಿಸ್, ಕ್ರಿಸ್ ಗೇಲ್, ನಿಕೋಲಸ್ ಪೂರನ್(ವಿ.ಕೀ), ಶಿಮ್ರಾನ್ ಹೆಟ್ಮೆಯರ್, ಕಿರನ್ ಪೊಲಾರ್ಡ್(ಕ್ಯಾಪ್ಟನ್​), ಆಂಡ್ರೆ ರಸೆಲ್, ಡ್ವೇನ್ ಬ್ರಾವೊ, ಹೇಡನ್ ವಾಲ್ಷ್, ಅಕೇಲ್ ಹೊಸೀನ್, ರವಿ ರಾಂಪಾಲ್, ಜೇಸನ್ ಹೋಲ್ಡರ್, ರೋಸ್ಟನ್ ಫ್ಲೆಚರ್, ಚೇಸ್, ಓಶೇನ್ ಥಾಮಸ್

ಬಾಂಗ್ಲಾದೇಶ ತಂಡ: ಲಿಟನ್ ದಾಸ್, ಮೊಹಮ್ಮದ್ ನಯಿಮ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ(ಕ್ಯಾಪ್ಟನ್​), ಅಫೀಫ್ ಹೊಸೈನ್, ನೂರುಲ್ ಹಸನ್(ವಿ.ಕೀ), ಮಹೇದಿ ಹಸನ್, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಸೌಮ್ಯ ಸರ್ಕಾರ್, ಶಮಿ ಸರ್ಕಾರ್ , ರುಬೆಲ್ ಹುಸೇನ್​

ಪಂದ್ಯ: ಶರ್ಜಾ ಮೈದಾನ

ಸಮಯ: ಮಧ್ಯಾಹ್ನ 3:30ಕ್ಕೆ(ಭಾರತೀಯ ಕಾಲಮಾನ)

Last Updated : Oct 29, 2021, 3:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.