ನವದೆಹಲಿ: ಪೋಲೆಂಡ್ನಲ್ಲಿ ನಡೆದ ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನ ಪುರುಷರ ವಿಭಾಗದಲ್ಲಿ ಫೈನಲ್ ತಲುಪಿದ್ದ ಏಕೈಕ ಭಾರತೀಯ ಸಚಿನ್(56 ಕೆಜಿ) ಚಿನ್ನದ ಪದಕ ಪಡೆದಿದ್ದಾರೆ.
ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಸಚಿನ್ ಕಜಕಸ್ತಾನದ ಯರ್ಬೊಲಟ್ ಸಬೈರ್ ಅವರನ್ನು 4-1ರಲ್ಲಿ ಮಣಿಸುವ ಮೂಲಕ ಯೂತ್ ಬಾಕ್ಸಿಂಗ್ನಲ್ಲಿ ಭಾರತಕ್ಕೆ 8ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಸಚಿನ್ ಮೊದಲ ಸುತ್ತಿನಲ್ಲೇ ಅತ್ಯುತ್ತಮ ಪೈಪೋಟಿ ನೀಡಿದರಾದರೂ 2-3ರಲ್ಲಿ ಕಜಕ್ ಬಾಕ್ಸರ್ಗೆ ಶರಣಾದರು. ಆದರೆ, ಮುಂದಿನ ಸುತ್ತುಗಳಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಸ್ವರ್ಣಕ್ಕೆ ಮುತ್ತಿಕ್ಕಿದರು.
-
Sachin....Sachinnnnnn🔥
— Boxing Federation (@BFI_official) April 23, 2021 " class="align-text-top noRightClick twitterSection" data="
🇮🇳 ensures a perfect score by bagging the 8⃣th gold at the #YouthWorldBoxingChampionships as #Sachin displayed a gutsy and attacking game that left the 🇰🇿’s Sabyr Yerbolat wanting through the game.
Final Score- 4⃣:1⃣#PunchMeinHaiDum#boxing pic.twitter.com/7aZbX1ZMSr
">Sachin....Sachinnnnnn🔥
— Boxing Federation (@BFI_official) April 23, 2021
🇮🇳 ensures a perfect score by bagging the 8⃣th gold at the #YouthWorldBoxingChampionships as #Sachin displayed a gutsy and attacking game that left the 🇰🇿’s Sabyr Yerbolat wanting through the game.
Final Score- 4⃣:1⃣#PunchMeinHaiDum#boxing pic.twitter.com/7aZbX1ZMSrSachin....Sachinnnnnn🔥
— Boxing Federation (@BFI_official) April 23, 2021
🇮🇳 ensures a perfect score by bagging the 8⃣th gold at the #YouthWorldBoxingChampionships as #Sachin displayed a gutsy and attacking game that left the 🇰🇿’s Sabyr Yerbolat wanting through the game.
Final Score- 4⃣:1⃣#PunchMeinHaiDum#boxing pic.twitter.com/7aZbX1ZMSr
ಸಚಿನ್ ಪದಕದೊಂದಿಗೆ ಭಾರತ ಒಟ್ಟು 11 ಪದಕಗಳನ್ನು ತನ್ನದಾಗಿಸಿಕೊಂಡಿತು. ಮಹಿಳಾ ಬಾಕ್ಸರ್ಗಳಾದ ಗೀತಿಕಾ (48 ಕೆಜಿ), ಬಾಬಿರೋಜಿಸಾನ ಚಾನು (51 ಕೆಜಿ), ಪೂನಂ (57 ಕೆಜಿ), ವಿಂಕಾ (60 ಕೆಜಿ), ಅರುಂಧತಿ ಚೌಧರಿ (69 ಕೆಜಿ), ತೊಕ್ಕೋಮ್ ಸನಾಮಾಚು ಚಾನು (75 ಕೆಜಿ) ಮತ್ತು ಅಲ್ಫಿಯಾ ಪಠಾಣ್ (+ 81 ಕೆಜಿ) ಚಿನ್ನದ ಪದಕ ಗೆದ್ದಿದ್ದರು.
ಪುರುಷರ ವಿಭಾಗದಲ್ಲಿ ಸಚಿನ್ ಚಿನ್ನ ಗೆದ್ದರೆ, ಏಷ್ಯನ್ ಗೇಮ್ಸ್ ಬಾಕ್ಸಿಂಗ್ನಲ್ಲಿ ಬೆಳ್ಳಿ ಗೆದ್ದಿದ್ದ ಅಂಕಿತ್ ನರ್ವಾಲ್(64 ಕೆಜಿ), ಬಿಶ್ವಾಮಿತ್ರಾ ಚೊಂಗತೋಮ್(49 ಕೆಜಿ) ಮತ್ತು ವಿಶಾಲ್ ಗುಪ್ತಾ (91 ಕೆಜಿ) ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನು ಓದಿ: ವಿಶ್ವ ಯುವ ಬಾಕ್ಸಿಂಗ್ ಚಾಂಪಿಯನ್‌ಶಿಪ್ : 7 ಚಿನ್ನ, 3 ಕಂಚಿನ ಪದಕ ಗೆದ್ದ ಭಾರತ ನಾರಿಯರು