ನ್ಯೂಯಾರ್ಕ್: ಆಸ್ಟ್ರೇಲಿಯಾದ ಸ್ಯಾಮ್ ಸ್ಟೊಸುರ್ (37) ಮತ್ತು ಚೀನಾದ ಜಾಂಗ್ ಶುವಾಯ್ (32) ನ್ಯೂಯಾರ್ಕ್ನಲ್ಲಿ ನಡೆದ ಯುಎಸ್ ಓಪನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಎರಡನೇ ಗ್ರ್ಯಾಂಡ್ ಸ್ಲಾಮ್ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.
ಎರಡು ಗಂಟೆಗಳ ಕಾಲ ನಡೆದ ಟೆನಿಸ್ ಮಹಿಳಾ ಡಬಲ್ಸ್ ಪೈನಲ್ನಲ್ಲಿ 6-3 3-6 6-3 ಅಂತರದ ಗೆಲುವು ಈ ಜೋಡಿ ದಾಖಲಿಸಿತು. ಸ್ಯಾಮ್ - ಜಾಂಗ್ ಜೋಡಿ ಈ ಹಿಂದೆ 2019ರ ಆಸ್ಟ್ರೇಲಿಯನ್ ಓಪನ್ ಕಿರೀಟಕ್ಕೆ ಮುತ್ತಿಟ್ಟಿತ್ತು. ಇದೀಗ ಯುಎಸ್ ಓಪನ್ ಕಿರೀಟವನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: US Open: ಫೈನಲ್ನಲ್ಲಿ ವಿಶ್ವನಂಬರ್ 1 ಜಾಕೊವಿಕ್ಗೆ ಆಘಾತಕಾರಿ ಸೋಲು..ಮೆಡ್ವೆಡೆವ್ಗೆ ಭರ್ಜರಿ ಜಯ
ಸ್ಯಾಮ್ ಸ್ಟೊಸುರ್ ಅವರು 2005 ರಲ್ಲಿ ಫ್ಲಶಿಂಗ್ ಮೆಡೋಸ್‌ನಲ್ಲಿ ಬೇರೊಬ್ಬ ಆಟಗಾರ್ತಿಯೊಂದಿಗೆ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. 2011ರ ಯುಎಸ್ ಓಪನ್ನಲ್ಲಿ ಚಾಂಪಿಯನ್ ರಾಣಿ ಸೆರೆನಾ ವಿಲಿಯಮ್ಸ್ ಅವರನ್ನೇ ಸೋಲಿಸಿದ್ದರು.