ಹೈದರಾಬಾದ್ : 7ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಇಂದಿನಿಂದ ಆರಂಭಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲೇ ತೆಲುಗು ಟೈಟಾನ್ ವಿರುದ್ಧ ಯು ಮುಂಬಾ ಗೆಲುವು ದಾಖಲು ಮಾಡುವ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.
ಹೈದರಾಬಾದ್ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 25 ಅಂಕ ಪಡೆದುಕೊಂಡರೆ, ಯು ಮುಂಬಾ ತಂಡ 31 ಅಂಕ ಪಡೆದುಕೊಂಡಿತ್ತು. ಹೀಗಾಗಿ ಯು ಮುಂಬಾ 6 ಅಂಕಗಳ ಗೆಲುವು ದಾಖಲು ಮಾಡಿದೆ.
ಆರಂಭದಿಂದಲೂ ಮುನ್ನಡೆ ಪಡೆದುಕೊಂಡ ಯು ಮುಂಬಾ ಯಾವುದೇ ಸಮಯದಲ್ಲೂ ಆಟ ಬಿಟ್ಟುಕೊಡಲಿಲ್ಲ. ಮುಂಬಾ ಪರ ಫಜಲ್ ಅಟ್ರಾಚಲಿ, ಸಿದ್ಧಾರ್ಥ್,ಅಭಿಷೇಕ್ ಸಿಂಗ್ ಉತ್ತಮ ಪ್ರದರ್ಶನ ನೀಡಿದರು. ಮೊದಲಾರ್ಧದಲ್ಲಿ ಉಭಯ ತಂಡಗಳು 17-10 ಅಂಕ ಗಳಿಕೆ ಮಾಡಿದ್ದು, ತದನಂತರ ಇದನ್ನ ಮುಂಬಾ 19-11ಕ್ಕೆ ಏರಿಕೆ ಮಾಡಿತ್ತು. ಕೊನೆಯದಾಗಿ ಮುಂಬಾ ತಂಡ 31 ಅಂಕ ಗಳಿಕೆ ಮಾಡಿ ಗೆಲುವು ದಾಖಲು ಮಾಡಿತು.