ನವದೆಹಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಸೋಮವಾರ ಸುಮಿತ್ ಅಂತಿಲ್ ಪುರುಷರ F64 ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಮುರಿದು ಭಾರತಕ್ಕೆ 2ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ಈ ಪ್ಯಾರಾ ಕ್ರೀಡಾಪಟುವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, ಇಡೀ ದೇಶ ನಿಮ್ಮ ಪ್ರದರ್ಶನದಿಂದ ಹೆಮ್ಮೆ ಪಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಮಿತ್ F64 ಜಾವಲಿನ್ ಥ್ರೋ ಫೈನಲ್ಸ್ನಲ್ಲಿ 68.55 ಮೀಟರ್ ಎಸೆದು ವಿಶ್ವದಾಖಲೆ ಬ್ರೇಕ್ ಮಾಡಿ ಚಿನ್ನದ ಪದಕ ಗೆದ್ದರು. ಟೋಕಿಯೊದ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಿತ್ ತಮ್ಮ ಮೊದಲ ಪ್ರಯತ್ನದಲ್ಲಿ 66.95 ಮೀಟರ್ ಎಸೆದು ವಿಶ್ವದಾಖಲೆ ಬರೆದಿದ್ದರು. ಆದರೆ ತಮ್ಮ 2ನೇ ಅವಕಾಶದಲ್ಲಿ 68.08 ಮೀಟರ್ ಎಸೆದು ಮತ್ತೆ ತಮ್ಮದೇ ದಾಖಲೆಯನ್ನು ವಿಸ್ತರಿಸಿಕೊಂಡರು. ಮತ್ತೆ 5ನೇ ಪ್ರಯತ್ನದಲ್ಲಿ 68.55 ಮೀಟರ್ ಎಸೆದು ಒಂದೇ ಫೈನಲ್ಸ್ನಲ್ಲಿ 3ಬಾರಿ ವಿಶ್ವದಾಖಲೆ ಬ್ರೇಕ್ ಮಾಡಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು.
" ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳು ಮಿಂಚುತ್ತಿದ್ದಾರೆ. ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಸುಮಿತ್ ಆಂಟಿಲ್ ಪ್ರದರ್ಶನದಿಂದ ಇಡೀ ದೇಶ ಹೆಮ್ಮೆ ಪಡುತ್ತಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ರತಿಷ್ಠಿತ ಚಿನ್ನದ ಪದಕ ಗೆದ್ದ ಸುಮಿತ್ ಅವರಿಗೆ ಅಭಿನಂದನೆಗಳು. ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ " ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
-
Our athletes continue to shine at the #Paralympics! The nation is proud of Sumit Antil’s record-breaking performance in the Paralympics.
— Narendra Modi (@narendramodi) August 30, 2021 " class="align-text-top noRightClick twitterSection" data="
Congratulations Sumit for winning the prestigious Gold medal. Wishing you all the best for the future.
">Our athletes continue to shine at the #Paralympics! The nation is proud of Sumit Antil’s record-breaking performance in the Paralympics.
— Narendra Modi (@narendramodi) August 30, 2021
Congratulations Sumit for winning the prestigious Gold medal. Wishing you all the best for the future.Our athletes continue to shine at the #Paralympics! The nation is proud of Sumit Antil’s record-breaking performance in the Paralympics.
— Narendra Modi (@narendramodi) August 30, 2021
Congratulations Sumit for winning the prestigious Gold medal. Wishing you all the best for the future.
ಇದಕ್ಕೂ ಮೊದಲು 10 ಮೀಟರ್ ಏರ್ ರೈಫಲ್ನಲ್ಲಿ 19 ವರ್ಷದ ಅವಿನ ಲೇಖಾರಾ ಕೂಡ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ತಂದುಕೊಟ್ಟಿದ್ದರು. ಜಾವಲಿನ್ F46 ವಿಭಾಗದಲ್ಲಿ ದೇವೇಂದ್ರ ಸಿಂಗ್ ಜಜಾರಿಯಾ ಬೆಳ್ಳಿ ಮತ್ತು ಸುಂದರ್ ಸಿಂಗ್ ಗುರ್ಜಾರ್ ಕಂಚಿನ ಪದಕ ಪಡೆದಿದ್ದರು. 2016ರಲ್ಲಿ 4 ಪದಕ ಗೆದ್ದಿದ್ದ ಭಾರತ ಈ ಬಾರಿ 7 ಪದಕದೊಡನೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗರಿಷ್ಠ ಪದಕ ಸಾಧನೆ ಮಾಡಿದೆ.
ಇದನ್ನು ಓದಿ:ಪ್ಯಾರಾಲಿಂಪಿಕ್ಸ್ ಭಾರತಕ್ಕೆ 2ನೇ ಚಿನ್ನ : F64 ಜಾವಲಿನ್ ಥ್ರೋನಲ್ಲಿ ಬಂಗಾರ ಗೆದ್ದ ಸುಮಿತ್ ಆಂಟಿಲ್