ಸಂಚಿಯಾನ್: ಇಲ್ಲಿನ ಪಾಲ್ಮಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2022ರಲ್ಲಿ ಪಿ.ವಿ.ಸಿಂಧು ಹಾಗೂ ಶ್ರೀಕಾಂತ್ ಭರ್ಜರಿ ಆಟ ಪ್ರದರ್ಶಿಸುತ್ತಿದ್ದಾರೆ. ಉಭಯ ಜೋಡಿ ಇದೀಗ ಎದುರಾಳಿಗಳಿಗೆ ಸೋಲಿನ ರುಚಿ ತೋರಿಸಿ, ಸೆಮಿಫೈನಲ್ಗೆ ಲಗ್ಗೆ ಹಾಕಿದೆ.
-
🇮🇳’s @Pvsindhu1 continues to display her lethal form as she cements her place into the semifinals of #KoreaOpenSuper500 after defeating 🇹🇭’s Busanan O 2️⃣1️⃣-1️⃣0️⃣, 2️⃣1️⃣-1️⃣6️⃣ in the quarterfinals.
— BAI Media (@BAI_Media) April 8, 2022 " class="align-text-top noRightClick twitterSection" data="
Well done, champ! 🔥 🔝 #KoreaOpen2022#IndiaontheRise #badminton pic.twitter.com/lVDY3Cvgjg
">🇮🇳’s @Pvsindhu1 continues to display her lethal form as she cements her place into the semifinals of #KoreaOpenSuper500 after defeating 🇹🇭’s Busanan O 2️⃣1️⃣-1️⃣0️⃣, 2️⃣1️⃣-1️⃣6️⃣ in the quarterfinals.
— BAI Media (@BAI_Media) April 8, 2022
Well done, champ! 🔥 🔝 #KoreaOpen2022#IndiaontheRise #badminton pic.twitter.com/lVDY3Cvgjg🇮🇳’s @Pvsindhu1 continues to display her lethal form as she cements her place into the semifinals of #KoreaOpenSuper500 after defeating 🇹🇭’s Busanan O 2️⃣1️⃣-1️⃣0️⃣, 2️⃣1️⃣-1️⃣6️⃣ in the quarterfinals.
— BAI Media (@BAI_Media) April 8, 2022
Well done, champ! 🔥 🔝 #KoreaOpen2022#IndiaontheRise #badminton pic.twitter.com/lVDY3Cvgjg
ಕ್ವಾರ್ಟರ್ ಫೈನಲ್ನಲ್ಲಿ ಪಿ.ವಿ.ಸಿಂಧು ಎದುರಾಳಿ ವಿರುದ್ಧ 21-10, 21-16 ಸೆಟ್ಗಳಿಂದ ಥಾಯ್ಲೆಂಡ್‌ನ ಆಟಗಾರ್ತಿ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಮತ್ತೊಂದೆಡೆ, ಕಿಡಂಬಿ ಶ್ರೀಕಾಂತ್ ಕೊರಿಯಾದ ಆಟಗಾರ ಸೂನ್ ವಾನ್ ವಿರುದ್ಧ 21-12, 18-21 ಹಾಗೂ 21-12 ಅಂಕಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. ಕಿಡಂಬಿ ಶ್ರೀಕಾಂತ್ ಹಾಗೂ ಸೂನ್ ವಾನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ಕಾರಣ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಪಂದ್ಯ ನಡೆಯಿತು.
ಇದನ್ನೂ ಓದಿ: ಡೆಲ್ಲಿ ವಿರುದ್ಧ ಕೊನೆ ಓವರ್ನಲ್ಲಿ ಗೆದ್ದ ಲಖನೌ.. ಕನ್ನಡಿಗ ರಾಹುಲ್ ಬಳಗಕ್ಕೆ ಸತತ 3ನೇ ಗೆಲುವು!
-
INTO THE SEMIS! 🔥
— BAI Media (@BAI_Media) April 8, 2022 " class="align-text-top noRightClick twitterSection" data="
🇮🇳’s @srikidambi marched into the semifinals of #KoreaOpen2022 after defeating 🇰🇷’s Son Wanho in a 3 game thriller.
Way to go, champ! 🙌#KoreaOpenSuper500 #IndiaontheRise #Badminton pic.twitter.com/Q91QxNWUhZ
">INTO THE SEMIS! 🔥
— BAI Media (@BAI_Media) April 8, 2022
🇮🇳’s @srikidambi marched into the semifinals of #KoreaOpen2022 after defeating 🇰🇷’s Son Wanho in a 3 game thriller.
Way to go, champ! 🙌#KoreaOpenSuper500 #IndiaontheRise #Badminton pic.twitter.com/Q91QxNWUhZINTO THE SEMIS! 🔥
— BAI Media (@BAI_Media) April 8, 2022
🇮🇳’s @srikidambi marched into the semifinals of #KoreaOpen2022 after defeating 🇰🇷’s Son Wanho in a 3 game thriller.
Way to go, champ! 🙌#KoreaOpenSuper500 #IndiaontheRise #Badminton pic.twitter.com/Q91QxNWUhZ
ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಜಪಾನ್ನ ಸೈನಾ ಕವಾಕಮಿ ಅಥವಾ ಎರಡನೇ ಶ್ರೇಯಾಂಕದ ಕೊರಿಯಾದ ಅನ್ ಸೆಯಂಗ್ ಅವರನ್ನು ಎದುರಿಸಲಿದ್ದಾರೆ. ಎರಡನೇ ಸುತ್ತಿನಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ 21-18, 21-6 ಪಾಯಿಂಟ್‌ಗಳ ಅಂತರದಿಂದ ಇಸ್ರೇಲ್‌ನ ಮಿಶಾ ಜಿಲ್ಬರ್‌ಮನ್ ವಿರುದ್ಧ ಗೆಲುವು ಸಾಧಿಸಿದ್ದರು. ವಿಶ್ವದ 7ನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು ಗುರುವಾರ ನಡೆದ ಪಂದ್ಯದಲ್ಲಿ ಜಪಾನ್ನ ಆಯಾ ಒಹೋರಿ 21-15, 21-10ರ ಅಂತರದಲ್ಲಿ ಗೆಲ್ಲುವ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದ್ದರು.