ETV Bharat / sports

ಖೇಲೋ ಇಂಡಿಯಾ ಹೆಸರಲ್ಲಿ ಜಾಹೀರಾತು ನೀಡಿ ಕ್ರೀಡಾಪಟುಗಳಿಂದ ಹಣ ಲೂಟಿ: ದೂರು ದಾಖಲು

2021ರ ಖೇಲೋ ಇಂಡಿಯಾ ಹರಿಯಾಣದ ಪಂಚಕುಲದಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತನ್ನು ಪೋಸ್ಟ್ ಮಾಡಲಾಗಿದೆ.

ಖೇಲೋ ಇಂಡಿಯಾ
ಖೇಲೋ ಇಂಡಿಯಾ
author img

By

Published : Nov 5, 2020, 4:49 PM IST

ನವದೆಹಲಿ: ಖೇಲೋ ಇಂಡಿಯಾದ ಹೆಸರಲ್ಲಿ ಸುಳ್ಳು ಜಾಹೀರಾತು ನೀಡಿದ್ದಲ್ಲದೆ ನೋಂದಣಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಣ ಲೂಟಿ ಮಾಡಲಾಗುತ್ತಿದೆ. ಹಲವಾರು ಕ್ರೀಡಾಪಟುಗಳಿಂದ ಭಾರತದ ಕ್ರೀಡಾ ಪ್ರಾಧಿಕಾರಕ್ಕೆ ಹಲವು ದೂರುಗಳು ಬಂದಿವೆ.

2021ರ ಖೇಲೋ ಇಂಡಿಯಾ ಹರಿಯಾಣದ ಪಂಚಕುಲದಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತನ್ನು ಪೋಸ್ಟ್ ಮಾಡಲಾಗಿದೆ. ಈ ಜಾಹೀರಾತಿನಲ್ಲಿ ಅಥ್ಲೀಟ್​ಗಳಿಗೆ ನೋಂದಣಿ ಶುಲ್ಕವಾಗಿ 6000 ರೂ.ಗಳನ್ನು ಡೆಪಾಸಿಟ್ ಮಾಡುವಂತೆ ತಿಳಿಸಿಲಾಗಿದೆ. ಜೊತೆಗೆ ಖೇಲೋ ಇಂಡಿಯಾ ಕ್ರೀಡಾಕೂಟದ ಟ್ರಯಲ್ಸ್​ನಲ್ಲೂ ಭಾಗವಹಿಸಬಹುದು ಎಂದು ಭರವಸೆ ನೀಡಲಾಗಿದೆ.

ಈ ಬಗ್ಗೆ ಹಲವಾರು ದೂರುಗಳು ಕೇಳಿದ ಬಂದ ಬೆನ್ನಲ್ಲೇ ಜಾಹೀರಾತಿನಲ್ಲಿ ಉಲ್ಲೇಖಿಸಿರುವ ಮೊಬೈಲ್ ನಂಬರ್​ ಮತ್ತು ಅಕೌಂಟ್​ ನಂಬರ್​ ಮೂಲಕ ಈ ಜಾಹೀರಾತು ನೀಡಿದ ವ್ಯಕ್ತಿಯ ವಿವರಗಳನ್ನು ಪಡದುಕೊಳ್ಳುವಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಯಶಸ್ವಿಯಾಗಿದೆ.

ಈ ಸುಳ್ಳು ಜಾಹೀರಾತಿನಲ್ಲಿ ಕ್ರೀಡಾ ಸಚಿವಾಲಯ ಮತ್ತು ಖೇಲೋ ಇಂಡಿಯಾದ ಲೋಗೋಗಳನ್ನು ಸಹ ಬಳಸಿರುವುದರಿಂದ ಹಲವಾರು ಕ್ರೀಡಾಪಟುಗಳು ಇದು ಸರ್ಕಾರದ ಜಾಹೀರಾತೆಂದೇ ನಂಬಿದ್ದಾರೆ ಎಂದು ಸಾಯ್​ ತಿಳಿಸಿದೆ.

ಈ ಕುರಿತು ಸಾಯ್, ಉತ್ತರ ಪ್ರದೇಶದಲ್ಲಿ ಎಫ್​ಐಆರ್​ ದಾಖಲಿಸಿದ್ದು, ತಕ್ಷಣವೇ ಈ ವಿಚಾರವಾಗಿ ತನಿಖೆ ನಡೆಸುವಂತೆ ಕೇಳಿಕೊಂಡಿದೆ. ಜೊತೆಗೆ ಖೇಲೋ ಇಂಡಿಯಾ ಸರ್ಕಾರದ ಯೋಜನೆಯಾಗಿದ್ದು, ಯಾವುದೇ ಕ್ರೀಡಾಪಟುಗಳು ಹಣ ನೀಡುವ ಅಗತ್ಯವಿಲ್ಲ. ಜೊತೆಗೆ ಇಲ್ಲಿ ಯಾವುದೇ ಟ್ರಯಲ್ಸ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.