ನ್ಯೂಯಾರ್ಕ್: ಅಮೆರಿಕನ್ ಓಪನ್ ಗ್ರ್ಯಾಂಡ್ಸ್ಲಾಮ್ ಟೆನ್ನಿಸ್ ಟೂರ್ನಿಯಲ್ಲಿ ಸೋತು ಸೆರೆನಾ ವಿಲಿಯಮ್ಸನ್ ವೃತ್ತಿ ಜೀವನಕ್ಕೆ ಗುಡ್ಬೈ ಹೇಳಿದ್ದಾರೆ. ನಿನ್ನೆ ನಡೆದ ಮಹಿಳೆಯರ ಸಿಂಗಲ್ಸ್ನ ಮೂರನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಜ್ಲಾ ಟಾಮ್ಲಜಾನೊವಿಚ್ ವಿರುದ್ಧ 7-5, 6-7,6-1 ಅಂತರದಿಂದ ಸೋಲು ಕಂಡಿದ್ದಾರೆ.
ಮೊದಲ ಸೆಟ್ನಲ್ಲಿ ಸೋತರೂ, ಎರಡನೇ ಸೆಟ್ನಲ್ಲಿ ಕಮ್ಬ್ಯಾಕ್ ಮಾಡಿದ್ದ ಟೆನ್ನಿಸ್ ತಾರೆ ಸೆರೆನಾ, ನಿರ್ಣಾಯಕ ಸೆಟ್ನಲ್ಲಿ ಹಿನ್ನಡೆ ಅನುಭವಿಸಿ, ಸೋಲು ಒಪ್ಪಿಕೊಂಡರು. ಈ ಮೂಲಕ ತಮ್ಮ ಟೆನ್ನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
-
"I wouldn't be Serena if there wasn't Venus."@serenawilliams 💙 @Venuseswilliams pic.twitter.com/C7RZXcf23E
— US Open Tennis (@usopen) September 3, 2022 " class="align-text-top noRightClick twitterSection" data="
">"I wouldn't be Serena if there wasn't Venus."@serenawilliams 💙 @Venuseswilliams pic.twitter.com/C7RZXcf23E
— US Open Tennis (@usopen) September 3, 2022"I wouldn't be Serena if there wasn't Venus."@serenawilliams 💙 @Venuseswilliams pic.twitter.com/C7RZXcf23E
— US Open Tennis (@usopen) September 3, 2022
23 ಸಲ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಸೆರೆನಾ ವಿಲಿಯಮ್ಸನ್ ಟೆನ್ನಿಸ್ನಿಂದ ನಿವೃತ್ತಿ ಘೋಷಿಸುವುದಾಗಿ ಕಳೆದ ಕೆಲ ದಿನಗಳ ಹಿಂದೆ ಸುಳಿವು ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದ ಅವರು, ಈ ವರ್ಷದ ಅಂತಿಮ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿ ಬಳಿಕ ಟೆನ್ನಿಸ್ ತ್ಯಜಿಸಲು ಯೋಚಿಸುತ್ತಿರುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು.
- — US Open Tennis (@usopen) September 3, 2022 " class="align-text-top noRightClick twitterSection" data="
— US Open Tennis (@usopen) September 3, 2022
">— US Open Tennis (@usopen) September 3, 2022
ಇದನ್ನೂ ಓದಿ: ಟೆನಿಸ್ಗೆ ವಿದಾಯ ಘೋಷಿಸುವ ಸುಳಿವು ನೀಡಿದ 23 ಗ್ರ್ಯಾಂಡ್ ಸ್ಲಾಮ್ ಒಡತಿ ಸೆರೆನಾ
2021ರ ಫ್ರೆಂಚ್ ಓಪನ್ ನಂತರ ಟೆನ್ನಿಸ್ ಅಖಾಡಕ್ಕಿಳಿದಿದ್ದ ಸೆರೆನಾ ತಮ್ಮ ಹಳೆಯ ಶೈಲಿಯ ಆಟ ಆಡುತ್ತಿಲ್ಲ. ಹೀಗಾಗಿ, ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸೆರೆನಾ 1999, 2002, 2008, 2012, 2013, 2014 ಸೇರಿದಂತೆ ಒಟ್ಟು ಆರು ಸಲ ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. 10 ಸಲ ಯುಎಸ್ ಓಪನ್ನಲ್ಲಿ ಫೈನಲ್ಗೆ ಲಗ್ಗೆ ಹಾಕಿದ್ದಾರೆ. ಸೆರೆನಾ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಹಾಗೂ ಅಮೆರಿಕನ್ ಓಪನ್ನಲ್ಲೂ ಪ್ರಶಸ್ತಿ ಗೆದ್ದಿದ್ದಾರೆ.
-
Six #USOpen titles in 15 years: the Serena dynasty. pic.twitter.com/s72gyZhHRU
— US Open Tennis (@usopen) September 3, 2022 " class="align-text-top noRightClick twitterSection" data="
">Six #USOpen titles in 15 years: the Serena dynasty. pic.twitter.com/s72gyZhHRU
— US Open Tennis (@usopen) September 3, 2022Six #USOpen titles in 15 years: the Serena dynasty. pic.twitter.com/s72gyZhHRU
— US Open Tennis (@usopen) September 3, 2022
1995ರಲ್ಲಿ ಕೇವಲ 14 ವರ್ಷದವರಾಗಿದ್ದಾಗ ಟೆನ್ನಿಸ್ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದ ಸೆರೆನಾ, 1999ರಲ್ಲಿ ಮೊದಲ ಗ್ರ್ಯಾಂಡ್ಸ್ಲಾಮ್ ಗೆದ್ದಿದ್ದರು. ಇದಾದ ಬಳಿಕ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಧಿಪತ್ಯ ಸಾಧಿಸಿದ್ದರು. 2012ರ ಲಂಡನ್ ಒಲಂಪಿಕ್ಸ್ನಲ್ಲಿ ಸೆರೆನಾ ಮಹಿಳಾ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ್ದರು.
ನಿನ್ನೆಯ ಪಂದ್ಯದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಇಷ್ಟೊಂದು ವರ್ಷ ಸ್ಪರ್ಧೆಯಲ್ಲಿ ಆಡಲು ಸಾಧ್ಯವಾಯಿತು ಎಂದು ಭಾವುಕರಾದರು.