ನವದೆಹಲಿ: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಬುಧವಾರ ತಮ್ಮ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಚೇತರಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹೌದು, ರಿಷಭ್ ಪಂತ್ ಶೀಘ್ರವೇ ಗುಣಮುಖರಾಗುವ ಭರವಸೆಯಲ್ಲಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡ ಅವರು ಸದ್ಯ ವೇಗವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಶೀಘ್ರದಲ್ಲೇ ಫಿಟ್ ಆಗುತ್ತಾರೆ ಹಾಗೂ ಆದಷ್ಟು ಬೇಗನೇ ಮೈದಾನದಲ್ಲಿ ಪ್ರ್ಯಾಕ್ಟೀಸ್ ಮಾಡಲಿದ್ದಾರೆ ಎಂದು ಜನರು ಕೂಡಾ ಭಾವಿಸುತ್ತಿದ್ದಾರೆ.
-
Comeback soon, Champion 😍
— CricTracker (@Cricketracker) May 3, 2023 " class="align-text-top noRightClick twitterSection" data="
📸: RishabhPant/Instagram#CricTracker #RishabhPant #IndianCricket pic.twitter.com/5PS5esiGnZ
">Comeback soon, Champion 😍
— CricTracker (@Cricketracker) May 3, 2023
📸: RishabhPant/Instagram#CricTracker #RishabhPant #IndianCricket pic.twitter.com/5PS5esiGnZComeback soon, Champion 😍
— CricTracker (@Cricketracker) May 3, 2023
📸: RishabhPant/Instagram#CricTracker #RishabhPant #IndianCricket pic.twitter.com/5PS5esiGnZ
ಇನ್‌ಸ್ಟಾಗ್ರಾಮ್‌ನಲ್ಲಿ ಏನು ಬರೆದಿದ್ದಾರೆ ಪಂತ್?: ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ''ಕ್ರೀಡೆ ಪಾತ್ರವನ್ನು ನಿರ್ಮಿಸುವುದಿಲ್ಲ, ಅವರು ಅದನ್ನು ಬಹಿರಂಗಪಡಿಸುತ್ತಾರೆ. ಅಂದರೆ, ಕ್ರೀಡೆಗಳು ವ್ಯಕ್ತಿತ್ವ ನಿರ್ಮಿಸುವುದಿಲ್ಲ. ಆದರೆ, ಅದನ್ನು ಬಹಿರಂಗಪಡಿಸುವ ಸಾಧನವಾಗಿದೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೊಯಿನ್ ಅಲಿ ಹಿಡಿದ ಕ್ಯಾಚ್ ನೋಡಿ ಬೆರಗಾದ ಧೋನಿ!
ಫಿಸಿಯೊ ಥೆರಪಿಗೆ ಒಳಗಾದ ರಿಷಭ್ ಪಂತ್: ರಿಷಭ್ ಪಂತ್ ಉತ್ತರಾಖಂಡದ ತಮ್ಮ ಮನೆಗೆ ಹೋಗುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿತ್ತು. ಆಗ ಸ್ಥಳದಲ್ಲಿದ್ದವರು, ರಿಷಭ್ ಪಂತ್ ಅವರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ದು ಪ್ರಾಣ ಉಳಿಸಿದ್ದರು. ಈ ಅಪಘಾತದಲ್ಲಿ ರಿಷಭ್ ಪಂತ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಎರಡು ತಿಂಗಳ ಶಸ್ತ್ರಚಿಕಿತ್ಸೆಯ ನಂತರವೂ, ಪಂತ್ ಇನ್ನೂ ಮತ್ತೊಬ್ಬರ ಸಹಾಯದೊಂದಿಗೆ ಓಡಾಡುತ್ತಿದ್ದಾರೆ. ಪ್ರಸ್ತುತ ಅವರು ಫಿಸಿಯೊ ಥೆರಪಿಗೆ ಒಳಗಾಗುತ್ತಿದ್ದಾರೆ, ಇದು ಮುಂದಿನ ಕೆಲವು ತಿಂಗಳುಗಳಲ್ಲಿ ನಡೆಯಲು ಸಹಾಯ ಮಾಡುತ್ತದೆ.
-
Find joy in the journey! #RP17 pic.twitter.com/avehPaF2GF
— Rishabh Pant (@RishabhPant17) May 3, 2023 " class="align-text-top noRightClick twitterSection" data="
">Find joy in the journey! #RP17 pic.twitter.com/avehPaF2GF
— Rishabh Pant (@RishabhPant17) May 3, 2023Find joy in the journey! #RP17 pic.twitter.com/avehPaF2GF
— Rishabh Pant (@RishabhPant17) May 3, 2023
ಇದನ್ನೂ ಓದಿ: ಹೆಸರು ಬಳಸದೇ ಗೂಢಾರ್ಥದ ಟ್ವೀಟ್ ಮಾಡಿದ ಗಂಭೀರ್: ಯಾರಿಗೆ ಗೊತ್ತಾ?
ರಿಷಭ್ ಪಂತ್ ಫಿಟ್‌ನೆಸ್ ವರದಿ ಏನು ಹೇಳುತ್ತೆ: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಫಿಟ್‌ನೆಸ್ ವರದಿಯ ಪ್ರಕಾರ, ಅವರು ಈ ವರ್ಷದ ಏಷ್ಯಾ ಕಪ್ ಮತ್ತು 2023ರ ಓಡಿಐ ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ತೋರುತ್ತದೆ. ಆದರೆ, ರಿಷಭ್ ಪಂತ್ ಈ ಎರಡು ದೊಡ್ಡ ಪಂದ್ಯಾವಳಿಯಲ್ಲಿ ಆಡಲು ಆಶಿಸುತ್ತಿದ್ದಾರೆ. ಆದರೆ, ಪಂತ್ ಸಂಪೂರ್ಣ ಗುಣಮುಖರಾಗಿ ಕ್ಷೇತ್ರಕ್ಕೆ ಬರಲು ಇನ್ನೂ ಕನಿಷ್ಠ 8 ತಿಂಗಳು ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ: ರಿಷಭ್ ಪಂತ್ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಈ ವರ್ಷದ ಅಂತ್ಯದ ವೇಳೆಗೆ ಪಂತ್ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತದೆ. ಅದಕ್ಕೂ ಮುನ್ನ ಆಡಲು ಅವರಿಗೆ ಸಾಧ್ಯವಾಗದಿರಬಹುದು. ಅಂದಹಾಗೆ, ರಿಷಭ್ ಪಂತ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್ ಕಾರ್ಯಕ್ರಮವನ್ನೂ ಆರಂಭಿಸಿದ್ದಾರೆ. ಇತ್ತೀಚೆಗೆ ಐಪಿಎಲ್ ಆಡುತ್ತಿರುವ ತಮ್ಮ ತಂಡದ ಆಟಗಾರರನ್ನು ಪ್ರೋತ್ಸಾಹಿಸಲು ಅವರು ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೂ ತೆರಳಿದ್ದರು.
ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳು-ಪೊಲೀಸರ ಮಧ್ಯೆ ಸಂಘರ್ಷ: ಇಬ್ಬರಿಗೆ ಗಾಯ