ಬೆಂಗಳೂರು: 8ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಗೆಲುವಿನ ಅಭಿಯಾನ ಮುಂದುವರೆದಿದ್ದು, ಇಂದಿನ ಪಂದ್ಯದಲ್ಲಿ ಗುಜರಾತ್ ವಿರುದ್ಧ 46-37 ಪಾಯಿಂಟ್ಗಳ ಅಂತರದಿಂದ ಗೆಲುವು ದಾಖಲಿಸಿತು.
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುಜರಾತ್ ವಿರುದ್ಧ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ, ತದನಂತರ ಭರ್ಜರಿ ದಾಳಿ ನಡೆಸಿ ಮೇಲಿಂದ ಮೇಲೆ ಅಂಕ ಗಳಿಕೆ ಮಾಡಿತು. ಈ ಮೂಲಕ ಬೆಂಗಳೂರು ತಂಡ ರೋಚಕ ಗೆಲುವು ದಕ್ಕಿಸಿಕೊಂಡಿತು. ತಂಡ ಇಲ್ಲಿಯವರೆಗೆ ಆಡಿರುವ 10 ಪಂದ್ಯಗಳಿಂದ 38 ಅಂಕಗಳಿಕೆ ಮಾಡಿ, ಮೊದಲ ಸ್ಥಾನದಲ್ಲಿದೆ.
ಇದನ್ನೂ ಓದಿ: ಪೂಜಾರಾ, ರಹಾನೆ ಟೆಸ್ಟ್ ಭವಿಷ್ಯದ ಬಗ್ಗೆ ಚರ್ಚಿಸುವುದು ನನ್ನ ಕೆಲಸವಲ್ಲ: ವಿರಾಟ್ ಕೊಹ್ಲಿ
ಇಂದಿನ ಪಂದ್ಯದಲ್ಲಿ ಬುಲ್ಸ್ 26 ರೈಡ್ ಪಾಯಿಂಟ್ ಗಳಿಸಿದ್ರೆ, ಗುಜರಾತ್ 24 ಪಾಯಿಂಟ್ ಕಲೆ ಹಾಕಿತು. ಉಳಿದಂತೆ ಟ್ಯಾಕಲ್ ಮೂಲಕ 10 ಪಾಯಿಂಟ್, ಆಲ್ಔಟ್ನಲ್ಲಿ 6 ಪಾಯಿಂಟ್ ಗಳಿಕೆ ಮಾಡಿದ್ರೆ, ಹೆಚ್ಚುವರಿಯಾಗಿ 4 ಅಂಕ ಗಳಿಕೆ ಮಾಡಿತು. ತಂಡದ ಪರ ಕ್ಯಾಪ್ಟನ್ ಪವನ್ ಕುಮಾರ್ 19 ಪಾಯಿಂಟ್, ಭರತ್ 9, ಸೌರಭ್ 4 ಪಾಯಿಂಟ್ಗಳಿಸಿದರು.
-
On 🔝 of the 🌏
— ProKabaddi (@ProKabaddi) January 14, 2022 " class="align-text-top noRightClick twitterSection" data="
Pawan and @BengaluruBulls humble the Giants in #GGvBLR to go atop the points table 💪
#SuperhitPanga #vivoProKabaddi pic.twitter.com/6ZggFn5UKW
">On 🔝 of the 🌏
— ProKabaddi (@ProKabaddi) January 14, 2022
Pawan and @BengaluruBulls humble the Giants in #GGvBLR to go atop the points table 💪
#SuperhitPanga #vivoProKabaddi pic.twitter.com/6ZggFn5UKWOn 🔝 of the 🌏
— ProKabaddi (@ProKabaddi) January 14, 2022
Pawan and @BengaluruBulls humble the Giants in #GGvBLR to go atop the points table 💪
#SuperhitPanga #vivoProKabaddi pic.twitter.com/6ZggFn5UKW
ಬೆಂಗಳೂರು ಬುಲ್ಸ್ ಇಲ್ಲಿಯವರೆಗೆ 10 ಪಂದ್ಯಗಳನ್ನಾಡಿದ್ದು, ಈ ಪೈಕಿ 7ರಲ್ಲಿ ಗೆಲುವು ದಾಖಲು ಮಾಡಿದ್ದು, ಎರಡು ಪಂದ್ಯದಲ್ಲಿ ಸೋಲು, ಮತೊಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ.
ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿದ್ದ ಪಾಟ್ನಾ ಪೈರೇಟ್ಸ್ ವಿರುದ್ಧ ಜೈಪುರ್ ತಂಡ 38-29 ಅಂಕಗಳಿಂದ ಗೆದ್ದಿದೆ.