ETV Bharat / sports

ಪುಣೇರಿ ಪಲ್ಟನ್ಸ್​ ವಿರುದ್ಧ ಪಾಟ್ನಾ ಪರೈಟ್ಸ್​ಗೆ ಭರ್ಜರಿ ಜಯ, ಗುಜಾರಾತ್​ ಮಣಿಸಿದ ಡೆಲ್ಲಿ - Fortune Giants

ಪ್ರೋ ಕಬಡ್ಡಿ ಲೀಗ್​ 7ನೇ ಸೀಸನ್​ನಲ್ಲಿ 91 ನೇ ಪಂದ್ಯದಲ್ಲಿ ಗುರಾತ್​ ತಂಡವನ್ನು ದಬಾಂಗ್​ ಡೆಲ್ಲಿ, 92ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್ ತಂಡವನ್ನು ಪಾಟ್ನಾ ಪೈರೇಟ್ಸ್​ ಮಣಿಸಿವೆ.

Patna pairats
author img

By

Published : Sep 15, 2019, 10:48 PM IST

ಪುಣೆ: ಪ್ರೋ ಕಬಡ್ಡಿ ಲೀಗ್​ನ 7ನೇ ಸೀಸನ್​ನಲ್ಲಿ ಪಾಟ್ಟಾ ಪೈರೇಟ್ಸ್​ ಅತಿಥೇಯ ಪುಣೇರಿ ಪಲ್ಟನ್ಸ್​ ವಿರುದ್ಧ 55-33 ಅಂತರದಿಂದ ಭರ್ಜರಿ ಜಯ ಸಾಧಿಸಿದೆ.

ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಪುಣೆ ತಂಡ ಪಾಟ್ನಾ ತಂಡಕ್ಕೆ ಸುಲಭ ತುತ್ತಾಯಿತು. ಮೊದಲಾರ್ಧದಲ್ಲೇ 27-17ರಲ್ಲಿ ಮುನ್ನಡೆ ಕಾಯ್ದುಕೊಂಡ ಪಾಟ್ನಾ ಕೊನೆಯವರೆಗೂ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ ತನ್ನ ಅಂಕವನ್ನು 55 ಕ್ಕೇರಿಸಿಕೊಂಡಿತು.

ಭರ್ಜರಿ ಆಟ ಪ್ರದರ್ಶಸಿದ ಪರ್​ದೀಪ್​ ನರ್ವಾಲ್​ 18 ಅಂಕ ಪಡೆದು ಗೆಲುವಿನ ರೂವಾರಿಯಾದರು. ಡೆಫೆಂಡರ್​ ನೀರಜ್​ ಕುಮಾರ್​ 11 ಅಂಕ ಪಡೆದು ಪುಣೆ ರೈಡರ್​ಗಳನ್ನು ಮಣ್ಣುಮುಕ್ಕಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಹ್ಯಾಡಿ ಒಸ್ಟಾರ್ಕ್​ 5, ಮೋನು 4, ಜಂಗ್​ ಕುಂಗ್​ಲೀ 3,ಜೈದೀಪ್​ 2 ಅಂಕ ಪಡೆದರು.

ಪುಣೆ ಪರ ರೈಡರ್​ ಮಂಜೀತ್​ 8, ಪಂಕಜ್​ 7, ನಿತಿನ್​ 6 ಅಂಕ ಪಡೆದರೆ, ಡಿಫೆಂಡರ್​​ ಸುರ್ಜೀತ್​ 3 ಅಂಕ ಪಡೆದರು.

dabang delhi
ದಬಾಂಗ್​ ಡೆಲ್ಲಿ

ಇದಕ್ಕು ಮುನ್ನ ನಡೆದ ಪಂದ್ಯದಲ್ಲಿ ದಬಾಂಗ್​ ಡೆಲ್ಲಿ 34-30 ರಲ್ಲಿ ಗುಜರಾತ್​ ಫಾರ್ಚುನ್ ಜೇಂಟ್ಸ್​ ತಂಡವನ್ನು​ ಮಣಿಸಿ ಅಗ್ರಸ್ಥಾನ ಕಾಯ್ದುಕೊಂಡಿತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.