ನ್ಯೂಯಾರ್ಕ್: ವಿಶ್ವದ ಅಗ್ರಮಾನ್ಯ ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಹೊಸ ಇತಿಹಾಸ ನಿರ್ಮಿಸಿದರು. ಆಧುನಿಕ ಟೆನಿಸ್ ಜಗತ್ತಿನಲ್ಲಿ ವಿಶ್ವ ದಾಖಲೆಯ 24ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಮೂಲಕ ಟೆನಿಸ್ ಲೋಕದ ಅಧಿಪತಿಯಾಗಿದ್ದಾರೆ. ನಿನ್ನೆ (ಭಾನುವಾರ) ರಾತ್ರಿ ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ರಷ್ಯಾದ ಆಟಗಾರ ಡ್ಯಾನಿಲ್ ಮೆಡ್ವೆಡೇವ್ ಅವರನ್ನು ನೇರ ಸೆಟ್‌ಗಳ ಅಂತರದಲ್ಲಿ ಸೋಲಿಸಿದ ನೊವಾಕ್ ಯುಎಸ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
-
What a tournament.
— US Open Tennis (@usopen) September 11, 2023 " class="align-text-top noRightClick twitterSection" data="
The last day was as good as it gets. pic.twitter.com/rdCDb5yCop
">What a tournament.
— US Open Tennis (@usopen) September 11, 2023
The last day was as good as it gets. pic.twitter.com/rdCDb5yCopWhat a tournament.
— US Open Tennis (@usopen) September 11, 2023
The last day was as good as it gets. pic.twitter.com/rdCDb5yCop
ಸೇಡು ತೀರಿಸಿಕೊಂಡ ನೊವಾಕ್: ಕಳೆದ 2 ವರ್ಷಗಳ ಹಿಂದೆ ಡ್ಯಾನಿಲ್ ಮೆಡ್ವೆಡೇವ್ ಎದುರು ಇದೇ ಕ್ರೀಡಾಂಗಣದಲ್ಲಿ ಯುಎಸ್ ಓಪನ್ ಫೈನಲ್ ಸೋತಿದ್ದ ಜೊಕೊವಿಕ್ ಇದೀಗ ಸೇಡು ತೀರಿಸಿಕೊಂಡಿದ್ದಾರೆ. 36 ವರ್ಷದ ಚಾಂಪಿಯನ್ ಆಟಗಾರ ನೊವಾಕ್ 6-3, 7-6(7/5), 6-3 ಅಂತರದ ನೇರ ಸೆಟ್‌ಗಳಿಂದ 27 ವರ್ಷದ ಆಟಗಾರ ಮೆಡ್ವೆಡೇವ್ ಅವರನ್ನು ಮಣಿಸಿ 2023ರ ಸಾಲಿನ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು.
ಮಾರ್ಗರೆಟ್ ಕೋರ್ಟ್ ದಾಖಲೆ ಸರಿಗಟ್ಟಿದ ದಿಗ್ಗಜ: ಜೊಕೊವಿಕ್ ಅತ್ಯಂತ ಶ್ರೇಷ್ಠ ಟಿನಿಸ್ ಸಿಂಗಲ್ಸ್ ಪ್ರಶಸ್ತಿಗಳ ದಂತಕಥೆ ಮಾರ್ಗರೆಟ್ ಕೋರ್ಟ್ ಅವರ ದಾಖಲೆ ಸರಿಗಟ್ಟಿದರು. ಇದಲ್ಲದೇ ಜೊಕೊವಿಕ್ ಓಪನ್ ಯುಗದಲ್ಲಿ ಅತ್ಯಂತ ಹಿರಿಯ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ಎನಿಸಿಕೊಂಡಿದ್ದಾರೆ. 3 ಗಂಟೆ 16 ನಿಮಿಷಗಳ ಕಾಲ ನಡೆದ ಈ ಸೆಣಸಾಟದಲ್ಲಿ ಸರ್ಬಿಯಾದ ದಂತಕಥೆ ತನ್ನ ವೃತ್ತಿಜೀವನದ 36ನೇ ಫೈನಲ್‌ನಲ್ಲಿ ಆಡಿ 24ನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದು ಸ್ಮರಣೀಯ ಸಾಧನೆ ತೋರಿದರು.
-
What a tournament.
— US Open Tennis (@usopen) September 11, 2023 " class="align-text-top noRightClick twitterSection" data="
The last day was as good as it gets. pic.twitter.com/rdCDb5yCop
">What a tournament.
— US Open Tennis (@usopen) September 11, 2023
The last day was as good as it gets. pic.twitter.com/rdCDb5yCopWhat a tournament.
— US Open Tennis (@usopen) September 11, 2023
The last day was as good as it gets. pic.twitter.com/rdCDb5yCop
ತನ್ನ 10ನೇ ಯುಎಸ್ ಓಪನ್ ಫೈನಲ್‌ನಲ್ಲಿ ಆಡಿದ ಜೊಕೊವಿಕ್ ಆರಂಭದಲ್ಲಿ 3-0 ಮುನ್ನಡೆ ಸಾಧಿಸಿ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಇದಾದ ಬಳಿಕ ಅನುಭವಿ ಆಟಗಾರ ಹಿಂತಿರುಗಿ ನೋಡಲಿಲ್ಲ. 48 ನಿಮಿಷಗಳಲ್ಲಿ ಮೊದಲ ಸೆಟ್ ಕೊನೆಗೊಳಿಸಿದರು. 2ನೇ ಸೆಟ್‌ನಲ್ಲಿ ಅತ್ಯಂತ ಜಿದ್ದಾಜಿದ್ದಿನ ಹಣಾಹಣಿ ಕಂಡುಬಂತು. ಕೊನೆಯ ಸೆಟ್ ಕೂಡ ಜೊಕೊವಿಕ್ ವಶಕ್ಕೆ ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಐತಿಹಾಸಿಕ 24ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಬಳಿಕ ಮಾತನಾಡಿದ ಜೊಕೊವಿಕ್, "ಈ ಕ್ರೀಡೆಯಲ್ಲಿ ನೂತನ ಇತಿಹಾಸ ರಚನೆ ಮಾಡಿರುವುದು ನಿಜಕ್ಕೂ ವಿಶೇಷ ಹಾಗೂ ಅದ್ಭುತ ಅನುಭವ. ಖಂಡಿತವಾಗಿಯೂ ಇದು ವಿಶೇಷವಾದ ಗೆಲುವು. ಈ ಗೆಲುವನ್ನು ವರ್ಣಿಸಲು ಪದಗಳಿಂದ ಸಾಧ್ಯವಾಗದು. ನಾನು ಇಲ್ಲಿ ನಿಂತು 24 ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದ ಬಗ್ಗೆ ಮಾತನಾಡುತ್ತೇನೆ ಎಂದು ಯಾವತ್ತೂ ಊಹೆ ಮಾಡಿರಲಿಲ್ಲ. ಇದು ನಿಜವಾಗಲಿದೆ ಎಂಬ ನಿರೀಕ್ಷೆ ಇರಲಿಲ್ಲ" ಎಂದು ಹರ್ಷ ವ್ಯಕ್ತಪಡಿಸಿದರು.
ಯುಎಸ್ ಓಪನ್ 2023- ಪ್ರಮುಖಾಂಶಗಳು:
- ಅಮೆರಿಕ ಓಪನ್ 2023 ಟೂರ್ನಿಯ ಫೈನಲ್ ಪಂದ್ಯದಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ರನ್ನರ್ ಅಪ್.
- ಐದು ವರ್ಷಗಳ ಬಳಿಕ ಯುಎಸ್ ಓಪನ್ ಕಿರೀಟ ಗೆದ್ದ ಸರ್ಬಿಯಾದ ದಿಗ್ಗಜ ನೊವಾಕ್ ಜೊಕೊವಿಕ್.
- ಯುಎಸ್ ಓಪನ್ ವಿಜಯದೊಂದಿಗೆ ವಿಶ್ವ ದಾಖಲೆಯ 24ನೇ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ ಮುಡಿಗೇರಿಸಿಕೊಂಡ ಸರ್ಬಿಯಾದ ದಿಗ್ಗಜ.
ಇದನ್ನೂ ಓದಿ: US Open: ಹಾಲಿ ಚಾಂಪಿಯನ್ ಅಲ್ಕಾರಾಜ್ ಮಣಿಸಿದ ಮೆಡ್ವೆಡೆವ್: ಜೊಕೊವಿಕ್ ಜೊತೆಗೆ ಫೈನಲ್‌ನಲ್ಲಿ ಹಣಾಹಣಿ