ETV Bharat / sports

ನಿಮಗೆ ಬೇಕಾದ ಬೆಂಬಲ ಕೊಡ್ತೀವಿ, ಬೇರೆ ದೇಶಗಳ ಪ್ರೋಟೋಕೋಲ್ ಮುರಿಯಬೇಡಿ : ಅಥ್ಲೀಟ್​ಗಳಿಗೆ ರಿಜಿಜು ಎಚ್ಚರಿಕೆ

author img

By

Published : May 11, 2021, 4:39 PM IST

ಎರಡು ದಿನಗಳ ಹಿಂದೆ ಎಎಫ್​ಸಿ ಕಪ್​ನಲ್ಲಿ ಭಾಗವಹಿಸಿಲು ತೆರಳಿದ್ದ ವೇಳೆ ಬೆಂಗಳೂರು ಎಫ್​ಸಿ ಮಾಲ್ಡೀವ್ಸ್​ನ ಕೋವಿಡ್​ ಮಾರ್ಗಸೂಚಿಗಳನ್ನು ಬ್ರೇಕ್​ ಮಾಡಿತ್ತೆಂದು ಅಲ್ಲಿನ ಕ್ರೀಡಾ ಸಚಿವ ಅಹ್ಮದ್ ಮಹ್ಲೂಫ್​ ಆರೋಪ ಮಾಡಿದ್ದರು. ಅಲ್ಲದೆ ತಕ್ಷಣವೇ ದೇಶವನ್ನು ತೊರೆಯುವಂತೆ ಸೂಚನೆ ನೀಡಿದ್ದರು..

ಕಿರಣ್ ರಿಜಿಜು
ಕಿರಣ್ ರಿಜಿಜು

ನವದೆಹಲಿ : ಬೇರೆ ದೇಶಗಳಿಗೆ ತರಬೇತಿ ಮತ್ತು ಸ್ಪರ್ಧೆಗಳಿಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸದಿರಿ ಎಂದು ಭಾರತೀಯ ಕ್ರೀಡಾಪಟುಗಳಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಎಚ್ಚರಿಕೆ ನೀಡಿದ್ದಾರೆ.

ಇಂದು ಕ್ರೊವೇಷ್ಯಾಗೆ ತೆರಳಿದ ಭಾರತದ ಒಲಿಂಪಿಕ್ ಬೌಂಡ್ ಶೂಟರ್​ಗಳಿಗೆ ಶುಭ ಹಾರೈಸಿದ ರಿಜಿಜು, ಈ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಪ್ರಯಾಣ ಸುರಕ್ಷಿತವಾಗಿರಲಿ, ಯಾವುದೇ ಕಾರಣಕ್ಕೂ ಬೇರೆ ದೇಶಗಳ ಕೋವಿಡ್​ ಪ್ರೋಟೋಕಾಲ್​ಗಳನ್ನು ಮುರಿಯದಿರಿ. ತರಬೇತಿಯ ಕಡೆಗೆ ಹೆಚ್ಚಿನ ಗಮನ ನೀಡಿ, ಸುತಕ್ಷಿತವಾಗಿರಿ.

ನಮ್ಮ ಆಥ್ಲೀಟ್​ಗಳಿಗೆ ಮತ್ತು ಕೋಚ್​ಗಳಿಗೆ ಅಗತ್ಯವಾದ ಬೆಂಬಲವನ್ನು ನಾವು ಒದಗಿಸಿಕೊಡುತ್ತೇವೆ. ಶುಭವಾಗಲಿ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.

ಎರಡು ದಿನಗಳ ಹಿಂದೆ ಎಎಫ್​ಸಿ ಕಪ್​ನಲ್ಲಿ ಭಾಗವಹಿಸಿಲು ತೆರಳಿದ್ದ ವೇಳೆ ಬೆಂಗಳೂರು ಎಫ್​ಸಿ ಮಾಲ್ಡೀವ್ಸ್​ನ ಕೋವಿಡ್​ ಮಾರ್ಗಸೂಚಿಗಳನ್ನು ಬ್ರೇಕ್​ ಮಾಡಿತ್ತೆಂದು ಅಲ್ಲಿನ ಕ್ರೀಡಾ ಸಚಿವ ಅಹ್ಮದ್ ಮಹ್ಲೂಫ್​ ಆರೋಪ ಮಾಡಿದ್ದರು.

ಅಲ್ಲದೆ ತಕ್ಷಣವೇ ದೇಶವನ್ನು ತೊರೆಯುವಂತೆ ಸೂಚನೆ ನೀಡಿದ್ದರು. ಅದಕ್ಕಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುನ್ನವೇ ರಿಜಿಜು ಶೂಟರ್​ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಬಿಎಫ್​ಸಿ ಆಟಗಾರರು ಕ್ವಾರಂಟೈನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಾಲೆ ರಸ್ತೆಯಲ್ಲಿ ಪೋಟೋಗಳನ್ನು ತೆಗೆದುಕೊಂಡಿದ್ದರು. ಇದನ್ನು ಮಹ್ಲೂಫ್ ಸ್ವೀಕಾರಾರ್ಹವಲ್ಲ ಎಂದು ಆರೋಪಿಸಿದ್ದರು.

ಇದನ್ನು ಓದಿ:ಭಾರತದ ಮೇಲೆ ನನಗೆ ತುಂಬಾ ಪ್ರೀತಿ, ಅಲ್ಲಿನ ಜನ ಸುರಕ್ಷಿತವಾಗಿರಬೇಕು.. ಹಿಂದಿಯಲ್ಲಿ ಟ್ವೀಟ್​ ಮಾಡಿ ಪ್ರಾರ್ಥಿಸಿದ ಪೀಟರ್ಸನ್..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.