ಚಂಡೀಗಢ: ಭಾರತೀಯ ಓಟಗಾರ ಮಿಲ್ಖಾ ಸಿಂಗ್ ಜ್ವರದಿಂದ ಬಳಲುತ್ತಿದ್ದು, ಅವರ ಆಮ್ಲಜನಕ ಮಟ್ಟವೂ ಕುಸಿದಿದೆ. ಕೋವಿಡ್-19ಗೆ ತುತ್ತಾಗಿರುವ ಅವರು ಚಂಡೀಗಢದ ಪಿಜಿಐಎಂಆರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಐಸಿಯುಗೆ ಸ್ಥಳಾಂತರಿಸಿದ ಬಳಿಕ 91 ವರ್ಷದ ಮಿಲ್ಖಾ ಸಿಂಗ್ ಅವರನ್ನು ವೈದ್ಯರ ತಂಡ ಸೂಕ್ಷ್ಮವಾಗಿ ಗಮನಿಸುತ್ತಿದೆ. "ಅವರಿಗೆ ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ಜ್ವರ ಬಂದು ಅವರ ಆಮ್ಲಜನಕದ ಮಟ್ಟವೂ ಕಡಿಮೆಯಾಗಿದೆ. ವೈದ್ಯರ ತಂಡವು ಅವರ ಮೇಲೆ ನಿಗಾ ವಹಿಸುತ್ತಿದೆ" ಎಂದು ಪಿಜಿಐಎಂಆರ್ ಮೂಲಗಳು ಶುಕ್ರವಾರ ತಿಳಿಸಿವೆ.
ಮಿಲ್ಖಾ ಅವರ ಆರೋಗ್ಯ ಇದಕ್ಕೂ ಮೊದಲು ಸ್ಥಿರವಾಗಿತ್ತು. ಇದೀಗ ಆರೋಗ್ಯ ಸ್ಥಿತಿಯಲ್ಲಿ ಬದಲಾವಣೆಯಾಗಿದೆ.