ETV Bharat / sports

ಸೆಮೀಸ್​ಗೆ ಲಗ್ಗೆ ಇಟ್ಟ ಮೇರಿ ಕೋಮ್​... ಇತಿಹಾಸ ನಿರ್ಮಾಣಕ್ಕೆ ಎರಡು ಪಂಚ್ ಬಾಕಿ..! - ವಿಶ್ವ ಚಾಂಪಿಯನ್ ಮೇರಿಕೋಮ್

6 ಬಾರಿ ವಿಶ್ವ ಚಾಂಪಿಯನ್​ ಆಗಿರುವ ಮೇರಿಕೋಮ್​ ಗುರುವಾರದಂದು ನಡೆದ ಕ್ವಾರ್ಟರ್​ಫೈನಲ್​ನಲ್ಲಿ ಕೊಲಂಬಿಯಾದ ವಲೆನ್ಸಿಯಾ ವಿಕ್ಟೋರಿಯಾರನ್ನು 5-0 ರಿಂದ ಮಣಿಸುವ ಮೂಲಕ ಸೆಮಿಫೈನಲ್​​ ಪ್ರವೇಶಿಸಿದ್ದಾರೆ.

ಮೇರಿ ಕೋಮ್
author img

By

Published : Oct 10, 2019, 12:07 PM IST

ಉಲಾನ್​-ಉದೆ(ರಷ್ಯಾ)​: ಭಾರತದ ಸ್ಟಾರ್​ ಮಹಿಳಾ ಬಾಕ್ಸರ್​ ಮೇರಿ ಕೋಮ್​ ಮಹಿಳೆಯರ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಸೆಮೀಸ್​ಗೆ ಲಗ್ಗೆ ಇಟ್ಟಿದ್ದು, ಈ ಮೂಲಕ ಪದಕವನ್ನು ಖಾತ್ರಿ ಪಡಿಸಿಕೊಂಡಿದ್ದಾರೆ.

6 ಬಾರಿ ವಿಶ್ವ ಚಾಂಪಿಯನ್​ ಆಗಿರುವ ಮೇರಿಕೋಮ್​ ಗುರುವಾರದಂದು ನಡೆದ ಕ್ವಾರ್ಟರ್​ಫೈನಲ್​ನಲ್ಲಿ ಕೊಲಂಬಿಯಾದ ವಲೆನ್ಸಿಯಾ ವಿಕ್ಟೋರಿಯಾರನ್ನು 5-0 ದಿಂದ ಮಣಿಸುವ ಮೂಲಕ ಸೆಮಿಫೈನಲ್​​ ಪ್ರವೇಶಿಸಿದ್ದಾರೆ.

Mary Kom
ಕ್ವಾರ್ಟರ್ ಫೈನಲ್​ ಗೆದ್ದ ಮೇರಿ ಕೋಮ್

ಅ.12ರಂದು ನಡೆಯುವ ಸೆಮಿಫೈನಲ್​ನಲ್ಲಿ ಮೇರಿ ಕೋಮ್ ಟರ್ಕಿಯ ಬುಸೆನಾಜ್​ ಕಕಿರೋಗ್ಲುರನ್ನು ಎದುರಿಸಲಿದ್ದಾರೆ.

ಈ ಟೂರ್ನಿಗೂ ಮುನ್ನ 48 ಕೆ.ಜಿ ವಿಭಾಗದಲ್ಲಿ ಮೇರಿ ಕೋಮ್​​ ಆರು ಚಿನ್ನದ ಪದಕ ಹಾಗೂ ಏಕೈಕ ಬೆಳ್ಳಿ ಪದಕವನ್ನು ಗೆದ್ದಿದ್ದರು. ಆದರೆ ಸದ್ಯ 51 ಕೆ.ಜಿ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಪದಕ ಸನಿಹ ಬಂದಿದ್ದಾರೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ.

51 ಕೆ.ಜಿ ವಿಭಾಗದಲ್ಲಿ ಮೇರಿ ಕೋಮ್​​​ ಪ್ರಥಮ ಬಾರಿಗೆ ಸ್ಪರ್ಧಿಸುತ್ತಿದ್ದು, 2020ರ ಒಲಿಂಪಿಕ್​ಗೆ ಅರ್ಹತೆಗಿಟ್ಟಿಸಿಕೊಳ್ಳುವ ಹಂಬಲದಲ್ಲಿದ್ದಾರೆ.

Intro:Body:

ಸೆಮೀಸ್​ಗೆ ಲಗ್ಗೆ ಇಟ್ಟ ಮೇರಿ ಕೋಮ್​... ಇತಿಹಾಸ ನಿರ್ಮಾಣಕ್ಕೆ ಎರಡು ಪಂಚ್ ಬಾಕಿ

ಉಲಾನ್​-ಉದೆ(ರಷ್ಯಾ)​: ಭಾರತದ ಸ್ಟಾರ್​ ಮಹಿಳಾ ಬಾಕ್ಸರ್​ ಮೇರಿ ಕೋಮ್​ ಮಹಿಳೆಯರ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಸೆಮೀಸ್​ಗೆ ಲಗ್ಗೆ ಇಟ್ಟಿದ್ದು, ಈ ಮೂಲಕ ಪದಕವನ್ನು ಖಾತ್ರಿಪಡಿಸಿಕೊಂಡಿದ್ದಾರೆ.

6 ಬಾರಿ ವಿಶ್ವ ಚಾಂಪಿಯನ್​ ಆಗಿರುವ ಮೇರಿಕೋಮ್​  ಗುರುವಾರದಂದು ನಡೆದ ಕ್ವಾರ್ಟರ್​ಫೈನಲ್​ನಲ್ಲಿ ಕೊಲಂಬಿಯಾದ ವಲೆನ್ಸಿಯಾ ವಿಕ್ಟೋರಿಯಾರನ್ನು 5-0ರಿಂದ ಮಣಿಸುವ ಮೂಲಕ ಸೆಮಿಫೈನಲ್​​ ಪ್ರವೇಶಿಸಿದ್ದಾರೆ.

ಈ ಟೂರ್ನಿಗೂ ಮುನ್ನ 48 ಕೆ.ಜಿ ವಿಭಾಗದಲ್ಲಿ ಮೇರಿ ಕೋಮ್​​ ಆರು ಚಿನ್ನದ ಪದಕ ಹಾಗೂ ಏಕೈಕ ಬೆಳ್ಳಿ ಪದಕವನ್ನು ಗೆದ್ದಿದ್ದರು. ಆದರೆ ಸದ್ಯ 51 ಕೆ.ಜಿ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಪದಕ ಸನಿಹ ಬಂದಿದ್ದಾರೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ.

51 ಕೆ.ಜಿ ವಿಭಾಗದಲ್ಲಿ ಮೇರಿ ಕೋಮ್​​​ ಪ್ರಥಮಬಾರಿಗೆ ಸ್ಪರ್ಧಿಸುತ್ತಿದ್ದು 2020ರ ಒಲಿಂಪಿಕ್​ಗೆ ಅರ್ಹತೆಗಿಟ್ಟಿಸಿಕೊಳ್ಳುವ ಹಂಬಲದಲ್ಲಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.