ETV Bharat / sports

ಥಾಯ್ಲೆಂಡ್​ನ 21 ವರ್ಷದ ಯುವ ಬಾಕ್ಸರ್​ ಮಣಿಸಿದ ಭಾರತದ ಸ್ಟಾರ್​ ಬಾಕ್ಸರ್​ ಮೇರಿಕೋಮ್..

author img

By

Published : Oct 8, 2019, 7:23 PM IST

6 ಬಾರಿ ವಿಶ್ವ ಚಾಂಪಿಯನ್​ ಆಗಿರುವ ಮೇರಿಕೋಮ್​ 21 ವರ್ಷದ ಥಾಯ್ಲೆಂಡ್​ನ ಜುತಾಮಸ್​ ಜಿತ್​ಪಾಂಗ್‌ರನ್ನು 5-0 ಅಂಕಗಳಿಂದ ನಿರಾಯಾಸವಾಗಿ ಮಣಿಸಿದರು.

Mary Kom

ಉಲಾನ್​-ಉದೆ(ರಷ್ಯಾ)​: ಭಾರತದ ಸ್ಟಾರ್​ ಮಹಿಳಾ ಬಾಕ್ಸರ್​ ಮೇರಿ ಕೋಮ್​ ಮಹಿಳೆಯರ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

6 ಬಾರಿ ವಿಶ್ವ ಚಾಂಪಿಯನ್​ ಆಗಿರುವ ಮೇರಿಕೋಮ್​ 21 ವರ್ಷದ ಥಾಯ್ಲೆಂಡ್​ನ ಜುತಾಮಸ್​ ಜಿತ್​ಪಾಂಗ್‌ರನ್ನು 5-0 ಅಂಕಗಳಿಂದ ನಿರಾಯಾಸವಾಗಿ ಮಣಿಸಿ ಕ್ವಾರ್ಟರ್​ಗೆ ಎಂಟ್ರಿಕೊಟ್ಟಿದ್ದಾರೆ. 36 ವರ್ಷದ ಮೇರಿ ಕೋಮ್​ ಹಿಂದಿನ 6 ಬಾರಿ ಚಾಂಪಿಯನ್​ ಆದಾಗ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದರೆ, ಈ ಬಾರಿ 51 ಕೆಜಿ ವಿಭಾಗದಲ್ಲಿ ಪ್ರಥಮಬಾರಿಗೆ ಸ್ಪರ್ಧಿಸುತ್ತಿದ್ದು 2020ರ ಒಲಿಂಪಿಕ್​ಗೆ ಅರ್ಹತೆಗಿಟ್ಟಿಸಿಕೊಳ್ಳುವ ಹಂಬಲದಲ್ಲಿದ್ದಾರೆ.

ಬಾಕ್ಸಿಂಗ್​ನಲ್ಲಿ ಮೇರಿಗಿರುವ ಅನುಭವದ ಆಧಾರದ ಮೇಲೆ 51ಕೆಜಿ ವಿಭಾಗ ಫ್ಲೈಟ್​ವೇಟ್​ ವಿಭಾಗದಲ್ಲಿ ವಿಶ್ವಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಸ್ಪರ್ಧಿಸಲು ಇಂಡಿಯನ್​ ಬಾಕ್ಸಿಂಗ್​ ಫೆಡೆರೇಷನ್ ಅನುಮತಿ ನೀಡಿತ್ತು. 75ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮತ್ತೊಬ್ಬ ಬಾಕ್ಸರ್​ ಸವೀತಿ ಬೂರ ತಮ್ಮ ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.