ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ ಬಹು ನಿರೀಕ್ಷಿತ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20ಯಲ್ಲಿ ಅಗ್ರ ಗೌರವಕ್ಕಾಗಿ ಸೆಣಸಾಡುವ 6 ತಂಡಗಳಿಗೆ 'ಮಹಾ ಡ್ರಾಫ್ಟ್' ಮೂಲಕ ಆಟಗಾರರನ್ನು ಆಯ್ಕೆ ಮಾಡಲಾಯಿತು. ಆಗಸ್ಟ್ 7 ರಿಂದ ಮೈಸೂರಿನಲ್ಲಿ ಪಂದ್ಯ ಪ್ರಾರಂಭವಾಗಲಿದೆ.
ಆಟಗಾರರ ಹರಾಜಿಗಿಂತ ಭಿನ್ನವಾಗಿ ಮೊದಲು ತಂಡದ ಪ್ರಾಯೋಜಕರು, ಕೋಚಿಂಗ್ ಸಿಬ್ಬಂದಿಯನ್ನು ಡ್ರಾಫ್ಟ್ ಸಿಸ್ಟಮ್ ಮೂಲಕ ಆಯ್ಕೆ ಮಾಡಿದರು. ನಂತರ ಕೋಚಿಂಗ್ ಸಿಬ್ಬಂದಿ ತಮ್ಮ ತಂಡಗಳಿಗೆ ಎ, ಬಿ, ಸಿ ಮತ್ತು ಡಿ ವರ್ಗದ ಆಟಗಾರರನ್ನು ಆಯ್ಕೆ ಮಾಡುವ ಜವಾಬ್ದಾರಿ ವಹಿಸಿಕೊಂಡರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಡ್ರಾಫ್ಟ್ ಆಯ್ಕೆಯಲ್ಲಿ ಖ್ಯಾತ ಕ್ರಿಕೆಟಿಗ ಮತ್ತು ಕೆ.ಎಸ್.ಸಿ.ಎ ಅಧ್ಯಕ್ಷ ರೋಜರ್ ಬಿನ್ನಿ, ಗೌರವ ಉಪಾಧ್ಯಕ್ಷ ಜೆ.ಅಭಿರಾಮ್, ಗೌರವ ಕಾರ್ಯದರ್ಶಿ ಸಂತೋಷ್ ಮೆನನ್, ಗೌರವ ಕಾರ್ಯದರ್ಶಿ ಶವೀರ್ ತಾರಾಪೋರ್ ಖಜಾಂಚಿ ವಿನಯ್ ಮೃತ್ಯುಂಜಯ ಉಪಸ್ಥಿತರಿದ್ದರು.
ಡ್ರಾಫ್ಟ್ ಪ್ರಕ್ರಿಯೆ: ಮಹಾ ಡ್ರಾ ಕೆಲವು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ವಿಶೇಷವಾಗಿ ಭಾರತಕ್ಕಾಗಿ ಮತ್ತು ಐಪಿಎಲ್ ಆಡಿದ ಎ ವರ್ಗದ ಆಟಗಾರರನ್ನು ಒಳಗೊಂಡ ಸುತ್ತು ಪ್ರಾರಂಭವಾಯಿತು. ಮೊದಲು ಮೈಸೂರು ವಾರಿಯರ್ಸ್ ಕರುಣ್ ನಾಯರ್ ಹೆಸರು ಕರೆಯುವುದರೊಂದಿಗೆ 'ಮಹಾ ಡ್ರಾಫ್ಟ್' ಪ್ರಕ್ರಿಯೆಯು ಪ್ರಾರಂಭವಾಯಿತು.
ಆಟಗಾರರ ಆಯ್ಕೆ: ಮನೀಶ್ ಪಾಂಡೆ ಗುಲ್ಬರ್ಗಾ ಮಿಸ್ಟಿಕ್ಸ್ ಪಾಲಾದರು. ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದ್ರೆ, ಶಿವಮೊಗ್ಗ ಸ್ಟ್ರೈಕರ್ಸ್ ಪಾಲಿಗೆ ಆಲ್ ರೌಂಡರ್ ಕೆ. ಗೌತಮ್ ಲಭ್ಯವಾದರು. ಮಂಗಳೂರು ಯುನೈಟೆಡ್ಗೆ ಅಭಿನವ್ ಮನೋಹರ್ ಆಯ್ಕೆಯಾದರೆ, ಅಭಿಮನ್ಯು ಮಿಥುನ್ ಹುಬ್ಬಳ್ಳಿ ತಂಡ ಸೇರಿದರು.
ಸಂಭಾವನೆ: ಎ ವರ್ಗದಲ್ಲಿ ಭಾರತ ತಂಡ ಪ್ರತಿನಿಧಿಸಿದ ಮತ್ತು ಐಪಿಎಲ್ ಆಟಗಾರರಿಗೆ 5 ಲಕ್ಷ ರೂ ಸಂಭಾವನೆಯಾದರೆ, ಬಿ ವರ್ಗದಲ್ಲಿ ರಣಜಿ ಟ್ರೋಫಿ/ ವಿಜಯ್ ಹಜಾರೆ ಟ್ರೋಫಿ / ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಭಾಗವಹಿಸಿದ ರಾಜ್ಯದ ಆಟಗಾರರನ್ನು ಒಳಗೊಂಡಿದೆ ಮತ್ತು 2 ಲಕ್ಷದ ಸಂಭಾವನೆ ಇರಲಿದೆ.
ಯಾವ ಯಾವ ವರ್ಗದಲ್ಲಿ ಎಷ್ಟು ಆಟಗಾರರು: ಅಂಡರ್ 19 ಪಂದ್ಯಾವಳಿಗಳ ಭಾಗವಾಗಿದ್ದ ಆಟಗಾರರು 1 ಲಕ್ಷ ರೂ ಸಂಭಾವನೆ ಪಡೆದು ಸಿ ವರ್ಗದಲ್ಲಿದ್ದಾರೆ. ಡಿ ವರ್ಗದ ಆಟಗಾರರು 50 ಸಾವಿರ ಪಡೆಯಲಿದ್ದಾರೆ. ಒಟ್ಟು ಡ್ರಾಫ್ಟ್ ನಲ್ಲಿ 740 ಆಟಗಾರರು ಕಾಣಿಸಿಕೊಂಡಿದ್ದರು. ಎ ವರ್ಗದಲ್ಲಿ 14 ಆಟಗಾರರು, ಬಿ ವರ್ಗದಲ್ಲಿ 32 ಆಟಗಾರರು, ಸಿ ಕೆಟಗರಿಯಲ್ಲಿ 111 ಆಟಗಾರರಿದ್ದರು. ಡಿ ವರ್ಗದಲ್ಲಿ 583 ಆಟಗಾರರಿದ್ದಾರೆ.
ಒಂದೊಂದು ತಂಡದಲ್ಲಿ 18 ಆಟಗಾರರು: "ಇದು ಸಾಕಷ್ಟು ಆಸಕ್ತಿದಾಯಕ ಡ್ರಾ ಆಗಿತ್ತು. ನಾವು ಈಗಾಗಲೇ ಆರು ಮುಖ್ಯ ತರಬೇತುದಾರರನ್ನು ಆಯ್ಕೆ ಮಾಡಿದ್ದೆವು. ಒಬ್ಬ ರಾಜ್ಯ ಆಯ್ಕೆಗಾರರು ಸೇರಿದಂತೆ ಬೆಂಬಲ ಸಿಬ್ಬಂದಿಯ ತಂಡದೊಂದಿಗೆ ಪ್ರಾರಂಭಿಸಿದ್ದೆವು. ನಾವು ಸಾಕಷ್ಟು ಚೆನ್ನಾಗಿ ಸಿದ್ಧರಾಗಿ ಹಾಗು ಉತ್ತಮ ಸ್ಟಾಟರ್ಜಿ ಯೊಂದಿಗೆ ಬಂದಿದ್ದೆವು. ಪ್ರತಿ ತಂಡ ಈಗ 18 ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ ಮತ್ತು ಆಯ್ಕೆಯ ಮಾನದಂಡದ ಆಧಾರದ ಮೇಲೆ ಕಡ್ಡಾಯವಾಗಿ ಇಬ್ಬರು ಆಟಗಾರರನ್ನು ಅವರವರ ಪ್ರದೇಶದಿಂದ ಆಯ್ಕೆ ಮಾಡಲಾಗುವುದು. ಪಂದ್ಯಾ ಆರಂಭಕ್ಕೆ ಕೇವಲ ಒಂದು ವಾರ ಬಾಕಿ ಉಳಿದಿದ್ದು, ಖಂಡಿತವಾಗಿಯೂ ಸಾಕಷ್ಟು ಉತ್ಸಾಹ ಕಂಡುಬರುತ್ತಿದೆ" ಎಂದು ಕೆ.ಎಸ್.ಸಿ.ಎ ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದರು.
ತಂಡಗಳು ಹೀಗಿವೆ:
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್: ನಜೀರುದ್ದೀನ್ ಟಿ (ಕೋಚ್), ಪವನ್ ಕೆ.ಬಿ. (ಸಹಾಯಕ ಕೋಚ್), ರಗೋತಮ್ ನವ್ಲಿ (ಆಯ್ಕೆಗಾರ), ಪ್ರದೀಪ್ ಕುಮಾರ್ ಎನ್ (ವಿಡಿಯೋ ವಿಶ್ಲೇಷಕ).
ಆಯ್ಕೆಯಾದವರು: ಮಯಾಂಕ್ ಅಗರ್ವಾಲ್, ಸುಚಿತ್ ಜೆ, ಅನಿರುಧಾ ಜೋಶಿ, ಪ್ರದೀಪ್ ಟಿ, ಕ್ರಾಂತಿ ಕುಮಾರ್, ಚೇತನ್ ಎಲ್.ಆರ್, ಅನೀಶ್ ಕೆವಿ, ಕುಮಾರ್ ಎಲ್ಆರ್, ರಕ್ಷಿತ್ ಎಸ್, ರಿಷಿ ಬೋಪಣ್ಣ, ಸಂತೋಕ್ ಸಿಂಗ್, ಸೂರಜ್ ಅಹುಜಾ (ವಿಕೆಟ್ ಕೀಪರ್), ಪಿ ಗುರ್ಬಕ್ಸ್ ಆರ್ಯ, ಲೋಚನ್ ಗೌಡ, ರೋನಿತ್ ಮೋರ್, ಶಾನ್ ಟ್ರಿಸ್ಟಾನ್ ಜೋಸೆಫ್, ಕುಶ್ ಮರಾಟೆ, ತನಯ್ ವಾಲ್ಮಿಕ್.
ಹುಬ್ಬಳ್ಳಿ ಟೈಗರ್ಸ್: ದೀಪಕ್ ಚೌಗ್ಲೆ (ಕೋಚ್), ರಾಜು ಭಟ್ಕಳ್ (ಸಹಾಯಕ ಕೋಚ್), ಆನಂದ್ ಕತ್ತಿ (ಆಯ್ಕೆಗಾರ), ಶಶಿಕುಮಾರ್ (ವಿಡಿಯೋ ವಿಶ್ಲೇಷಕ).
ಆಯ್ಕೆಯಾದ ಆಟಗಾರರು: ಅಭಿಮನ್ಯು ಮಿಥುನ್, ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಕೌಶಿಕ್ ವಿ, ಲಿಯಾನ್ ಖಾನ್, ನವೀನ್ ಎಂ.ಜಿ, ಆನಂದ್ ದೊಡ್ಡಮನಿ, ಶಿವಕುಮಾರ್ ಬಿಯು, ತುಷಾರ್ ಸಿಂಗ್, ಆಕ್ಷನ್ ರಾವ್, ಜಹೂರ್ ಫಾರೂಕಿ, ರೋಹನ್ ನವೀನ್, ಸೌರವ್ ಶ್ರೀವಾಸ್ತವ್, ಸಾಗರ್ ಸೋಲಂಕಿ ( ವಿಕೆಟ್ ಕೀಪರ್), ಗೌತಮ್ ಸಾಗರ್, ರೋಷನ್ ಅಶ್ವಥಿಯಾ, ರಾಹುಲ್ ಸಿಂಗ್ ರಾವತ್, ಶಿಶಿರ್ ಭವಾನೆ, ಶರಣ್ ಗೌಡ್.
ಗುಲ್ಬರ್ಗಾ ಮಿಸ್ಟಿಕ್ಸ್: ಮನ್ಸೂರ್ ಅಲಿ ಖಾನ್ (ಕೋಚ್), ರಾಜಶೇಖರ್ ಶಾನ್ಬಾಲ್ (ಸಹಾಯಕ ಕೋಚ್), ಸಂತೋಷ್ ವಿ (ಆಯ್ಕೆಗಾರ), ಸಚ್ಚಿದಾನಂದ (ವೀಡಿಯೋ ವಿಶ್ಲೇಷಕ)
ಆಟಗಾರರು: ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಕಾರ್ತಿಕ್ ಸಿಎ, ಮನೋಜ್ ಭಾಂಡಗೆ, ವಿದ್ವತ್ ಕಾವೇರಪ್ಪ, ಕೃತಿಕ್ ಕೃಷ್ಣ, ಅಭಿಲಾಷ್ ಶೆಟ್ಟಿ, ಕುಶಾಲ್ ಎಂ ವಾಧ್ವಾನಿ, ಪ್ರಣವ್ ಭಾಟಿಯಾ, ಶ್ರೀಜಿತ್ ಕೆಎಲ್ (ವಿಕೆಟ್ ಕೀಪರ್), ರಿತೇಶ್ ಭಟ್ಕಳ್, ಮೋಹಿತ್ ಬಿಎ, ರೋಹನ್ ಪಾಟೀಲ್, ಧನುಷ್ ಗೌಡ, ಮೊಹಮ್ಮದ್ ಅಕಿಬ್ ಜವಾದ್, ಶ್ರೀಶ ಆಚಾರ್, ಜೇಶ್ವಂತ್ ಆಚಾರ್ಯ, ಆರನ್ ಕ್ರಿಸ್ಟಿ.
ಮಂಗಳೂರು ಯುನೈಟೆಡ್: ಸ್ಟುವರ್ಟ್ ಬಿನ್ನಿ (ಕೋಚ್), ಸಿ.ರಾಘವೇಂದ್ರ (ಸಹಾಯಕ ಕೋಚ್), ಎಂ.ವಿ.ಪ್ರಶಾಂತ್ (ಆಯ್ಕೆಗಾರ), ಪಿ.ರಾಜೀವ್ (ವೀಡಿಯೋ ವಿಶ್ಲೇಷಕ)
ಆಟಗಾರರು: ಅಭಿನವ್ ಮನೋಹರ್, ಸಮರ್ಥ್ ಆರ್, ವೈಶಾಕ್ ವಿ, ಅಮಿತ್ ವರ್ಮಾ, ವೆಂಕಟೇಶ್ ಎಂ, ಅನೀಶ್ವರ್ ಗೌತಮ್, ಸುಜಯ್ ಸಾತೇರಿ, ರೋಹಿತ್ ಕುಮಾರ್ ಎಸಿ, ಮ್ಯಾಕ್ನೀಲ್ ನೊರೊನ್ಹಾ, ಶರತ್ ಎಚ್ಎಸ್, ಶಶಿಕುಮಾರ್ ಕೆ, ನಿಕಿನ್ ಜೋಸ್ ಎಸ್ಜೆ, ರಘುವೀರ್ ಪಾವಲೂರ್, ಅಮೋಘ್. ಎಸ್, ಚಿನ್ಮಯ್ ಎನ್.ಎ, ಆದಿತ್ಯ ಸೋಮಣ್ಣ, ಯಶೋವರ್ಧನ್ ಪರಂತಪ್, ಧೀರಜ್ ಜೆ.ಗೌಡ.
ಶಿವಮೊಗ್ಗ ಸ್ಟ್ರೈಕರ್ಸ್: ನಿಖಿಲ್ ಹಳದೀಪುರ್ (ಕೋಚ್), ಆದಿತ್ಯ ಸಾಗರ್ (ಸಹಾಯಕ ಕೋಚ್), ಎ ಆರ್ ಮಹೇಶ್ (ಆಯ್ಕೆಗಾರ), ಶರತ್ (ವಿಡಿಯೋ ವಿಶ್ಲೇಷಕ)
ಆಟಗಾರರು: ಕೆ.ಗೌತಮ್, ಕೆ.ಸಿ.ಕಾರಿಯಪ್ಪ, ರೋಹನ್ ಕದಮ್, ಸಿದ್ಧಾರ್ಥ್ ಕೆ.ವಿ., ದರ್ಶನ್ ಎಂ.ಬಿ., ಸ್ಟಾಲಿನ್ ಹೂವರ್, ಅವಿನಾಶ್ ಡಿ, ಸ್ಮರಣ್ ಆರ್, ಶರತ್ ಬಿಆರ್ (ಡಬ್ಲ್ಯುಕೆ), ರಾಜವೀರ್ ವಾಧ್ವಾ, ರಾಜೇಂದ್ರ ಡಂಗನವರ್, ಉತ್ತಮ್ ಅಯ್ಯಪ್ಪ, ಚೈತನ್ಯ ಎಸ್., ಶ್ರೇಯಸ್ ಬಿ.ಎಂ., ಕೆ.ಎಸ್.ದೇವಯ್ಯ, ವಿನಯ್ ಸಾಗರ್, ಶ್ರೇಯಸ್ ಎಸ್.ಪಿ, ಪುನಿತ್ ಎಸ್.
ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧದ ODI ಸರಣಿಗೆ ಟೀಂ ಇಂಡಿಯಾ ಪ್ರಕಟ.. ಕೊಹ್ಲಿ, ಬುಮ್ರಾ, ಪಂತ್ಗೆ ವಿಶ್ರಾಂತಿ