ETV Bharat / sports

ಆನ್​​ಲೈನ್​​ ಚೆಸ್​​​ ಒಲಿಂಪಿಯಾಡ್​​​ ಕೊನೆರು ಹಂಪಿ ಜತೆ 'ಈಟಿವಿ ಭಾರತ' ಎಕ್ಸ್​​ಕ್ಲೂಸಿವ್​​ ಸಂದರ್ಶನ

author img

By

Published : Aug 31, 2020, 10:50 PM IST

ವಿಶ್ವ ಮಹಿಳಾ ರ‍್ಯಾಪಿಡ್ ಚಾಂಪಿಯನ್​ಶಿಪ್​ ವಿಜೇತೆ, ಭಾರತದ ಹೆಮ್ಮೆಯ ಚೆಸ್​ ಪಟು ಕೊನೆರು ಹಂಪಿ ಅವರ ಎಕ್ಸ್​ಕ್ಲೂಸಿವ್​ ಸಂದರ್ಶನ...

Koneru Humpy
Koneru Humpy

ಹೈದರಾಬಾದ್​: ಭಾರತದ ಗ್ರ್ಯಾಂಡ್​ ಮಾಸ್ಟರ್​​, ವಿಶ್ವ ಮಹಿಳಾ ರ‍್ಯಾಪಿಡ್ ಚೆಸ್​​ ವಿಶ್ವ ಚಾಂಪಿಯನ್​​ ವಿಜೇತೆ ಕೊನೆರು ಹಂಪಿ ಜತೆ ಈಟಿವಿ ಭಾರತ ಎಕ್ಸ್​​ಕ್ಲೂಸಿವ್​​ ಸಂದರ್ಶನ ನಡೆಸಿದೆ. ಚೆಸ್​ ಒಲಿಂಪಿಯಾಡ್​​​ನಲ್ಲಿ ಚಿನ್ನದ ಪದಕ ಗೆಲ್ಲುವುದರಿಂದ ಹಿಡಿದು ಆನ್​ಲೈನ್​​​ ಚೆಸ್​​​ ಹಾಗೂ ಮುಂದಿನ ತಲೆಮಾರಿನ ಚೆಸ್​​​​ ಆಟದ ಎಲ್ಲ ವಿಷಯಗಳ ಬಗ್ಗೆ ಅವರು ಹಂಚಿಕೊಂಡಿದ್ದಾರೆ.

ಕೊನೆರು ಹಂಪಿ ಜತೆ ಈಟಿವಿ ಭಾರತ ಎಕ್ಸ್​​ಕ್ಲೂಸಿವ್​​ ಸಂದರ್ಶನ

ಆನ್​ಲೈನ್​​​ ಚೆಸ್​​ ಒಲಿಂಪಿಯಾಡ್​​ನಲ್ಲಿ ಭಾರತ ಮತ್ತು ರಷ್ಯಾ ಜಂಟಿಯಾಗಿ ಗೆಲುವು ಸಾಧಿಸಿವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹಂಪಿ, ದೇಶಕ್ಕಾಗಿ ನಾವು ಚಿನ್ನ ಗೆದ್ದಿದ್ದೇವೆ. ನಮ್ಮ ಸಾಧನೆ ಬಗ್ಗೆ ಹೆಮ್ಮೆ ಇದೆ. ಚೀನಾ ಸೋಲಿಸಿ ನಾವು ಕ್ವಾರ್ಟರ್​​ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದೆವು. ಸೆಮಿಫೈನಲ್​​ನಲ್ಲಿ ಅನೇಕ ಅಡೆತಡೆ ಬಳಿಕ ಪೋಲೆಂಡ್​ ವಿರುದ್ಧ ಮೊದಲ ಸೆಟ್​ ಕಳೆದುಕೊಳ್ಳಬೇಕಾಯಿತು. ಆದರೆ ಎರಡನೇ ಸೆಟ್​​ನ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಿಕ್ಕಿತು. ಇದರಿಂದ ತಂಡವನ್ನ ಅತ್ಯಂತ ಆತ್ಮವಿಶ್ವಾಸದಿಂದ ಫೈನಲ್​ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿರುವೆ ಎಂದಿದ್ದಾರೆ.

Koneru Humpy
ಆನ್​​ಲೈನ್​​ ಚೆಸ್​​​ ಒಲಿಂಪಿಯಾಡ್​​​

ರಷ್ಯಾ ವಿರುದ್ಧದ ಫೈನಲ್​ ಪಂದ್ಯದಲ್ಲಿ ಮೊದಲ ಸೆಟ್​​ನಲ್ಲಿ ಡ್ರಾ ಸಾಧಿಸಿದ್ದೆವು. ಆದರೆ ಎದುರಾಳಿ ರಷ್ಯಾ 100ಕ್ಕಿಂತ ಹೆಚ್ಚು ರೇಟಿಂಗ್​ ಪಾಯಿಂಟ್​​ ಹೊಂದಿ ನಮಗಿಂತಲೂ ಅಗ್ರಸ್ಥಾನದಲ್ಲಿತ್ತು. ಆದರೆ ಎರಡನೇ ಸೆಟ್​​ನಲ್ಲಿ ಇಂಟರ್​ನೆಟ್​​ ಸಮಸ್ಯೆ, ಸರ್ವರ್​ ಹೋಗಿದ್ದು ನಮಗೆ ತೊಂದರೆ ಆಯಿತು. ಹೀಗಾಗಿ ಮೇಲ್ಮನವಿ ಸಲ್ಲಿಸಿದ್ದೆವು. ಹೀಗಾಗಿ ಎರಡು ತಂಡಗಳು ಜಂಟಿ ವಿಜೇತರು ಎಂದು ಘೋಷಣೆ ಮಾಡಿದರು. ನಾವು ಮರು ಪಂದ್ಯಕ್ಕೆ ಸಿದ್ಧರಿದ್ದೆವು. ಆದರೆ ಎರಡು ತಂಡಗಳನ್ನು ಜಂಟಿ ವಿಜೇತರಾಗಿ ಘೋಷಣೆ ಮಾಡಲಾಯಿತು ಎಂದು ಕೊನೆರು ಹಂಪಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.