ಪಟಿಯಾಲ : ರಾಷ್ಟ್ರೀಯ, ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪುರುಷರ ತಂಡ 4x100 ರಿಲೇಯಲ್ಲಿ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದೆ. ಮೊಹಮ್ಮದ್ ಅನಸ್ ಯಾಹಿಯಾ, ಅಮೋಜ್ ಜಾಕೋಬ್, ಅರೋಕಿಯಾ ರಾಜೀವ್ ಮತ್ತು ನೋವಾ ನಿರ್ಮಲ್ ತೋಮ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವುದಕ್ಕೆ ಅರ್ಹತೆ ಪಡೆದಿದ್ದಾರೆ. ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್ ಪ್ರಾರಂಭವಾಗಲಿದ್ದು, 16 ತಂಡಗಳು ಸ್ಪರ್ಧಿಸಲಿವೆ.
ಇದನ್ನೂ ಓದಿ:24 ಚಿನ್ನದ ಪದಕ ಗೆದ್ದ ಲೇಡಿ ಪ್ಯಾರಾಶೂಟರ್, ಈಗ ಬೀದಿ ವ್ಯಾಪಾರಿ!
ಮಹಿಳೆಯರ 4x100 ಮೀಟರ್ ರಿಲೇಯಲ್ಲಿ ದ್ಯುತಿ ಚಾಂದ್, ಹಿಮಾ ದಾಸ್, ಅರ್ಚನಾ ಸುಸೀಂದ್ರನ್ ಮತ್ತು ಎಸ್ ಧನಲಕ್ಷ್ಮಿ ಒಳಗೊಂಡ ತಂಡ ಸ್ಪರ್ಧಿಸಿದ್ದು, 0.45 ಸೆಕೆಂಡ್ಗಳಲ್ಲಿ ಪರಾಜಿತಗೊಂಡಿದೆ. ಸೋಮವಾರ ಕೊನೆಗೊಂಡ ಇಂಡಿಯನ್ ಗ್ರ್ಯಾಂಡ್ಫ್ರಿಕ್ಸ್-4ರಲ್ಲಿ ಭಾರತ ತಂಡ 43.37 ಸೆಕೆಂಡ್ಸ್ಗಳಲ್ಲಿ ತಲುಪಿ ರಾಷ್ಟ್ರೀಯ ದಾಖಲೆ ಬರೆದಿತ್ತು.