ETV Bharat / sports

ಜೂನಿಯರ್​ ಹಾಕಿ ವಿಶ್ವಕಪ್​​ನಲ್ಲಿ ಭಾರತಕ್ಕೆ ಮತ್ತೊಂದು ಜಯ.. ಕ್ವಾರ್ಟರ್​​ ಫೈನಲ್​​ನಲ್ಲಿ ಬೆಲ್ಜಿಯಂ ಎದುರಾಳಿ

author img

By

Published : Nov 27, 2021, 9:50 PM IST

ಕಳಿಂಗ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರಾಬಲ್ಯಯುತ ಪ್ರದರ್ಶನ ತೋರಿದ ಭಾರತೀಯ ಪಡೆ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲು ಮಾಡಿದ್ದು, ಮುಂದಿನ ಹಂತಕ್ಕೆ ಲಗ್ಗೆ ಹಾಕಿದೆ..

India Junior world cup hockey
India Junior world cup hockey

ಭುವನೇಶ್ವರ(ಒಡಿಶಾ): ಜೂನಿಯರ್​ ಹಾಕಿ ವಿಶ್ವಕಪ್​​​ನಲ್ಲಿ ತಾನು ಆಡಿರುವ ಮೊದಲ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಶೆಗೊಳಗಾಗಿದ್ದ ಭಾರತ ಇದೀಗ ಸತತ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಬಿ ಪೂಲ್​ನಲ್ಲಿ ಕ್ವಾರ್ಟರ್​​ಫೈನಲ್​ಗೆ ಲಗ್ಗೆ ಹಾಕಿದೆ.

ಇಂದು ಪೊಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತೀಯ ಯುವ ಪಡೆ ಎದುರಾಳಿ ತಂಡದ ವಿರುದ್ಧ 8-2 ಅಂತರದಿಂದ ಗೆಲುವು ದಾಖಲಿಸಿತ್ತು.

ಈಗಾಗಲೇ ತಾನಾಡಿರುವ ಫ್ರಾನ್ಸ್​ ವಿರುದ್ಧದ ಪಂಧ್ಯದಲ್ಲಿ ಸೋಲು ಕಂಡಿದ್ದ ಭಾರತ ತದನಂತರ ಕೆನಡಾ ವಿರುದ್ಧದ ಪಂದ್ಯದಲ್ಲಿ 13-1 ಅಂತರದಿಂದ ಜಯ ಸಾಧಿಸಿತ್ತು. ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನ ನೀಡಿ, ಕ್ವಾರ್ಟರ್​ಫೈನಲ್​ಗೆ ಲಗ್ಗೆ ಹಾಕಿದೆ.

ಇದನ್ನೂ ಓದಿರಿ: Aircel-Maxis case : ಮಾಜಿ ಸಚಿವ ಚಿದಂಬರಂ ಹಾಗೂ ಮಗ ಕಾರ್ತಿಗೆ ಸಮನ್ಸ್​​

ಇದೀಗ ಮುಂದಿನ ಕ್ವಾರ್ಟರ್​​ಫೈನಲ್​ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ವಿರುದ್ಧ ಹೋರಾಟ ನಡೆಸಲಿದೆ. ಗೆಲುವಿನ ನಗೆ ಬೀರುವ ಉತ್ಸಾಹದಲ್ಲಿದೆ. ಈ ಪಂದ್ಯ ಡಿಸೆಂಬರ್​ 1ರಂದು ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.