ETV Bharat / sports

ಮೈನಸ್​​​​​ 15 ಡಿಗ್ರಿ ತಾಪಮಾನದಲ್ಲಿ ನಡೆದ ಐಸ್​ ಮ್ಯಾರಾಥಾನ್​ನಲ್ಲಿ ವಿಶ್ವದಾಖಲೆ ಬರೆದ ಲಾಟ್ವಿಯಾದ ಮಹಿಳೆ

author img

By

Published : Dec 21, 2021, 9:33 PM IST

ಸೌತ್​ ಪೋಲ್​ನಿಂದ ಕೆಲವು ನೂರು ಮೈಲಿಗಳಷ್ಟು ದೂರದಲ್ಲಿರುವ ಯುನಿಯನ್​ ಗ್ಲಾಸಿಯರ್​ ನಲ್ಲಿ ಡಿಸೆಂಬರ್​ 17ರಂದು ನಡೆದಿದ್ದ ಅಂಟಾರ್ಕ್ಟಿಕ್ ಐಸ್ ಮ್ಯಾರಥಾನ್‌ನಲ್ಲಿ 18 ದೇಶಗಳ 62 ಜನರು ಭಾಗವಹಿಸಿದ್ದರು. 30 ವರ್ಷದ ಇವಿಜಾ 4 ಗಂಟೆ 6 ನಿಮಿಷ 11 ಸೆಕೆಂಡ್​ಗಳಲ್ಲಿ ಗುರಿ ತಲುಪುವ ಮೂಲಕ ವಿಶ್ವದಾಖಲೆ ಬರೆದರು.

Ice Marathon Race in Antarctica
ಮೈನಲ್​ 15 ಡಿಗ್ರಿ ತಾಮನದಲ್ಲಿ ಐಸ್​ ಮ್ಯಾರಾಥಾನ್​

ಅಂಟಾರ್ಟಿಕಾ: ಮೈನಸ್ 15 ಡಿಗ್ರಿ ತಾಪಮಾನ ಹೊಂದಿರುವ ಅಂಟಾರ್ಟಿಕಾದಲ್ಲಿ ಐಸ್ ಮ್ಯಾರಥಾನ್ ರೇಸ್ ಆಯೋಜಿಸಲಾಗಿತ್ತು. ಇದರಲ್ಲಿ ಮ್ಯಾರಾಥಾನ್​ನಲ್ಲಿ ಲಾಟ್ವಿಯಾದ ಇವಿಜಾ ರೈನ್​ ಮಹಿಳೆಯರ ವಿಭಾಗದಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ.

ಸೌತ್​ ಪೋಲ್​ನಿಂದ ಕೆಲವು ನೂರು ಮೈಲುಗಳಷ್ಟು ದೂರದಲ್ಲಿರುವ ಯುನಿಯನ್​ ಗ್ಲಾಸಿಯರ್​​​ನಲ್ಲಿ ಡಿಸೆಂಬರ್​ 17ರಂದು ನಡೆದಿದ್ದ ಅಂಟಾರ್ಕ್ಟಿಕ್ ಐಸ್ ಮ್ಯಾರಥಾನ್‌ನಲ್ಲಿ 18 ದೇಶಗಳ 62 ಜನರು ಭಾಗವಹಿಸಿದ್ದರು. 30 ವರ್ಷದ ಇವಿಜಾ 4 ಗಂಟೆ 6 ನಿಮಿಷ 11 ಸೆಕೆಂಡ್​ಗಳಲ್ಲಿ ಗುರಿ ತಲುಪುವ ಮೂಲಕ ವಿಶ್ವದಾಖಲೆ ಬರೆದರು. ಈ ಹಿಂದೆ, ಗ್ರೇಟ್ ಬ್ರಿಟನ್​ನ ಫಿಯೋನ ಓಕ್ಸ್​ 2013ರಲ್ಲಿ 4 ಗಂಟೆ 20 ನಿಮಿಷ 2 ಸೆಕೆಂಡ್​ಗಳಲ್ಲಿ ಮ್ಯಾರಾಥಾನ್ ಪೂರೈಸಿ ದಾಖಲೆ ಬರೆದಿದ್ದರು.

ಐಸ್​ ಮ್ಯಾರಾಥಾನ್

ಈ ರೇಸ್​ನಲ್ಲಿ ಅಮೆರಿಕದ ಗ್ರೇಸ್​ ಯೋ ಇವಿಜಾಗಿಂತ ಒಂದು ಗಂಟೆ 4 ನಿಮಿಷ ಹಿಂದೆ ಬಿದ್ದು 2ನೇ ಸ್ಥಾನ ಪಡೆದರು. ಗ್ರೇಟ್​ ಬ್ರಿಟನ್​ ಜುಲಿಯಾ ಹಂಟರ್​ 3ನೇ ಸ್ಥಾನ ಪಡೆದರು.

ಇದನ್ನೂ ಓದಿ:ಗಬ್ಬಾ ದಿಗ್ವಿಜಯ, ಒಲಿಂಪಿಕ್ಸ್ ಚಿನ್ನ, ವಿಶ್ವಚಾಂಪಿಯನ್​ಶಿಪ್​ ಬೆಳ್ಳಿ ಪದಕ ಸೇರಿದಂತೆ ಭಾರತ ಕ್ರೀಡೆಯ 2021ರ ಅವಿಸ್ಮರಣೀಯ ಕ್ಷಣಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.