ನವದೆಹಲಿ: ನಾನು ಅಥ್ಲೆಟಿಕ್ಸ್ನಲ್ಲೇ ಉಸಿರಾಡುತ್ತಿದ್ದೇನೆ ಮತ್ತು ಬದುಕುತ್ತಿದ್ದೇನೆ. ಒಲಿಂಪಿಕ್ಸ್ನಲ್ಲಿ ದೇಶಕ್ಕೆ ಸಾಕಷ್ಟು ಪದಕ ವಿಜೇತರನ್ನು ಬೆಳೆಸುವುದೇ ನನ್ನ ಗುರಿ ಎಂದು ವಿಶ್ವ ಅಥ್ಲೆಟಿಕ್ಸ್ನಿಂದ 'ವರ್ಷದ ಮಹಿಳೆ' ಪ್ರಶಸ್ತಿ ಪಡೆದ ಭಾರತದ ಲೆಜೆಂಡರಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಗುರುವಾರ ಹೇಳಿದ್ದಾರೆ.
2003ರ ಆವೃತ್ತಿಯಲ್ಲಿ ಲಾಂಗ್ಜಂಪ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿರುವ ಏಕೈಕ ಅಥ್ಲೀಟ್ ಎಂಬ ಗೌರವಕ್ಕೆ 44 ವರ್ಷದ ಅಂಜು ಪಾತ್ರರಾಗಿದ್ದಾರೆ. ಬುಧವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಮಂಡಳಿಯ ವಾರ್ಷಿಕೋತ್ಸವದಲ್ಲಿ ಅಥ್ಲೆಟಿಕ್ಸ್ಗೆ ತಮ್ಮ ಜೀವನ ಅರ್ಪಿಸಿರುವುದಕ್ಕೆ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡರು. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮತ್ತು ವಿಶ್ವದ 2ನೇ ಮಹಿಳಾ ಅಥ್ಲೀಟ್ ಎನಿಸಿಕೊಂಡರು.
ಅಥ್ಲೆಟಿಕ್ಸ್ ನನ್ನ ಉತ್ಸಾಹ. ನಾನು ಅದರಲ್ಲಿ ಜೀವಿಸಿದ್ದೇನೆ ಮತ್ತು ಉಸಿರಾಡುತ್ತಿದ್ದೇನೆ. ಅಥ್ಲೆಟಿಕ್ಸ್ಈ ಪ್ರಶಸ್ತಿ ಸೇರಿದಂತೆ ನನಗೆ ಸಾಕಷ್ಟು ಹೆಸರನ್ನು ಮತ್ತು ಜನಪ್ರಿಯತೆ ತಂದುಕೊಟ್ಟಿದೆ. ಇದೀಗ ನನ್ನ ಸಮಯವಾಗಿದ್ದು, ನನ್ನ ದೇಶಕ್ಕೆ ಮತ್ತು ಕ್ರೀಡೆಗೆ ಕೊಡುಗೆ ನೀಡಬೇಕಿದೆ" ಎಂದು ಪಿಟಿಐಗೆ ತಿಳಿಸಿದ್ದಾರೆ.
ನಾನು ವಿಶ್ವಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದಿದ್ದೇನೆ. ಆದರೆ, ಒಲಿಂಪಿಕ್ಸ್ನಲ್ಲಿ ಸಾಧ್ಯವಾಗಲಿಲ್ಲ. ಆದರೆ, ನೀರಜ್ ಚೋಪ್ರಾ ಟೋಕಿಯೋದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತೀಯರು ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಬಲ್ಲರು ಎಂದು ತೋರಿಸಿಕೊಟ್ಟಿದ್ದಾರೆ. ದೇಶಕ್ಕಾಗಿ ಒಳ್ಳೆಯ ಪ್ರತಿಭೆಗಳನ್ನು ಬೆಳಸುವುದು ಮತ್ತು ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವಂತೆ ಮಾಡುವುದು ನನ್ನ ಮುಂದಿರುವ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ ಹಿರಿಯ ಉಪಾಧ್ಯಕ್ಷೆ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಥ್ಲೀಟ್ ಆಯೋಗದ ಸದಸ್ಯೆ ಮತ್ತು ದೇಶದ ಮಿಷನ್ ಒಲಿಂಪಿಕ್ಸ್ ಸೆಲ್‌ನ ಭಾಗವಾಗಿರುವ ಅಂಜು, ಸ್ಪರ್ಧಾತ್ಮಕ ದಿನಗಳಿಂದಲೂ ಕ್ರೀಡೆಯೂ ತಮ್ಮನ್ನು ಉತ್ತಮವಾಗಿ ಬದಲಾಯಿಸಿದೆ ಎಂದು ಹೇಳಿದ್ದಾರೆ.
"ಕ್ರೀಡಾ ಪ್ರಪಂಚವು ವಿಕಸನಗೊಳ್ಳುತ್ತಿದೆ ಮತ್ತು ಬದಲಾಗುತ್ತಿದೆ. ನನ್ನ ಸಮಯಕ್ಕೆ ಹೋಲಿಸಿದರೆ ನಾನು ಈಗ ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ದೊಡ್ಡ ವ್ಯತ್ಯಾಸ ನೋಡುತ್ತಿದ್ದೇನೆ, ಸರ್ಕಾರವು ಒದಗಿಸುವ ಸೌಲಭ್ಯಗಳು, ತರಬೇತಿ ಮತ್ತು ಉತ್ತಮ ಪ್ರವಾಸಗಳು, ತರಬೇತಿ ಮತ್ತು ಇತರ ಸಹಾಯಕ ಸಿಬ್ಬಂದಿ ಎಲ್ಲವೂ ಸಾಕಷ್ಟು ಉತ್ತಮವಾಗಿದೆ ಎಂದಿದ್ದಾರೆ.
ನೀರಜ್ ಚೋಪ್ರಾ ಐತಿಹಾಸಿಕ ಚಿನ್ನ ಗೆದ್ದ ಬಳಿಕೆ ಕ್ರೀಡೆಯಲ್ಲಿ ಜನಸಾಮಾನ್ಯರಲ್ಲೂ ಕ್ರೀಡೆಯ ಬಗ್ಗೆ ಅರಿವು ಹೆಚ್ಚಾಗಿದೆ, ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಶುರುಮಾಡಿದ್ದಾರೆ. ಅದಕ್ಕಿಂತ ಮೊದಲೂ ಖೇಲೋ ಇಂಡಿಯಾ ಗೇಮ್ಸ್ ಮೂಲಕ ಶಾಲಾ ಹಂತದಲ್ಲಿ ಅಥ್ಲೆಟಿಕ್ಸ್ ತಲುಪಿದೆ. ಬೇರೆ ದೇಶಗಳಂತೆ ಭಾರತದಲ್ಲೂ ಅಥ್ಲೆಟಿಕ್ಸ್ ಶಾಲಾ ಹಂತದಲ್ಲೇ ಬೇರೂರುತ್ತಿದೆ. ಭಾರತೀಯ ಅಥ್ಲೆಟಿಕ್ಸ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅಂಜು ಬಾಬಿ ಜಾರ್ಜ್ಗೆ 'ವರ್ಷದ ಮಹಿಳೆ' ಪ್ರಶಸ್ತಿ ನೀಡಿದ ವಿಶ್ವ ಅಥ್ಲೆಟಿಕ್ಸ್