ಪ್ಯಾರಿಸ್: ಇಂಡೋ - ಜೆಕ್ ಜೋಡಿ ಸಾನಿಯಾ ಮಿರ್ಜಾ ಮತ್ತು ಲೂಸಿ ಹ್ರಾಡೆಕಾ ಫ್ರೆಂಚ್ ಓಪನ್‌ನ ಮಹಿಳೆಯರ ಡಬಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಕೊಕೊ ಗೌಫ್ ಮತ್ತು ಜೆಸ್ಸಿಕಾ ಪೆಗುಲಾ ವಿರುದ್ಧ 4-6 3-6 ನೇರ ಸೆಟ್‌ಗಳಿಂದ ಸೋಲನ್ನಪ್ಪಿ ತಮ್ಮ ಓಟವನ್ನು ಮುಕ್ತಾಯಗೊಳಿಸಿದರು.
2022 ರ ಫ್ರೆಂಚ್ ಓಪನ್‌ನಲ್ಲಿ ವಿಶ್ವ ನಂ. 25 ರ ಸಾನಿಯಾ ಮಿರ್ಜಾ ಹೋರಾಟ ಅಂತ್ಯ ಕಂಡಿತು. ಸಾನಿಯಾ ಮತ್ತು ಲೂಸಿ ಹ್ರಾಡೆಕಾ ಮಂಗಳವಾರ ನಡೆದ ಮಹಿಳೆಯರ ಡಬಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ನೇರ ಸೆಟ್‌ಗಳಿಂದ ಸೋಲು ಕಂಡರು. ಸಾನಿಯಾ ಇದಕ್ಕೂ ಮುನ್ನ ಮಿಶ್ರ ಡಬಲ್ಸ್‌ನ ಎರಡನೇ ಸುತ್ತಿನಲ್ಲಿ ಸೋತಿದ್ದರು.
ಓದಿ: ಫ್ರೆಂಚ್ ಓಪನ್: ವಿಶ್ವದ ನಂ. 1 ಜೊಕೊವಿಕ್ ವಿರುದ್ಧ ರಫೆಲ್ ನಡಾಲ್ಗೆ ಜಯ, ಸೆಮೀಸ್ಗೆ ಲಗ್ಗೆ
ಮಂಗಳವಾರ ಅಮೆರಿಕದ ಸಿಂಗಲ್ಸ್ ಆಟಗಾರರಾದ ಕೊಕೊ ಗೌಫ್ ಮತ್ತು ಜೆಸ್ಸಿಕಾ ಪೆಗುಲಾ ವಿರುದ್ಧ ಕಠಿಣ ಹೋರಾಟದ ಹೊರತಾಗಿಯೂ ಸಾನಿಯಾ ಮತ್ತು ಹ್ರಾಡೆಕಾ 4-6, 3-6 ಸೆಟ್‌ಗಳಿಂದ ಪರಾಭವಗೊಂಡರು. ಹಿಂದಿನ ದಿನ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಸ್ಲೋನೆ ಸ್ಟೀಫನ್ಸ್ ವಿರುದ್ಧ ಗೌಫ್ ಗೆಲುವು ಸಾಧಿಸಿದ್ದರು. ಇದಾದ ಬಳಿಕ ಡಬಲ್ಸ್ ಪಂದ್ಯದಲ್ಲಿ ಮುನ್ನಡೆ ಸಾಧಿಸಿದ್ದಾರೆ.