ನ್ಯೂಯಾರ್ಕ್: ಪ್ರತಿಷ್ಟಿತ ಟೆನಿಸ್ ಗ್ರ್ಯಾಂಡ್‌ಸ್ಲಾಮ್ ಯುಎಸ್ ಓಪನ್ ಮಹಿಳೆಯ ಸಿಂಗಲ್ಸ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಆಫ್ರಿಕಾ ಖಂಡದ ಮಹಿಳಾ ಸ್ಪರ್ಧಿಯೊಬ್ಬರು ಅಂತಿಮ ಪ್ರಶಸ್ತಿ ಸುತ್ತು ಪ್ರವೇಶಿಸಿ ಐತಿಹಾಸಿಕ ಸಾಧನೆ ತೋರಿದ್ದಾರೆ. ಇವರ ಹೆಸರು ಒನ್ಸ್ ಜಬೇರ್. ದೇಶ ಟ್ಯುನಿಷಿಯಾ.
-
Take it in, @Ons_Jabeur!#USOpen pic.twitter.com/bIa71zuAaG
— US Open Tennis (@usopen) September 9, 2022 " class="align-text-top noRightClick twitterSection" data="
">Take it in, @Ons_Jabeur!#USOpen pic.twitter.com/bIa71zuAaG
— US Open Tennis (@usopen) September 9, 2022Take it in, @Ons_Jabeur!#USOpen pic.twitter.com/bIa71zuAaG
— US Open Tennis (@usopen) September 9, 2022
5ನೇ ಶ್ರೇಯಾಂಕದ ಗಟ್ಟಿಗಿತ್ತಿ ಜಬೇರ್ ತಮ್ಮ ಪ್ರತಿಸ್ಪರ್ಧಿ ಕೆರೋಲಿನಾ ಗಾರ್ಸಿಯಾ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಈ ಸಾಧನೆ ತೋರಿದ್ದಾರೆ. ಇಲ್ಲಿನ ಆರ್ಥರ್ ಆ್ಯಶ್ಲೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಈಕೆ, ಫ್ರಾನ್ಸ್ ಆಟಗಾರ್ತಿ ಕೆರೋಲಿನಾ ಗಾರ್ಸಿಯಾ ಅವರನ್ನು 6-1, 6-3 ರಲ್ಲಿ ಸೋಲಿಸಿದರು.
ಇದಕ್ಕೂ ಹಿಂದೆ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಹಂತ ತಲುಪಿದ ಆಫ್ರಿಕಾದ ಮೊದಲ ಮಹಿಳೆ ಎಂಬ ಗುರುತರ ಸಾಧನೆಯನ್ನು ಜಬೇರ್ ಮಾಡಿದ್ದರು. ಈ ಪಂದ್ಯ ಕಳೆದ ಜುಲೈನಲ್ಲಿ ನಡೆದಿತ್ತು.
ಮುಂದಿನ ಶನಿವಾರ ನಡೆಯಲಿರುವ ಯುಎಸ್ ಓಪನ್ ಫೈನಲ್‌ನಲ್ಲಿ ಜಬೇರ್ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಇಗಾ ಸ್ವಿಕೆಟ್ ಅಥವಾ ಬೆಲಾರಸ್‌ನ ಅರಿನಾ ಸಬಲೆಂಕಾ ಸವಾಲು ಎದುರಿಸುವರು.
ಇದನ್ನೂ ಓದಿ : 101 ರನ್ಗಳ ಭರ್ಜರಿ ಜಯದೊಂದಿಗೆ ಏಷ್ಯಾ ಕಪ್ ಅಭಿಯಾನ ಮುಗಿಸಿದ ಭಾರತ, ಆಫ್ಘನ್ಗೆ ಸೋಲು