ಟೋಕಿಯೋ: ಒಲಿಂಪಿಕ್ಸ್ನ ಟೇಬಲ್ ಟೆನಿಸ್ ಡ್ರಾ ಬಿಡುಗಡೆಯಾಗಿದೆ. ಭಾರತದ 12ನೇ ಶ್ರೇಯಾಂಕದ ಜೋಡಿಯಾದ ಮನಿಕಾ ಬಾತ್ರಾ ಮತ್ತು ಶರತ್ ಕಮಲ್ ಮೊದಲ ಸುತ್ತಿನಲ್ಲಿ 3ನೇ ಶ್ರೇಯಾಂಕದ ಚೈನೀಸ್ ತೈಪೆಯ ಲಿನ್ ಯುನ್-ಜು ಮತ್ತು ಚೆಂಗ್ ಐ-ಚೆಂಗ್ ಅವರ ಸವಾಲು ಎದುರಿಸಲಿದ್ದಾರೆ.
ಬುಧವಾರ ಆಯೋಜಕರು ಟೇಬಲ್ ಟೆನಿಸ್ ಡ್ರಾಗಳನ್ನು ಘೋಷಿಸಿದ್ದಾರೆ. ಜುಲೈ 24ರಂದು ಮಿಕ್ಸೆಡ್ ಡಬಲ್ಸ್ನಲ್ಲಿ ಭಾರತ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ಗೆ ಪದಾರ್ಪಣೆ ಮಾಡಲಿದೆ.
ಸಿಂಗಲ್ಸ್‌ನಲ್ಲಿ 34ನೇ ಶ್ರೇಯಾಂಕದ ಮನಿಕಾ ಮಿಕ್ಸಡ್ ಡಬಲ್ಸ್ ಆಡಿದ ದಿನವೇ 94ನೇ ಶ್ರೇಯಾಂಕದ ಗ್ರೇಟ್ ಬ್ರಿಟನ್ನ ಟಿನ್ ಟಿನ್ ಹೋ ಅವರನ್ನು ಎದುರಿಸಲಿದ್ದಾರೆ. 2ನೇ ಸುತ್ತಿನಲ್ಲಿ ಉಕ್ರೇನ್ನ ಮಾರ್ಗರಿಟಾ ಪೆಸೊಟ್ಸ್ಕಾ, 3ನೇ ಸುತ್ತಿನಲ್ಲಿ ಆಸ್ಟ್ರೀಯಾದ ಸೋಫಿಯಾ ಪೊಲೊಕಾನ್ವಾ ಅವರ ಸವಾಲನ್ನು ಎದುರಿಸಲಿದ್ದಾರೆ.
52 ನೇ ಶ್ರೇಯಾಂಕದ ಮತ್ತೊಬ್ಬ ಸಿಂಗಲ್ಸ್ ಆಟಗಾರ್ತಿ ಸುತಿರ್ಥ ಮುಖರ್ಜಿ 78 ಶ್ರೇಯಾಂಕದ ಲಿಂಡಾ ಬರ್ಗ್ಸ್ಟಾರ್ಮ್ ಅವರ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ಭಾರತದ ಟಾಪ್ ಪೆಡ್ಲರ್ರ್ಗಳಾದ ಶರತ್ ಕಮಲ್ ಮತ್ತು ಜಿ.ಸತಿಯಾನ್ ತಮ್ಮ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಮೂರನೇ ಸುತ್ತಿನಲ್ಲಿ ಜಪಾನಿನ 3ನೇ ಶ್ರೇಯಾಂಕದ ಟೊಮೊಕಾಜು ಹರಿಮೊಟೊ ಅವರನ್ನು ಎದುರಿಸುವ ಮೊದಲು ಎರಡನೇ ಸುತ್ತಿನಲ್ಲಿ ಪೋರ್ಟೊ ರಿಕೊದ ಬ್ರಿಯಾನ್ ಅಫಾನಡಾರ್ ಅಥವಾ ಹಾಂಗ್ ಕಾಂಗ್‌ನ ಲ್ಯಾಮ್ ಸಿಯು ಹ್ಯಾಂಗ್ ಅವರನ್ನು ಎದುರಿಸಲಿದ್ದಾರೆ.
ಶರತ್ ಎರಡನೇ ಸುತ್ತಿನಲ್ಲಿ ಪೋರ್ಚುಗಲ್‌ನ ಟಿಯಾಗೊ ಅಪೊಲೊನಿಯಾ ಅಥವಾ ನೈಜೀರಿಯಾದ ಒಲಾಜಿಡ್ ಓಮೋಟಾಯೊ ವಿರುದ್ಧ ಆಡಲಿದ್ದಾರೆ. 3ನೇ ಸುತ್ತಿನಲ್ಲಿ ಶರತ್ ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಾಗಿರುವ 2ನೇ ಶ್ರೇಯಾಂಕದ ಚೀನಾದ ಮಾ ಲಾಂಗ್ ವಿರುದ್ಧ ಸೆಣಸಾಡಲಿದ್ದಾರೆ. ಈ ಹಿಂದಿನ 5 ಪಂದ್ಯಗಳಲ್ಲೂ ಭಾರತೀಯನ ವಿರುದ್ಧ ಚೀನಾ ಆಟಗಾರ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಬ್ರಿಸ್ಬೇನ್ ತೆಕ್ಕೆಗೆ 2032ರ ಒಲಿಂಪಿಕ್ಸ್ ಆತಿಥ್ಯ.. 32 ವರ್ಷಗಳ ನಂತರ ಆಸೀಸ್‌ಗೆ ಮರಳಿದ ಕ್ರೀಡಾಕೂಟ..