ETV Bharat / sports

Asian Games 2023: ಪದಕದ ಸುತ್ತಿಗೆ ಬೋಪಣ್ಣ- ಭೋಸಲೆ ಜೋಡಿ.. ಕ್ವಾರ್ಟರ್ - ಫೈನಲ್‌ ಪ್ರವೇಶಿಸಿದ ಪರ್ವೀನ್ ಹೂಡಾ

author img

By ETV Bharat Karnataka Team

Published : Sep 29, 2023, 3:29 PM IST

19ನೇ ಏಷ್ಯನ್​ ಗೇಮ್ಸ್​ನಲ್ಲಿ ಇದು ವರೆಗೆ ಒಟ್ಟು 32 ಪದಕಗಳನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Bopanna-Bhosale pair enters mixed doubles final
ಬೋಪಣ್ಣ- ಭೋಸಲೆ ಜೋಡಿ

ಹ್ಯಾಂಗ್‌ಝೌ (ಚೀನಾ): 43 ವರ್ಷದ ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರ ಜೋಡಿ ಏಷ್ಯನ್​ ಗೇಮ್ಸ್​ನಲ್ಲಿ ಫೈನಲ್​ ಪ್ರವೇಶಿಸಿದೆ. ಮಿಶ್ರ ಡಬಲ್ಸ್​ನಲ್ಲಿ ಚೈನೀಸ್ ತೈಪೆಯ ಯು-ಹಸಿಯು ಹ್ಸು ಮತ್ತು ಹಾವೊ-ಚಿಂಗ್ ಚಾಂಗ್ ವಿರುದ್ಧ 6-1, 3-6, 10-4 ಸೆಟ್‌ಗಳಿಂದ ಗೆದ್ದು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಭಾರತದ ಜೋಡಿಯು ಮೊದಲ ಸೆಟ್​ನ ಆರಂಭಿಕ ಲಾಭವನ್ನು ಪಡೆದು 28 ನಿಮಿಷದಲ್ಲಿ ವಶ ಪಡಿಸಿಕೊಂಡಿದೆ. ಮೂರನೇ ಶ್ರೇಯಾಂಕದ ಚೈನೀಸ್ ತೈಪೆ ಜೋಡಿಯು ಎರಡನೇ ಸೆಟ್‌ನಲ್ಲಿ ಪುನರಾಗಮನ ಮಾಡಿದೆ. ಎರಡನೇ ಸೆಟ್ ಅ​ನ್ನು 3-6 ರಿಂದ ಗೆದ್ದುಕೊಂಡರು. ಇದರಿಂದ ಪಂದ್ಯ ಟೈಬ್ರೇಕರ್​ ಹಂತಕ್ಕೆ ಪ್ರವೇಶಿಸಿತು. ಟೈ ಬ್ರೇಕರ್​ನಲ್ಲಿ ಭಾರತೀಯ ಜೋಡಿ 10-4ರಿಂದ ಪಂದ್ಯ ಗೆದ್ದು, ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿತು. ಚಿನ್ನದ ಪದಕಕ್ಕಾಗಿ ಭಾರತ ನಾಳೆ (ಶನಿವಾರ) ಚೀನಾ ತೈಪೆಯ ಇತರ ಜೋಡಿಗಳಾದ ತ್ಸುಂಗ್-ಹಾವೊ ಹುವಾಂಗ್ ಮತ್ತು ಎನ್-ಶುವೊ ಲಿಯಾಂಗ್ ಅವರನ್ನು ಎದುರಿಸಲಿದೆ.

ಗಮನಾರ್ಹವಾಗಿ, ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರು ತಮ್ಮ ಚೊಚ್ಚಲ ಏಷ್ಯನ್ ಗೇಮ್ಸ್ ಮಿಶ್ರ ಡಬಲ್ಸ್ ಪದಕವನ್ನು ಖಾತ್ರಿಪಡಿಸುವ ಅಂಚಿನಲ್ಲಿದ್ದಾರೆ. ಕನಿಷ್ಠ ಬೆಳ್ಳಿ ಪದಕವನ್ನಾದರೂ ಈ ಜೋಡಿ ಗೆಲ್ಲಲಿದೆ. ಹಿಂದಿನ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡವು ತಲಾ ಎರಡು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಒಳಗೊಂಡಂತೆ ಒಟ್ಟು ಆರು ಮಿಶ್ರ ಡಬಲ್ಸ್ ಪದಕಗಳನ್ನು ಗೆದ್ದಿದೆ.

ಕ್ವಾರ್ಟರ್-ಫೈನಲ್‌ ಪ್ರವೇಶಿಸಿದ ಪರ್ವೀನ್ ಹೂಡಾ: ಮಹಿಳೆಯರ 57 ಕೆಜಿ ಕ್ವಾರ್ಟರ್ಸ್ ವಿಭಾಗದಲ್ಲಿ ಭಾರತದ ಬಾಕ್ಸರ್ ಪರ್ವೀನ್ ಹೂಡಾ 16 ಸುತ್ತಿನ ಬೌಟ್‌ನಲ್ಲಿ ಚೀನಾದ ಕ್ಸು ಜಿಚುನ್ ವಿರುದ್ಧ 5:0 ಪಾಯಿಂಟ್‌ಗಳಿಂದ ಗೆಲುವು ಸಾಧಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಪರ್ವೀನ್ ಪಂದ್ಯದ ಮೊದಲ ಎರಡು ಸುತ್ತುಗಳಲ್ಲಿ ಗೆದ್ದರು. ಕ್ಸು ಜಿಚುನ್ ಮೂರನೇ ಸುತ್ತಿನಲ್ಲಿ ಹಿಮ್ಮೆಟ್ಟಿಸಿದರು. ಆದರೆ, ತೀರ್ಪುಗಾರರು ಅಂತಿಮ ಅಂಕವನ್ನು 23 ವರ್ಷದ ಭಾರತೀಯ ಬಾಕ್ಸರ್ ಪರವಾಗಿ ನೀಡಿದರು.

ಪರ್ವೀನ್ ಅವರು ಸೆಮಿಫೈನಲ್ ಸ್ಥಾನ ಮತ್ತು ಪದಕವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಕ್ಟೋಬರ್ 1 ರಂದು ಬೆಳಗ್ಗೆ 11:45 AM ಕ್ಕೆ ಕ್ವಾರ್ಟರ್-ಫೈನಲ್‌ನಲ್ಲಿ ಉಜ್ಬೇಕಿಸ್ತಾನ್‌ನ ಸಿಟೋರಾ ತುರ್ಡಿಬೆಕೋವಾ ವಿರುದ್ಧ ಹೋರಾಡಲಿದ್ದಾರೆ. ಇಂದು ಸಂಜೆ 4:45 ಕ್ಕೆ ಮಹಿಳೆಯರ 50 ಕೆಜಿ ಕ್ವಾರ್ಟರ್‌ಫೈನಲ್‌ನಲ್ಲಿ ನಿಖತ್ ಜರೀನ್ ಜೋರ್ಡಾನ್‌ನ ಹನನ್ ನಾಸರ್ ವಿರುದ್ಧ ಸೆಣಸಲಿದ್ದಾರೆ.

ಇದನ್ನೂ ಓದಿ: Asian Games: ಮುಂದುವರಿದ ಭಾರತದ ಪದಕ ಬೇಟೆ... ಏರ್ ಪಿಸ್ತೂಲ್​ನಲ್ಲಿ ಪಾಲಕ್​ಗೆ ಚಿನ್ನ, ಇಶಾಗೆ ಬೆಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.