ನವದೆಹಲಿ : ಭಾರತದ ಶರತ್ ಕಮಲ್ ಮತ್ತು ಜಿ ಸತಿಯಾನ್ ಹಾಗೂ ಹರ್ಮೀತ್ ದೇಸಾಯಿ ಮತ್ತು ಮನವ್ ತಕ್ಕರ್ ಜೋಡಿ 2021ರ ಐಟಿಟಿಎಫ್-ಎಟಿಟಿಯು ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
8ನೇ ಶ್ರೇಯಾಂಕದ ಹರ್ಮೀತ್ ಮತ್ತು ಮನವ್ ದಕ್ಷಿಣ ಕೋರಿಯಾದ 5ನೇ ಶ್ರೇಯಾಂಕದ ವೂಜಿನ್ ಜಂಗ್ ಮತ್ತು ಜಾಂಗ್ಹೂನ್ ಲಿಮ್ ವಿರುದ್ಧ 4-11, 6-22, 12-10, 11-9,8-118ರಲ್ಲಿ ಮೊದಲ ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಕಂಚಿಗೆ ತೃಪ್ತಿ ಪಟ್ಟುಕೊಂಡರು.
ಮತ್ತೊಂದು ಡಬಲ್ಸ್ ಸೆಮಿಫೈನಲ್ಸ್ನಲ್ಲಿ 6ನೇ ಶ್ರೇಯಾಂಕದ ಶರತ್ ಮತ್ತು ಸತಿಯಾನ್ 0-3ರಲ್ಲಿ ವಿಶ್ವದ 14ನೇ ಶ್ರೇಯಾಂಕದ ಜಪಾನ್ನ ಯುಕಿಯಾ ಉಡ ಮತ್ತು ಶನ್ಸುಕೆ ತೊಗಾಮಿ ವಿರುದ್ಧ ಸೋಲು ಕಂಡರು. ಭಾರತೀಯ ಜೋಡಿ 5-11, 9-11, 11-13 ಗೇಮ್ಗಳ ಅಂತರದಲ್ಲಿ ಜಪಾನ್ ಜೋಡಿಗೆ ಮಣಿದು ಕಂಚಿನ ಪದಕ ಪಡೆದರು.
ಇದನ್ನು ಓದಿ:ಇಂಗ್ಲೆಂಡ್ ವಿರುದ್ಧ2-1ರಲ್ಲಿ ಸರಣಿ ಗೆದ್ದಿದ್ದೇವೆ ಎನ್ನುವುದು ನನ್ನ ಮನದಲ್ಲಿದೆ : ರೋಹಿತ್ ಶರ್ಮಾ