ETV Bharat / sports

ಸಮರವಿಕ್ರಮ ಆಕರ್ಷಕ ಬ್ಯಾಟಿಂಗ್, ಬೌಲರ್‌ಗಳ ನೆರವಿನಿಂದ ಬಾಂಗ್ಲಾ ಮಣಿಸಿದ ಲಂಕಾ

author img

By ETV Bharat Karnataka Team

Published : Sep 10, 2023, 8:52 AM IST

ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ನಿನ್ನೆ (ಶನಿವಾರ) ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವು ಬಾಂಗ್ಲಾದೇಶವನ್ನು ಮಣಿಸಿ, ಗೆಲುವಿನ ಓಟ ಮುಂದುವರೆಸಿತು.

Sri Lanka
ಶ್ರೀಲಂಕಾ ತಂಡ

ಕೊಲಂಬೊ : ಸದೀರ ಸಮರವಿಕ್ರಮ ಅವರ ಆಕರ್ಷಕ 93 ರನ್‌ ಮತ್ತು ಬೌಲರ್‌ಗಳ ಸಾಂಘಿಕ ಪ್ರಯತ್ನದ ಫಲವಾಗಿ ಶ್ರೀಲಂಕಾ ತಂಡವು ಬಾಂಗ್ಲಾದೇಶವನ್ನು 21 ರನ್‌ಗಳಿಂದ ಮಣಿಸಿತು. ಏಷ್ಯಾಕಪ್ ಟೂರ್ನಿಯ ಸೂಪರ್‌ ಫೋರ್‌ ಪಂದ್ಯವು ಕೊಲಂಬೊದ ಆರ್‌.ಪ್ರೇಮದಾಸ ಸ್ಟೇಡಿಯಂನಲ್ಲಿ ಕಳೆದ ರಾತ್ರಿ ನಡೆಯಿತು.

  • Sri Lanka beat Bangladesh by 21 runs!
    Samarawickrama led the charge with a scintillating 93 in the first innings, while the Lankan bowlers exhibited exceptional skills in restricting Bangladesh. 🇱🇰 #AsiaCup2023 #SLvBAN pic.twitter.com/5R8elHEXW0

    — AsianCricketCouncil (@ACCMedia1) September 9, 2023 " class="align-text-top noRightClick twitterSection" data=" ">

ಬಾಂಗ್ಲಾದಿಂದ ಮೊದಲು ಬ್ಯಾಟಿಂಗ್ ಸವಾಲು ಎದುರಿಸಿದ ಲಂಕಾ, ಸಮರವಿಕ್ರಮ ಮತ್ತು ಕುಸಲ್ ಮೆಂಡಿಸ್ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 257 ರನ್‌ ಪೇರಿಸಿತು.

ನಾಯಕ ದಸುನ್ ಶನಕ (3/28), ಮಥೀಶ ಪಥಿರಣ (3/58) ಮತ್ತು ಸ್ಪಿನ್ನರ್‌ ಮಹೀಶ ತೀಕ್ಷಣ (3/68) ಅವರ ಕರಾರುವಾಕ್ ಶಿಸ್ತಿನ ಬೌಲಿಂಗ್ ದಾಳಿಯ ಪರಿಣಾಮ ಬಾಂಗ್ಲಾದೇಶ 236 ರನ್‌ ಪೇರಿಸಲಷ್ಟೇ ಸಾಧ್ಯವಾಯಿತು. 48.1 ಓವರ್‌ಗಳಲ್ಲಿ ಬಾಂಗ್ಲಾ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಯಿತು.

ಇದಕ್ಕೂ ಮೊದಲು, ಸಮರವಿಕ್ರಮ ಆಕರ್ಷಕ ಬ್ಯಾಟಿಂಗ್‌ ಮೂಲಕ 8 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳೊಂದಿಗೆ 93 ರನ್‌ ಸಂಪಾದಿಸಿದರು. ಬಾಂಗ್ಲಾ ತಂಡದ ವೇಗಿಗಳಾದ ಹಸನ್ ಮಹಮೂದ್ (3/57), ಶೋರಿಫುಲ್ ಇಸ್ಲಾಂ (2/48) ಮತ್ತು ತಸ್ಕಿನ್ ಅಹಮದ್ ( 3/62) ಸೇರಿ ಒಟ್ಟಾರೆಯಾಗಿ ಲಂಕಾದ 8 ವಿಕೆಟ್‌ಗಳನ್ನು ಉರುಳಿಸಿದರು. ಬ್ಯಾಟರ್‌ಗಳಾದ ತೌಹಿದ್ ಹೃದಯ್ 82, ಮುಷ್ಪಿಕರ್ ರಹೀಂ 29 ರನ್‌ ಕಲೆ ಹಾಕಿದ್ದರು.

ಇದನ್ನೂ ಓದಿ : ಎಂಟು ದಿನದ ಬಳಿಕ ಮತ್ತೆ ಪಾಕ್​ ಮೇಲೆ ಪಂದ್ಯ.. ಭಾರತ ತಂಡದಲ್ಲಿ ಎರಡು ಬದಲಾವಣೆ ಖಂಡಿತಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.