ನ್ಯೂಯಾರ್ಕ್: ಭಾನುವಾರ ನಡೆದ ಪ್ರತಿಷ್ಟಿತ ಯುಎಸ್ ಓಪನ್ 2022 ಪುರುಷರ ಸಿಂಗಲ್ಸ್ ಟೆನಿಸ್ ಪಂದ್ಯಾವಳಿಯ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಜ್ ಮತ್ತು ನಾರ್ವೆಯ ಕ್ಯಾಸ್ಪರ್ ರೂಡ್ ಅನಿರೀಕ್ಷಿತವಾಗಿ ಪ್ರಶಸ್ತಿ ಕಣದಲ್ಲಿ ನಿಂತು ಮುಖಾಮುಖಿಯಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಕುತೂಹಲದ ಸಂಗತಿ ಎಂದರೆ, ಇಬ್ಬರಿಗೂ ಇದು ಮೊದಲ ಯುಎಸ್ ಓಪನ್ ಫೈನಲ್ ಆಗಿತ್ತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಉಭಯ ಆಟಗಾರರು ನೀನಾ-ನಾನಾ ಎಂಬಂತೆ ಸ್ಪರ್ಧಿಸಿದರು. ಅಂತಿಮವಾಗಿ ಗೆಲುವು ಸ್ಪೇನ್‌ನ 19 ವರ್ಷದ ಆಟಗಾರ ಅಲ್ಕರಜ್‌ಗೆ ಒಲಿಯಿತು.
-
Think @carlosalcaraz is popular with the fans?
— US Open Tennis (@usopen) September 12, 2022 " class="align-text-top noRightClick twitterSection" data="
It’s been an hour since the match finished. pic.twitter.com/BSxXPtwRhv
">Think @carlosalcaraz is popular with the fans?
— US Open Tennis (@usopen) September 12, 2022
It’s been an hour since the match finished. pic.twitter.com/BSxXPtwRhvThink @carlosalcaraz is popular with the fans?
— US Open Tennis (@usopen) September 12, 2022
It’s been an hour since the match finished. pic.twitter.com/BSxXPtwRhv
ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಹೋರಾಟದಲ್ಲಿ 6-4, 2-6, 7-6(1), 6-3 ಸೆಟ್‌ಗಳಿಂದ ಅಲ್ಕರಜ್ ಗೆದ್ದು ಸಂಭ್ರಮಿಸಿದರು. ಇದರೊಂದಿಗೆ ವಿಶ್ವದ ನಂಬರ್ ಒನ್ ಶ್ರೇಯಾಂಕವನ್ನೂ ಪಡೆದಿದ್ದಾರೆ.
-
The call heard round the 🌍
— US Open Tennis (@usopen) September 12, 2022 " class="align-text-top noRightClick twitterSection" data="
How it sounded on US Open Radio when @carlosalcaraz won the #USOpen pic.twitter.com/aOB7c5fMqX
">The call heard round the 🌍
— US Open Tennis (@usopen) September 12, 2022
How it sounded on US Open Radio when @carlosalcaraz won the #USOpen pic.twitter.com/aOB7c5fMqXThe call heard round the 🌍
— US Open Tennis (@usopen) September 12, 2022
How it sounded on US Open Radio when @carlosalcaraz won the #USOpen pic.twitter.com/aOB7c5fMqX
ಸ್ಪ್ಯಾನಿಷ್ ದಂತಕಥೆ ರಾಫೆಲ್ ನಡಾಲ್ 2005 ರಲ್ಲಿ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಕಿರಿಯ ಆಟಗಾರನಾಗಿ (19 ವರ್ಷ) ಗೆದ್ದಿದ್ದರು. ಅಂದಿನಿಂದ ಆ ದಾಖಲೆಯನ್ನು ಯಾರೂ ಮುರಿದಿರಲಿಲ್ಲ. ಇದೀಗ ಅಲ್ಕರಜ್ ಈ ದಾಖಲೆ ಸರಿಗಟ್ಟಿದ್ದಾರೆ. ಈ ಗೆಲುವಿನ ಮೂಲಕ ವಿಶ್ವ ಟೆನಿಸ್‌ನಲ್ಲಿ ಕೇವಲ 19ನೇ ವಯಸ್ಸಿನಲ್ಲಿಯೇ ನಂಬರ್ ಒನ್ ಶ್ರೇಯಾಂಕ ಹೊಂದಿದ ಮೊದಲ ಆಟಗಾರನಾಗಿ ಅಲ್ಕರಜ್ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: ದಕ್ಷಿಣ ಭಾರತ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಶಿರಸಿ ಹುಡುಗನ ಚಿನ್ನದ ಬೇಟೆ.. ಹ್ಯಾಮರ್ ಎಸೆತದಲ್ಲಿ ದಾಖಲೆ ನಿರ್ಮಾಣ