ETV Bharat / sports

ನ್ಯೂಜಿಲ್ಯಾಂಡ್​ ಮೇಲೆ ಒತ್ತಡ ಹೇರಬೇಕೆಂದರೆ ಭಾರತ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕು: ತೆಂಡೂಲ್ಕರ್

ಐದನೇ ದಿನ ಭಾರತದ ವೇಗಿಗಳು ನ್ಯೂಜಿಲ್ಯಾಂಡ್​ ಮೇಲೆ ಒತ್ತಡ ಹೇರಿ, ಕಿವೀಸ್​ ತಂಡ ಅಲ್ಪಮೊತ್ತಕ್ಕೆ ಕುಸಿಯಲು ಕಾರಣರಾಗಿದ್ದರು. ಸಂಘಟಿತ ದಾಳಿ ನಡೆಸಿದ್ದ ಭಾರತೀಯ ಬೌಲರ್​ಗಳು ವಿಲಿಯಮ್ಸ​ನ್​​ ಪಡೆಯನ್ನು ಕೇವಲ 249 ರನ್​ಗಳಿಗೆ ಕಟ್ಟಿ ಹಾಕಿದ್ದರು.

Sachin Tendulkar
ಸಚಿನ್ ತೆಂಡೂಲ್ಕರ್
author img

By

Published : Jun 23, 2021, 1:16 PM IST

ಸೌತಾಂಪ್ಟನ್: ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್​ ಮತ್ತು ಭಾರತ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಣಾಹಣಿಯ 5ನೇ ದಿನ ಮುಕ್ತಾಯವಾಗಿದ್ದು, ಇಂದು ಕೊನೆಯ ದಿನವಾಗಿದೆ. ಇಂದು ಕೇವಲ 130 ಓವರ್​ಗಳು ಉಳಿದಿದ್ದು, ನ್ಯೂಜಿಲ್ಯಾಂಡ್​ಗೆ ಒತ್ತಡ ಹೇರಬೇಕೆಂದರೆ ಭಾರತ ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಐದನೇ ದಿನ ಭಾರತದ ವೇಗಿಗಳು ನ್ಯೂಜಿಲ್ಯಾಂಡ್​ ಮೇಲೆ ಒತ್ತಡ ಹೇರಿ, ಕಿವೀಸ್​ ತಂಡ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣರಾಗಿದ್ದರು. ಸಂಘಟಿತ ದಾಳಿ ನಡೆಸಿದ್ದ ಭಾರತಿಯ ಬೌಲರ್​ಗಳು ವಿಲಿಯಮ್ಸ​ನ್​​ ಪಡೆಯನ್ನು ಕೇವಲ 249 ರನ್​ಗಳಿಗೆ ಕಟ್ಟಿ ಹಾಕಿದ್ದರು. ಅದೇ ರೀತಿ ಬ್ಯಾಟಿಂಗ್​ನಲ್ಲೂ ಕೂಡಾ ಭಾರತ ತಂಡ ಉತ್ತಮವಾಗಿ ಆಡಬೇಕಿದೆ.

  • Good bowling by @MdShami11 & @ImIshant backed by some terrific fielding by 🇮🇳.

    Crucial runs were scored by Jamieson & Southee along with Williamson.

    With around 130+ overs left in the game 🇮🇳 will have to bat well if they want to put 🇳🇿 under pressure.#WTC21 | #INDvsNZ pic.twitter.com/zpWGdziODL

    — Sachin Tendulkar (@sachin_rt) June 22, 2021 " class="align-text-top noRightClick twitterSection" data=" ">

'ಮೊಹಮ್ಮದ್​ ಶಮಿ ಮತ್ತು ಇಶಾಂತ್​ ಶರ್ಮಾ ಅದ್ಭುತವಾಗಿ ಬೌಲಿಂಗ್​ ಮಾಡಿದರು. ಅದಕ್ಕೆ ಉಳಿದ ಆಟಗಾರರು ಭರ್ಜರಿ ಫೀಲ್ಡಿಂಗ್ ಮಾಡುವ ಮೂಲಕ ಸಾಥ್​​ ಕೊಟ್ಟರು. ವಿಲಿಯಮ್ಸನ್ ಜೊತೆಗೆ ಜೇಮಿಸನ್ ಮತ್ತು ಸೌಥಿ ನಿರ್ಣಾಯಕ ರನ್ ಗಳಿಸಿದ್ದು ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಯಿತು. ಇನ್ನು 130+ ಓವರ್‌ಗಳು ಬಾಕಿ ಇದ್ದು ಭಾರತ ತಂಡ ಯಾವುದೇ ಒತ್ತಡಕ್ಕೆ ಒಳಗಾಗದೆ ಬ್ಯಾಟಿಂಗ್ ಮಾಡಬೇಕಾಗುತ್ತದೆ' ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

ನಿನ್ನೆ ನ್ಯೂಜಿಲೆಂಡ್‌ ವಿರುದ್ಧ ಭಾರತ 32 ರನ್‌ಗಳ ಮುನ್ನಡೆ ಪಡೆದಿದೆ. ಕಿವೀಸ್‌ ತಂಡವನ್ನು 249 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಕೊಹ್ಲಿ ಪಡೆ, ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ್ದು, ಎರಡು ವಿಕೆಟ್‌ ನಷ್ಟಕ್ಕೆ 64 ರನ್‌ಗಳಿಸಿ ಮೀಸಲು ದಿನವಾದ ಇಂದಿಗೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ.

ನ್ಯೂಜಿಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 249 ರನ್‌ಗಳಿಸಿ ಸರ್ವ ಪತನಗೊಂಡು 32 ರನ್‌ಗಳ ಮುನ್ನಡೆ ಪಡೆಯಿತು. ಭಾರತದ ಪರ ವೇಗಿ ಶಮಿ ಮಾರಕ ಬೌಲಿಂಗ್‌ ಪ್ರದರ್ಶನ ನೀಡುವ ಮೂಲಕ ಕೇನ್‌ ವಿಲಿಯಮ್ಸನ್‌ ಪಡೆಗೆ ಆಘಾತ ನೀಡಿದರು. ಶಮಿ 8 ಮೇಡನ್‌ ಓವರ್‌ಗಳ ಸಹಿತ 4 ವಿಕೆಟ್‌ ಪಡೆದು 76 ರನ್‌ ಬಿಟ್ಟುಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.