ಹೈದರಾಬಾದ್: ಏಷ್ಯಾಕಪ್ನ್ನು 1984ರಲ್ಲಿ ಏಕದಿನ ಮಾದರಿಯಲ್ಲಿ ಆರಂಭಿಸಲಾಗಿತ್ತು. ಎರಡು ವರ್ಷಗಳ ಅಂತರದಲ್ಲಿ ನಡೆಸಲಾಗುತ್ತಿದ್ದ ಏಷ್ಯಾಕಪ್ ನಾನಾ ಕಾರಣಗಳಿಂದ ಅಂತರದಲ್ಲಿ ವ್ಯತ್ಯಾಸಗಳು ಉಂಟಾದವು. ಮೂರು, ನಾಲ್ಕು, ಐದು ವರ್ಷದ ಅಂತರದಲ್ಲಿ ಪಂದ್ಯಗಳನ್ನು ನಡೆಸಲಾಗಿದ. ಈ ಬಾರಿ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಏಕದಿನ ಮಾದರಿಯಲ್ಲಿ ಬಹಳ ವರ್ಷಗಳ ನಂತರ ಏಷ್ಯಾಕಪ್ ಆಡಿಸಲಾಯಿತು.
ಮುಂದಿನ ಏಷ್ಯಾಕಪ್ ಎರಡು ವರ್ಷದ ಅಂತರದಲ್ಲಿ ನಡೆಯಲಿದೆ. ಅಂದರೆ, 2025ನೇ ಇಸವಿಯಲ್ಲಿ ಮುಂದಿನ ಆಯೋಜನೆ ಆಗಿದೆ. ಆದರೆ ಇದು ಟಿ20 ಮಾದರಿಯಲ್ಲಿ ಆಡಿಸಲಾಗುವುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ 2026ರಲ್ಲಿ ನಡೆಯುವ ಟಿ20 ವಿಶ್ವಕಪ್ ಆಗಿದೆ. 2024ರಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ನಂತರ ಎರಡು ವರ್ಷದ ಅಂತರದಲ್ಲಿ ಮತ್ತೆ ಟಿ20 ವಿಶ್ವಕಪ್ ಆಯೋಜನೆ ಆಗಲಿರುವ ಕಾರಣ ತಂಡಗಳಿಗೆ ತಯಾರಿಯ ಉದ್ದೇಶದಿಂದ ಈ ಏಷ್ಯಾಕಪ್ ಟಿ20 ಮಾದರಿಯಲ್ಲಿ ಆಡಿಸಲಾಗುವುದು.
-
Are you ready for the best-ever decade of men’s white-ball cricket?
— ICC (@ICC) November 16, 2021 " class="align-text-top noRightClick twitterSection" data="
Eight new tournaments announced 🔥
14 different host nations confirmed 🌏
Champions Trophy officially returns 🙌https://t.co/OkZ2vOpvVQ pic.twitter.com/uwQHnna92F
">Are you ready for the best-ever decade of men’s white-ball cricket?
— ICC (@ICC) November 16, 2021
Eight new tournaments announced 🔥
14 different host nations confirmed 🌏
Champions Trophy officially returns 🙌https://t.co/OkZ2vOpvVQ pic.twitter.com/uwQHnna92FAre you ready for the best-ever decade of men’s white-ball cricket?
— ICC (@ICC) November 16, 2021
Eight new tournaments announced 🔥
14 different host nations confirmed 🌏
Champions Trophy officially returns 🙌https://t.co/OkZ2vOpvVQ pic.twitter.com/uwQHnna92F
ಈ ವರ್ಷದ ಏಷ್ಯಾಕಪ್ನ್ನು ಪಾಕಿಸ್ತಾನದಲ್ಲಿ ಆಯೋಜಿಸಲಾಗಿತ್ತು. ಆದರೆ ಭಾರತ - ಪಾಕಿಸ್ತಾನಕ್ಕೆ ಪ್ರಯಾಣ ಬೆಳಸದಿರುವ ಕಾರಣ ಶ್ರೀಲಂಕಾ ಮತ್ತು ಪಾಕ್ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯವನ್ನು ಆಡಿಸಲಾಯಿತು. ಫೆಬ್ರವರಿ ಮತ್ತು ಮಾರ್ಚ್ 2026 ರಲ್ಲಿ ಭಾರತ ಮತ್ತು ಶ್ರೀಲಂಕಾ ಆಯೋಜಿಸಲಿದೆ.
ಬೆನ್ನು ಬೆನ್ನು ಐಸಿಸಿ ಟ್ರೋಫಿಗಳು: 2023ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುವುದು. ನಂತರ 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. 2026ರಲ್ಲಿ ಮತ್ತೆ ಟಿ20 ವಿಶ್ವಕಪ್ ನಡೆಯಲಿದ್ದು, ಇದು ಭಾರತ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಇರಲಿದೆ. 2027 ಕ್ಕೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. 2028ರಲ್ಲಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ನಡೆದರೆ, 2029ರ ಚಾಂಪಿಯನ್ಸ್ ಟ್ರೋಫಿ ಭಾರತದಲ್ಲಿ ಆಯೋಜನೆಗೊಳ್ಳಲಿದೆ. 2029ರಲ್ಲಿ ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲ್ಯಾಂಡ್ ನಲ್ಲಿ ಟಿ20 ವಿಶ್ವಕಪ್ ಮತ್ತು 2031 ಏಕದಿನ ವಿಶ್ವಕಪ್ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿದೆ.
-
Blue Brigade Dominates: Asia Cup Conquered! 💙🇮🇳#AsiaCup2023 pic.twitter.com/bQbfag0JOo
— AsianCricketCouncil (@ACCMedia1) September 17, 2023 " class="align-text-top noRightClick twitterSection" data="
">Blue Brigade Dominates: Asia Cup Conquered! 💙🇮🇳#AsiaCup2023 pic.twitter.com/bQbfag0JOo
— AsianCricketCouncil (@ACCMedia1) September 17, 2023Blue Brigade Dominates: Asia Cup Conquered! 💙🇮🇳#AsiaCup2023 pic.twitter.com/bQbfag0JOo
— AsianCricketCouncil (@ACCMedia1) September 17, 2023
ಮುಂದಿನ ಏಳು ವರ್ಷ ಐಸಿಸಿ ಈವೆಂಟ್ಗಳು ಹೀಗಿರಲಿವೆ. 10 ವರ್ಷಗಳಿಂದ ಸತತ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲತೆ ಕಂಡಿರುವ ಭಾರತ ಮುಂದಿನ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಿದಲ್ಲಿ ಪ್ರಶಸ್ತಿ ಕೈ ವಶವಾಗಲಿದೆ. 10 ವರ್ಷದಲ್ಲಿ ಎಂಟು ಐಸಿಸಿ ಟ್ರೋಫಿಗಳು ಮಿಸ್ ಆಗಿದೆ. ಭಾರತ ಪ್ರಮುಖ ಹಂತದಕ್ಕೆ ತಲುಪಿ ಸೋಲು ಕಂಡಿದೆ. ಈ ವರ್ಷ ಭಾರತದಲ್ಲೇ ವಿಶ್ವಕಪ್ ಆಯೋಜನೆಗೊಂಡಿದ್ದು, ತಂಡದ ಮೇಲೆ ಹೆಚ್ಚಿನ ಭರವಸೆ ಇಡಲಾಗಿದೆ.
ಇದನ್ನೂ ಓದಿ: ಸಂಜು ಸ್ಥಾನದಲ್ಲಿ ನಾನಿದ್ದರೆ.. ಆಸ್ಟ್ರೇಲಿಯಾ ಸರಣಿಗೆ ಸ್ಯಾಮ್ಸನ್ ಆಯ್ಕೆಯ ಬಗ್ಗೆ ಇರ್ಫಾನ್ ಪ್ರತಿಕ್ರಿಯೆ