ETV Bharat / sports

ಕೋಚ್​ ದ್ರಾವಿಡ್​ರಂತೆ ಟೀಂಗೆ ಗೋಡೆಯಾದ ಕೊಹ್ಲಿ.. ವೃತ್ತಿ ಜೀವನದ 2ನೇ ನಿಧಾನಗತಿ ಅರ್ಧಶತಕ! - ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್​ ಕ್ರಿಕೆಟ್​

ವಿರಾಟ್​ ಕೊಹ್ಲಿ ಕ್ರೀಸ್​​ನಲ್ಲಿ ಸೆಟ್​ ಆದರೆ ಯಾವುದೇ ಮಾದರಿಯ ಕ್ರಿಕೆಟ್ ಆದರೂ ರನ್​ಗಳ ಮಳೆಯನ್ನೇ ಸುರಿಸುತ್ತಾರೆ. ಇದಕ್ಕಾಗಿಯೇ ಇವರನ್ನು ರನ್​ ಮಷಿನ್ ಎಂದೂ ಕರೆಯಲಾಗುತ್ತಿತ್ತು. ಆದರೆ ಕಳೆದ ಕೆಲವು ಟೆಸ್ಟ್​​ ಇನ್ನಿಂಗ್ಸ್​ಗಳಲ್ಲಿ ರನ್​ಗಳಿಸಲು ಕೊಹ್ಲಿ ಪರದಾಡುತ್ತಿದ್ದರು. ಆದರೆ ಇಂದು ತಾವೂ ರನ್​ಗಳಿಸುವುದರ ಜೊತೆಗೆ ತಂಡದ ಪತನವನ್ನು ತಡೆಯುತ್ತಿದ್ದಾರೆ.

Virat Kohli scores a resilient fifty
ವಿರಾಟ್ ಕೊಹ್ಲಿ ಅರ್ಧಶತಕ
author img

By

Published : Jan 11, 2022, 8:18 PM IST

ಕೇಪ್​ಟೌನ್​: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಹರಿಣಗಳ ದಾಳಿಗೆ ತತ್ತರಿಸಿ ವಿಕೆಟ್ ಕಳೆದುಕೊಳ್ಳುತ್ತಿದ್ದರೆ, ಇತ್ತ ನಾಯಕ ಕೊಹ್ಲಿ ಕ್ರೀಸ್​​ನಲ್ಲಿ ಗಟ್ಟಿಯಾಗಿ ನಿಂತಿದ್ದು 50 ರನ್​ ಪೂರೈಸಿದ್ದಾರೆ. ಸ್ಥಿರತೆಯನ್ನು ಕಳೆದುಕೊಂಡಿರುವ ಒತ್ತಡ ಒಂದು ಕಡೆಯಾದರೆ, ನಾಯಕನಾಗಿ ಕುಸಿತವನ್ನು ತಡೆಯುವ ಒತ್ತಡದಲ್ಲಿಯೇ ಬ್ಯಾಟಿಂಗ್ ಮಾಡಿದ ಕೊಹ್ಲಿ ತಮ್ಮ ನೈಸರ್ಗಿಕ ಆಟಕ್ಕೆ ವಿರುದ್ಧವಾಗಿ ಬ್ಯಾಟಿಂಗ್ ಮಾಡಿ ತಂಡದ ನೆರವಿಗೆ ನಿಂತಿದ್ದಾರೆ.

ವಿರಾಟ್​ ಕೊಹ್ಲಿ ಕ್ರೀಸ್​​ನಲ್ಲಿ ಸೆಟ್​ ಆದರೆ ಯಾವುದೇ ಮಾದರಿಯ ಕ್ರಿಕೆಟ್ ಆದರೂ ರನ್​ಗಳ ಮಳೆಯನ್ನೇ ಸುರಿಸುತ್ತಿದ್ದರೆ. ಇದಕ್ಕಾಗಿಯೇ ಇವರನ್ನು ರನ್​ ಮಷಿನ್ ಎಂದೂ ಕರೆಯಲಾಗುತ್ತಿತ್ತು. ಆದರೆ ಕಳೆದ ಕೆಲವು ಟೆಸ್ಟ್​​ ಇನ್ನಿಂಗ್ಸ್​ಗಳಲ್ಲಿ ರನ್​ಗಳಿಸಲು ಕೊಹ್ಲಿ ಪರದಾಡುತ್ತಿದ್ದರು. ಆದರೆ ಇಂದು ತಾವು ರನ್​ಗಳಿಸುವುದರ ಜೊತೆಗೆ ತಂಡದ ಪತನವನ್ನು ತಡೆಯುತ್ತಿದ್ದಾರೆ.

4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿರುವ ಕೊಹ್ಲಿ ಅರ್ಧಶತಕ ಪೂರ್ಣಗೊಳಿಸಿದ್ದಾರೆ. ಆದರೆ ಇದಕ್ಕಾಗಿ ಅವರು ಬರೋಬ್ಬರಿ 158 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಟೆಸ್ಟ್​ ಕ್ರಿಕೆಟ್​​ನಲ್ಲಿ ಅರ್ಧಶತಕಕ್ಕಾಗಿ ಇಷ್ಟು ಎಸೆತಗಳನ್ನು ಎದುರಿಸುವುದು ದೊಡ್ಡ ವಿಷಯವಲ್ಲ, ಆದರೆ ವಿರಾಟ್​ ಕೊಹ್ಲಿ ಇಷ್ಟು ಎಸೆತವನ್ನು ತೆಗೆದುಕೊಂಡಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಸ್ವತಃ ಭಾರತದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್​ ಕೂಡ ಕಾಮೆಂಟರಿ ಮಾಡುವಾಗ ತಾವು ಕಳೆದ ಐದಾರು ವರ್ಷಗಳಲ್ಲಿ ಕಂಡಂತಹ ಕೊಹ್ಲಿಯ ಕಷ್ಟದ ರನ್​ಗಳಿವು ಎಂದಿದ್ದರು.

ಈ ಹಿಂದೆ ಭಾರತ ತಂಡದ ವಿದೇಶಿ ಪಿಚ್​ಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ರಾಹುಲ್​ ದ್ರಾವಿಡ್ ಇದೇ ರೀತಿಯ ಆಟವನ್ನು ಸಾಕಷ್ಟು ಬಾರಿ ಆಡಿ ತಂಡಕ್ಕೆ ಅದೆಷ್ಟೋ ಸೋಲುಗಳನ್ನು ತಪ್ಪಿಸಿದ್ದಾರೆ. ಇದೀಗ ನಾಯಕನಾಗಿ ಕೊಹ್ಲಿ ಕೂಡ ಕೋಚ್​ ದಾರಿಯಲ್ಲೇ ಸಾಗುತ್ತಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿರುವ ಕೊಹ್ಲಿ 188 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 74 ರನ್​ಗಳಿಸಿದ್ದಾರೆ.

ಕೊಹ್ಲಿಯ ನಿಧಾನಗತಿ ಅರ್ಧಶತಕಗಳು

171 vs ಇಂಗ್ಲೆಂಡ್- 2012/13

158 vs ದಕ್ಷಿಣ ಆಫ್ರಿಕಾ- ಇಂದು

123 vs ಆಸ್ಟ್ರೇಲಿಯಾ- 2020/21

120 vs ಇಂಗ್ಲೆಂಡ್​- 2021

ಇದನ್ನೂ ಓದಿ:ಟಾಟಾ ಗ್ರೂಪ್​ ಜೊತೆ ಭಾರತೀಯ ಕ್ರಿಕೆಟ್ ಹೊಸ ಎತ್ತರಕ್ಕೇರುವ ಭರವಸೆ ಇದೆ: ಜಯ್ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.