ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿಗೆ ದಾಖಲೆಗಳು ಮುಖ್ಯವಲ್ಲ. ಅವರು ಬ್ಯಾಟ್ ಬೀಸಿದರೆ ದಾಖಲೆಗಳು ತಾನಾಗಿಯೇ ಸೃಷ್ಟಿಯಾಗುತ್ತವೆ. ದಕ್ಷಿಣ ಆಫ್ರಿಕ ವಿರುದ್ಧದ 2 ನೇ ಟಿ20 ಪಂದ್ಯದಲ್ಲಿ ವಿರಾಟ್ ಭರ್ಜರಿ ಬ್ಯಾಟ್ ಬೀಸಿ 49 ರನ್ ಗಳಿಸಿದ್ದರು. ಫಿಫ್ಟಿಗೆ 1 ರನ್ ಅಗತ್ಯವಿದ್ದಾಗ ಕಾರ್ತಿಕ್ ಸ್ಟ್ರೈಕ್ ನೀಡಲು ಕೇಳಿದ ಮಾತನ್ನು ತಿರಸ್ಕರಿಸಿ ಭಾರತಕ್ಕಾಗಿ ಆಡಿ ಎಂದು ಹೇಳಿದ ವಿಡಿಯೋ ಭಾರೀ ವೈರಲ್ ಆಗಿದೆ.
71 ಅಂತಾರಾಷ್ಟ್ರೀಯ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಳಿಕ ಕ್ರಿಕೆಟ್ ಲೋಕದಲ್ಲಿಯೇ ಅತಿ ಹೆಚ್ಚು ರನ್ ಗಳಿಸಿದ 2 ನೇ ಆಟಗಾರ. ಹಲವು ಮೈಲಿಗಲ್ಲನ್ನು ನೆಟ್ಟಿರುವ ವಿರಾಟ್ಗೆ ದಾಖಲೆಗಳು ಹೊಸದಲ್ಲ. ವೈಯಕ್ತಿಕ ಆಟಕ್ಕಿಂತ ತಂಡಕ್ಕಾಗಿ ಆಡಬೇಕೆಂಬ ಬದ್ಧತೆ ಈ ಹಿರಿಯ ಕ್ರಿಕೆಟಿಗನಿಗಿದೆ ಎಂಬುದು ಗುವಾಹಟಿಯಲ್ಲಿ ನಡೆದ ಹರಿಣಗಳ ವಿರುದ್ಧದ ಪಂದ್ಯದಲ್ಲಿ ಸಾಬೀತಾಯಿತು.
ವಿರಾಟ್ ಕೊಹ್ಲಿ ಬಿರುಸಾದ ಬ್ಯಾಟಿಂಗ್ಗೆ 28 ಎಸೆತಗಳಲ್ಲಿ 49 ರನ್ಗಳು ದಾಖಲಾಗಿದ್ದವು. ಇನಿಂಗ್ಸ್ ಮುಗಿಯಲು ಒಂದು ಓವರ್ ಬಾಕಿ ಇತ್ತು. ಕೊಹ್ಲಿ ಅರ್ಧಶತಕಕ್ಕೆ ಬೇಕಿದ್ದುದು ಕೂಡ ಒಂದು ರನ್. ಈ ವೇಳೆ ಇನ್ನೊಂದು ತುದಿಯಲ್ಲಿದ್ದ ಫಿನಿಶರ್ ಖ್ಯಾತಿಯ ದಿನೇಶ್ ಕಾರ್ತಿಕ್. ಕೊನೆಯ ಓವರ್ ಆಡಿದ ದಿನೇಶ್ ಮೊದಲ ನಾಲ್ಕು ಎಸೆತಗಳಲ್ಲಿ 1 ಸಿಕ್ಸರ್, 1 ಬೌಂಡರಿ ಚಚ್ಚಿದರು. ಇದಕ್ಕೆ ವಿರಾಟ್ ಚಪ್ಪಾಳೆ ತಟ್ಟಿ ಭೇಷ್ ಎಂದರು.
-
In addition to the run fest, a special moment as we sign off from Guwahati. ☺️#TeamIndia | #INDvSA | @imVkohli | @DineshKarthik pic.twitter.com/SwNGX57Qkc
— BCCI (@BCCI) October 2, 2022 " class="align-text-top noRightClick twitterSection" data="
">In addition to the run fest, a special moment as we sign off from Guwahati. ☺️#TeamIndia | #INDvSA | @imVkohli | @DineshKarthik pic.twitter.com/SwNGX57Qkc
— BCCI (@BCCI) October 2, 2022In addition to the run fest, a special moment as we sign off from Guwahati. ☺️#TeamIndia | #INDvSA | @imVkohli | @DineshKarthik pic.twitter.com/SwNGX57Qkc
— BCCI (@BCCI) October 2, 2022
ಬಳಿಕ ಇನ್ನೆರಡು ಎಸೆತ ಬಾಕಿ ಇದ್ದಾಗ ವಿರಾಟ್ ಬಳಿಕ ಬಂದ ಕಾರ್ತಿಕ್ ಕೊನೆಯ ಬಾಲ್ ಸ್ಟ್ರೈಕ್ ನೀಡುವುದಾಗಿ ಹೇಳಿದರು. ತಕ್ಷಣವೇ ಇದನ್ನು ತಿರಸ್ಕರಿಸಿದ ವಿರಾಟ್ "ಆಟವನ್ನು ನೀನೇ ಮುಗಿಸು" ಎಂಬಂತೆ ಸೂಚಿಸಿ ಅಲ್ಲಿಂದ ತೆರಳಿದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. "ಗುವಾಹಟಿ ಪಂದ್ಯದಲ್ಲಿ ರನ್ ಮಳೆಯ ಬಳಿಕ ಕಂಡುಬಂದ ವಿಶೇಷ ಕ್ಷಣ" ಎಂದು ಬರೆದುಕೊಂಡಿದೆ.
ಕಾರ್ತಿಕ್ಗೆ ಆಟ ಮುಗಿಸಲು ಹೇಳಿದ ವಿರಾಟ್ ಕೊಹ್ಲಿ ತಾನು ಎಂದಿಗೂ ವೈಯಕ್ತಿಕ ದಾಖಲೆಗಾಗಿ ಆಡುವವನಲ್ಲ ಎಂಬುದನ್ನು ತೋರಿಸಿಕೊಟ್ಟರು. ಕಾರ್ತಿಕ್ ಕೂಡ 5ನೇ ಬೌಲ್ ಅನ್ನು ಸಿಕ್ಸರ್ಗೆ ಅಟ್ಟಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಕೊನೆಗೆ ವಿರಾಟ್ ಕೊಹ್ಲಿಗೆ ಸ್ಟ್ರೈಕ್ ಸಿಗದೆ 1 ರನ್ನಿಂದ ಅರ್ಧಶತಕ ದಾಖಲಿಸುವ ಅವಕಾಶ ಕೈ ತಪ್ಪಿತು.
ಪಂದ್ಯದಲ್ಲಿ 237 ರನ್ಗಳ ಶಿಖರ ಕಟ್ಟಿದ ಭಾರತಕ್ಕೆ ದಕ್ಷಿಣ ಆಫ್ರಿಕಾ ತಕ್ಕ ಫೈಟ್ ನೀಡಿತು. ಕಿಲ್ಲರ್ ಡೇವಿಡ್ ಮಿಲ್ಲರ್ ಅದ್ಭುತ ಶತಕ, ಕ್ವಿಂಟನ್ ಡಿ ಕಾಕ್ರ ಅರ್ಧಶತಕ ಹೊರತಾಗಿಯೂ 16 ರನ್ಗಳಿಂದ ಪಂದ್ಯವನ್ನು ಸೋತಿತು. ಭಾರತ ಸರಣಿಯನ್ನು 2-0 ಅಂತರದಲ್ಲಿ ಜಯಿಸಿತು.
ಓದಿ: ಡೋಪಿಂಗ್ ಟೆಸ್ಟ್ನಲ್ಲಿ ಸಿಕ್ಕಿಬಿದ್ದ ಜಾವೆಲಿನ್ ಪಟು: ಶಿವಪಾಲ್ ಸಿಂಗ್ಗೆ 4 ವರ್ಷ ಶಿಕ್ಷೆ