ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​​​​ನಲ್ಲಿ 13 ವರ್ಷ ಪೂರೈಸಿದ ರನ್‌ ಮಷಿನ್‌ ವಿರಾಟ್ ಕೊಹ್ಲಿ​

author img

By

Published : Aug 18, 2021, 10:23 AM IST

ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​​​ಗೆ ಪದಾರ್ಪಣೆ ಮಾಡಿ ಇಂದಿಗೆ 13 ವರ್ಷ ತುಂಬಿದೆ. ಈ 13 ವರ್ಷಗಳಲ್ಲಿ ಅವರು ಅದೆಷ್ಟೋ ದಿಗ್ಗಜರ ದಾಖಲೆ ಮುರಿದಿದ್ದು, ಐಸಿಸಿ ರ‍್ಯಾಂಕಿಂಗ್​​​ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

virat-kohli-
ನಾಯಕ ವಿರಾಟ್

ನವದೆಹಲಿ: ಭಾರತ ಕ್ರಿಕೆಟ್​​​ ತಂಡದ ರನ್‌ ಮಷಿನ್​ ಎಂದೇ ಪರಿಗಣಿಸಲ್ಪಟ್ಟ ನಾಯಕ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​​ಗೆ ಪದಾರ್ಪಣೆ ಮಾಡಿ ಇಂದಿಗೆ 13 ವರ್ಷವಾಗುತ್ತಿದೆ. 2008ರ ಆಗಸ್ಟ್ 18ರಂದು ಏಕದಿನ ಪಂದ್ಯವನ್ನಾಡುವ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಕಾಲಿರಿಸಿದ್ದರು.

ಶ್ರೀಲಂಕಾ ಎದುರು ಮೊದಲ ಏಕದಿನ ಪಂದ್ಯವಾಡಿದ ವಿರಾಟ್​​, ಕೇವಲ 22 ಎಸೆತಗಳನ್ನೆದುರಿಸಿ ಒಂದು ಬೌಂಡರಿ ಮೂಲಕ 12 ರನ್ ಬಾರಿಸಿದ್ದರು. ಬಳಿಕ ಲಂಕಾದ ಬೌಲರ್ ನುವಾನ್ ಕುಲಸೇಖರ ಎಸೆತದಲ್ಲಿ ವಿಕೆಟ್​ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲೊಪ್ಪಿಕೊಂಡಿತ್ತು. ಕೇವಲ 146 ರನ್​​​​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡಿತ್ತು. ಆದರೆ ಲಂಕಾ ಇನ್ನೂ 91 ಎಸೆತಗಳು ಬಾಕಿ ಇರುವಾಗಲೇ ನಿಗದಿತ ಮೊತ್ತ ಕಲೆಹಾಕಿ ಗೆಲುವಿನ ನಗೆ ಬೀರಿತ್ತು.

ಇನ್ನು ಕೊಹ್ಲಿ ತನ್ನ ಮೊದಲ ಶತಕ ಸಿಡಿಸಲು 14 ಪಂದ್ಯ ಕಾಯಬೇಕಾಯಿತು. ​2009ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ತಮ್ಮ ಮೊದಲ ಶತಕ ದಾಖಲಿಸಿದರು. ಇದಾದ ಬಳಿಕ ಕೊಹ್ಲಿ ವೈಫಲ್ಯ ಕಂಡಿದ್ದು ಕಡಿಮೆ. ಬ್ಯಾಟಿಂಗ್​​​ಗಾಗಿ ಮೈದಾನಕ್ಕಿಳಿದರೆ ಒಂದಲ್ಲೊಂದು ದಾಖಲೆಗಳು ಕೊಹ್ಲಿ ಹೆಸರು ಸೇರಿಕೊಳ್ಳುತ್ತಿವೆ.

ಈವರೆಗೆ ಕೊಹ್ಲಿ ಒಟ್ಟು 254 ಏಕದಿನ ಪಂದ್ಯವಾಡಿದ್ದು, 59.07ರ ಸರಾಸರಿಯಲ್ಲಿ 12,169 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಪಾಕಿಸ್ತಾನ ವಿರುದ್ಧದ 183ರನ್ ವೈಯಕ್ತಿಕ ಅತೀ ಹೆಚ್ಚು ರನ್​ ಆಗಿದೆ. ಬಳಿಕ 2011ರಲ್ಲಿ,​​ ವೆಸ್ಟ್ ಇಂಡೀಸ್​​ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.