ದುಬೈ: 122 ರನ್, 61 ಬಾಲ್, 12 ಬೌಂಡರಿ, 6 ಸಿಕ್ಸರ್.. ಇದು ವಿರಾಟ್ ರೂಪದ ಕೊಹ್ಲಿಯ ಬಿಗ್ ಕಮ್ಬ್ಯಾಕ್ ಇನಿಂಗ್ಸ್. ಏಷ್ಯಾ ಕಪ್ ಟೂರ್ನಿಯ ಅಫ್ಘಾನಿಸ್ಥಾನ ವಿರುದ್ಧ ಕೊಹ್ಲಿ ವೀರಾವೇಶದ ಶತಕ ಸಾಧನೆ ಮಾಡಿದ್ದಾರೆ. ಅದೂ 3 ವರ್ಷಗಳ ಬಳಿಕ ಎಂಬುದು ವಿಶೇಷ. ಇಷ್ಟಲ್ಲದೇ, 71 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಇದೇ ಚೊಚ್ಚಲ ಶತಕವಾಗಿದೆ.
ಒಂದು ಶತಕ ಹಲವು ದಾಖಲೆ: ವಿರಾಟ್ ಕೊಹ್ಲಿ ಸಿಡಿಸಿದ ಒಂದು ಶತಕ ಹಲವು ದಾಖಲೆಗಳನ್ನು ಬರೆದಿದೆ. ಭಾರತದ ಪರವಾಗಿ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ (122) ಬಾರಿಸಿದ ಮೊದಲ ಭಾರತೀಯ ಆಟಗಾರ. ಕಡಿಮೆ ಇನಿಂಗ್ಸ್ನಲ್ಲಿ ಅಧಿಕ ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಸಾಧನೆ ಮಾಡಿದರು.
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೂ 71 ಶತಕ ಸಿಡಿಸಿದ್ದು, ಇದಕ್ಕಾಗಿ ಅವರು 522 ಇನಿಂಗ್ಸ್ ತೆಗೆದುಕೊಂಡಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 782 ಇನಿಂಗ್ಸ್ಗಳಲ್ಲಿ 100 ಶತಕಗಳನ್ನು ಸಿಡಿಸಿದ್ದಾರೆ.
-
There it is! 💯 for @imVkohli 👏👏
— BCCI (@BCCI) September 8, 2022 " class="align-text-top noRightClick twitterSection" data="
His first in T20Is and 71st in International Cricket.
Live - https://t.co/1UkuWxy3Ee #INDvAFG #AsiaCup2022 pic.twitter.com/2Yeakk1oLc
">There it is! 💯 for @imVkohli 👏👏
— BCCI (@BCCI) September 8, 2022
His first in T20Is and 71st in International Cricket.
Live - https://t.co/1UkuWxy3Ee #INDvAFG #AsiaCup2022 pic.twitter.com/2Yeakk1oLcThere it is! 💯 for @imVkohli 👏👏
— BCCI (@BCCI) September 8, 2022
His first in T20Is and 71st in International Cricket.
Live - https://t.co/1UkuWxy3Ee #INDvAFG #AsiaCup2022 pic.twitter.com/2Yeakk1oLc
ರಿಕ್ಕಿ ಪಾಂಟಿಂಗ್ ದಾಖಲೆ ಉಡೀಸ್: ಭರ್ಜರಿ ಕಮ್ಬ್ಯಾಕ್ ಮಾಡಿದ ವಿರಾಟ್ ಸಿಡಿಸಿದ ಮೊದಲ ಶತಕದಲ್ಲೇ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ರಿಕಿ ಪಾಂಟಿಂಗ್ ಅವರ ದಾಖಲೆಯ 71 ಶತಕಗಳ ಸಾಧನೆಯನ್ನು ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಜೊತೆಗೆ ಜಂಟಿಯಾಗಿ ಎರಡನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.
1024 ದಿನಗಳ ಬಳಿಕ ಶತಕ: ವಿರಾಟ್ ಕೊಹ್ಲಿಯ ಶತಕದ ಬರ ಕೊನೆಗೂ ನೀಗಿದೆ. 33 ವರ್ಷದ ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 1024 ದಿನಗಳ ಬಳಿಕ ಶತಕ ಸಿಡಿಸಿದ್ದಾರೆ. ಇದು ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಶತಕವಾದರೆ, ಒಟ್ಟಾರೆ 71 ನೇ ಶತಕವಾಗಿದೆ.
ವಿರಾಟ್ ಕೊಹ್ಲಿ 3 ವರ್ಷಗಳ ನಂತರ, ನಿಖರವಾಗಿ 1020 ದಿನಗಳ ನಂತರ ಅಫ್ಘಾನಿಸ್ತಾನದ ವಿರುದ್ಧ ಡೆಡ್ ರಬ್ಬರ್‌ನಲ್ಲಿ ಭಾರತಕ್ಕಾಗಿ ಹೆಜ್ಜೆ ಹಾಕಿದಾಗ ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿದರು. ಮೊಹಮ್ಮದ್ ನಬಿ ಟಾಸ್ ಗೆದ್ದು ಅಫ್ಘಾನಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ ಭಾರತ 20 ಓವರ್‌ಗಳಿಗೆ 212 ರನ್ ಬಾರಿಸಿತು. ಮಾಜಿ ನಾಯಕ ಕೇವಲ 61 ಎಸೆತಗಳಲ್ಲಿ ಔಟಾಗದೇ 122 ರನ್ ಗಳಿಸಿ ಪರಾಕ್ರಮ ಮೆರೆದರು.
2019 ರ ನವೆಂಬರ್‌ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಹಗಲು - ರಾತ್ರಿ ಟೆಸ್ಟ್‌ನಲ್ಲಿ ಕೊಹ್ಲಿ ಕೊನೆಯ ಬಾರಿಗೆ ಶತಕ ಗಳಿಸಿದ್ದರು. ಅದಾದ ಬಳಿಕ ಮೂರು ವರ್ಷಗಳ ನಂತರ 2022ರ ಸೆಪ್ಟೆಂಬರ್ 8 ರಂದು ಶತಕ ಬಾರಿಸುವ ಮೂಲಕ ಶತಕದ ಕಳಂಕ ಕಳೆದುಕೊಂಡರು.
ಭಾರತದ ಇನಿಂಗ್ಸ್: ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 20 ಓವರ್ಗಳಲ್ಲಿ 212 ರನ್ ಬಾರಿಸಿತು. ವಿರಾಟ್ ರೂಪ ತೋರಿದ ಕೊಹ್ಲಿ 61 ಎಸೆತಗಳಲ್ಲಿ 122 ರನ್ ಬಾರಿಸಿದರು. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ ಕಾರಣ ಆರಂಭಿಕನಾಗಿ ನಾಯಕ ಕೆ ಎಲ್ ರಾಹುಲ್ ಜೊತೆ ಕಣಕ್ಕಿಳಿದ ವಿರಾಟ್ ಮೊದಲ ವಿಕೆಟ್ಗೆ 119 ರನ್ ಪೇರಿಸಿದರು.
ಈ ಪಂದ್ಯದಲ್ಲಿ ನಾಯಕತ್ವ ವಹಿಸಿಕೊಂಡ ಕೆ ಎಲ್ ರಾಹುಲ್ ಟೂರ್ನಿಯಲ್ಲಿ ಮೊದಲ ಅರ್ಧಶತಕ ಬಾರಿಸಿದರು. 41 ಎಸೆತಗಳಲ್ಲಿ 62 ರನ್ ಬಾರಿಸಿದರು. ಸೂರ್ಯಕುಮಾರ್ ಯಾದವ್ 6 ಗಳಿಸಿ ಔಟಾದರೆ, ರಿಷಭ್ ಪಂತ್ 20 ರನ್ ಗಳಿಸಿದರು. ಇನ್ನು ಆಫ್ಘನ್ ಬೌಲಿಂಗ್ ಪಡೆ ಸಂಪೂರ್ಣವಾಗಿ ನೆಲಕಚ್ಚಿತು. ಫರೀದ್ ಅಹ್ಮದ್ 4 ಓವರ್ಗಳಲ್ಲಿ 57 ರನ್ ಚಚ್ಚಿಸಿಕೊಂಡು 2 ವಿಕೆಟ್ ಮಾತ್ರ ಕಿತ್ತರು.
ಕಡಿಮೆ ಇನಿಂಗ್ಸ್, ಅಧಿಕ ಶತಕ
ಸಚಿನ್ ತೆಂಡೂಲ್ಕರ್ - 664 ಪಂದ್ಯಗಳಲ್ಲಿ 100 ಶತಕ
ರಿಕಿ ಪಾಂಟಿಂಗ್ - 560 ಪಂದ್ಯಗಳಲ್ಲಿ 71 ಶತಕ
ವಿರಾಟ್ ಕೊಹ್ಲಿ - 468 ಪಂದ್ಯಗಳಲ್ಲಿ 71 ಶತಕ
ಓದಿ: ICC T20 World Cup.. ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಜೊತೆ ಸೆಣಸಾಡಲಿದೆ ಭಾರತ