ETV Bharat / sports

Virat Kohli: ಜಾಕ್ವೆಸ್​ ಕಾಲಿಸ್​ ದಾಖಲೆ ಮುರಿದು ಮುನ್ನುಗ್ಗಿದ ಕೊಹ್ಲಿ; 25,500 ರನ್​ ಪೂರ್ಣಗೊಳಿಸಿದ ಭಾರತದ 2ನೇ ಆಟಗಾರ​!

ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ವಿರಾಟ್ ಕೊಹ್ಲಿ 25,500 ರನ್​ಗಳನ್ನು ಪೂರ್ಣಗೊಳಿಸಿ ಹೊಸ ದಾಖಲೆ ಸೃಷ್ಟಿಸಿದರು.

ಜಾಕ್ವೆಸ್​ ಕಾಲಿಸ್​ ದಾಖಲೆ ಮುರಿದ ಕೊಹ್ಲಿ
ಜಾಕ್ವೆಸ್​ ಕಾಲಿಸ್​ ದಾಖಲೆ ಮುರಿದ ಕೊಹ್ಲಿ
author img

By

Published : Jul 21, 2023, 10:40 AM IST

ಪೋರ್ಟ್​ ಆಫ್​ ಸ್ಪೇನ್​ : ವೆಸ್ಟ್​ ಇಂಡೀಸ್ ಮತ್ತು ಭಾರತದ ನಡುವಣ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತೊಂದು ವಿಕ್ರಮ ಸಾಧಿಸಿದರು. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಕ್ವೆಸ್ ಕಾಲಿಸ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 25,500 ರನ್​ಗಳನ್ನು ಪೂರೈಸುವ ಮೂಲ ವಿಶ್ಕವದ 5ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕೊಹ್ಲಿ ತಮ್ಮ ವೃತ್ತಿಜೀವನದ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು ಗಮನಾರ್ಹ.

ಗುರುವಾರ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಪ್ರಾರಂಭವಾದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 161 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 87 ರನ್ ಗಳಿಸುವ ಮೂಲಕ ಅರ್ಧಶತಕ ಬಾರಿಸಿ, ಇಂದಿನ ಆಟಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದಾರೆ. ವೈಯಕ್ತಿಕವಾಗಿ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾದರು.

ಪ್ರಸ್ತುತ ವಿರಾಟ್​ ಕೊಹ್ಲಿ 500 ಪಂದ್ಯಗಳಲ್ಲಿ 53.67 ಸರಾಸರಿಯೊಂದಿಗೆ 25,548 ರನ್​ ಗಳಿಸಿದ್ದಾರೆ. ಈ ಪೈಕಿ 75 ಶತಕ ಮತ್ತು 132 ಅರ್ಧ ಶತಕಗಳು ಸೇರಿವೆ. 254 ರನ್ ಇವರ ಅತ್ಯುತ್ತಮ ಸ್ಕೋರ್ ಆಗಿದೆ. ಈ ಮೂಲಕ 519 ಪಂದ್ಯಗಳಲ್ಲಿ 62 ಶತಕ ಮತ್ತು 149 ಅರ್ಧಶತಕಗಳೊಂದಿಗೆ 25,534 ರನ್ ಗಳಿಸಿದ ಕಾಲಿಸ್ ಅವರ ದಾಖಲೆಯನ್ನು ಕೊಹ್ಲಿ ಬ್ರೇಕ್ ಮಾಡಿದ್ದಾರೆ. ಕ್ರಿಕೆಟ್​ ದೇವರೆಂಬ ಖ್ಯಾತಿಯ ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಗಿದ್ದಾರೆ. ಪ್ರಸ್ತುತ, ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಮಹೇಲಾ ಜಯವರ್ಧನೆ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ಕುಮಾರ ಸಂಗಕ್ಕಾರ ಕೊಹ್ಲಿಗಿಂತ ಮುಂದಿದ್ದಾರೆ.

111 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಕೊಹ್ಲಿ 49.38 ಸರಾಸರಿಯಲ್ಲಿ 8,642 ರನ್ ಗಳಿಸಿದ್ದಾರೆ. ಇದರಲ್ಲಿ 28 ​​ಶತಕ ಮತ್ತು 30 ಅರ್ಧಶತಕಗಳು ಒಳಗೊಂಡಿವೆ. ಟೆಸ್ಟ್‌ನಲ್ಲಿ ಭಾರತದ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅದರಂತೆ 274 ಏಕದಿನ ಪಂದ್ಯಗಳಲ್ಲಿ 57.32 ಸರಾಸರಿಯಲ್ಲಿ 46 ಶತಕ ಮತ್ತು 65 ಅರ್ಧ ಶತಕಗಳೊಂದಿಗೆ 12,898 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಎರಡನೇ ಮತ್ತು ವಿಶ್ವದ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೂ ಹೌದು. ಟಿ20 ಸ್ವರೂಪದಲ್ಲಿ 115 ಪಂದ್ಯಗಳಲ್ಲಿ 52.73 ಸರಾಸರಿಯಲ್ಲಿ 4,008 ರನ್ ಸಂಪಾದಿಸಿದ್ದಾರೆ. ಈ ಮಾದರಿಯಲ್ಲಿ ಒಂದು ಶತಕ ಮತ್ತು 37 ಅರ್ಧಶತಕಗಳು ಇವರ ಖಾತೆಯಲ್ಲಿದ್ದು, 122 ಅತ್ಯುತ್ತಮ ಸ್ಕೋರ್ ಆಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರರು:

  • ಸಚಿನ್ ತೆಂಡೂಲ್ಕರ್ - 34,357 ರನ್ 664 ಪಂದ್ಯ
  • ಕುಮಾರ್ ಸಂಗಕ್ಕಾರ (ಶ್ರೀಲಂಕಾ) - 28,016 ರನ್ 594 ಪಂದ್ಯ
  • ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 27,483 ರನ್ 560 ಪಂದ್ಯ
  • ಮಹೇಲಾ ಜಯವರ್ಧನೆ (ಶ್ರೀಲಂಕಾ) - 25,957 ರನ್ 652 ಪಂದ್ಯ
  • ವಿರಾಟ್ ಕೊಹ್ಲಿ (ಭಾರತ) - 25,548 ರನ್ 500 ಪಂದ್ಯ
  • ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) - 25,534 ರನ್ 519 ಪಂದ್ಯ
  • ರಾಹುಲ್ ದ್ರಾವಿಡ್ (ಭಾರತ) - 24,208 ರನ್ 509 ಪಂದ್ಯ

ಇದನ್ನೂ ಓದಿ: IND vs WI 2nd Test: ಭಾರತ-ವೆಸ್ಟ್‌ ಇಂಡೀಸ್‌ 2ನೇ ಟೆಸ್ಟ್​; ಮೊದಲ ದಿನ ಭಾರತ 288/4

ETV Bharat Logo

Copyright © 2024 Ushodaya Enterprises Pvt. Ltd., All Rights Reserved.