ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆಡಲಿರುವ ಟೀಂ ಇಂಡಿಯಾದ ರನ್ ಮಿಷನ್ ವಿರಾಟ್ ಕೊಹ್ಲಿ ಇತಿಹಾಸ ಬರೆಯಲಿದ್ದಾರೆ. ಇದು ಅವರ 500ನೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಕಿಂಗ್ ಕೊಹ್ಲಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ 76 ರನ್ ಗಳಿಸಿ ಶತಕ ತಪ್ಪಿಸಿಕೊಂಡ ಕೊಹ್ಲಿ, ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡವ ಮೂಲಕ ಗೆಲುವಿಗೆ ಕಾರಣರಾದರು. ಏಕದಿನ, ಟಿ20 ಮತ್ತು ಚುಟಕು ಪಂದ್ಯಗಳ ಹೊರತಾಗಿ ಟೆಸ್ಟ್ನಲ್ಲಿಯೂ ಭರವಸೆ ಹೆಚ್ಚಿಸಿಕೊಂಡಿರುವ ಅವರು ಇಂದು ನಡೆಯುವ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿಯೂ ಉತ್ತಮ ಕೊಡುಗೆ ನೀಡುವ ಉತ್ಸಾಹದಲ್ಲಿದ್ದಾರೆ. ಇದು ಅವರ 500ನೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದರಿಂದ ಅಭಿಮಾನಿಗಳು ಕೂಡ ಕಾತರತೆಯಿಂದ ಕಾಯುತ್ತಿದ್ದಾರೆ.
-
500 & Counting 😃
— BCCI (@BCCI) July 20, 2023 " class="align-text-top noRightClick twitterSection" data="
Hear from #TeamIndia Head Coach Rahul Dravid and milestone man Virat Kohli ahead of a special occasion 👌🏻👌🏻#WIvIND | @imVkohli pic.twitter.com/cJBA7CVcOj
">500 & Counting 😃
— BCCI (@BCCI) July 20, 2023
Hear from #TeamIndia Head Coach Rahul Dravid and milestone man Virat Kohli ahead of a special occasion 👌🏻👌🏻#WIvIND | @imVkohli pic.twitter.com/cJBA7CVcOj500 & Counting 😃
— BCCI (@BCCI) July 20, 2023
Hear from #TeamIndia Head Coach Rahul Dravid and milestone man Virat Kohli ahead of a special occasion 👌🏻👌🏻#WIvIND | @imVkohli pic.twitter.com/cJBA7CVcOj
ಇದುವರೆಗೆ 110 ಟೆಸ್ಟ್, 274 ಏಕದಿನ, 115 ಟಿ20 ಹಾಗೂ 237 ಐಪಿಎಲ್ ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ, 20 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಎಲ್ಲ ಮಾದರಿಯಲ್ಲಿಯೂ ಉತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ, ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ಜನ ಮನ್ನಣೆ ಗಳಿಸಿದ್ದಾರೆ. ಇಂದು ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯಕ್ಕೆ ಅಣಿಯಾಗುತ್ತಿದ್ದು, ಅವರ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ಆಕಾಶ್ ಚೋಪ್ರಾ, ವಾಸಿಂ ಜಾಫರ್, ಪ್ರಗ್ಯಾನ್ ಓಜಾ ಸೇರಿದಂತೆ ಅವರಿಗೆ ಶುಭಾಶಯ ಕೋರಿದ್ದಾರೆ. ಬಿಸಿಸಿಐ ವಿಶೇಷ ಪೋಸ್ಟರ್ ಕೂಡ ಮಾಡಿ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
''ಕೊಹ್ಲಿ ಪಾಲಿಗೆ ಇಂದಿನ ಟೆಸ್ಟ್ 500ನೇ ಪಂದ್ಯ ಎಂಬುದು ನನಗೆ ಗೊತ್ತಿಲ್ಲ. ಕೇವಲ ಒಂದು ಅಂಕಿಗೆ ನಾನು ಶ್ರೇಷ್ಠ ಎಂದು ಹೇಳಲಾರೆ. ಅದನ್ನು ಕೇಳಿದ ಮಾತ್ರ ನನಗೆ ಅದ್ಭುತ ಎಂದೆನಿಸುತ್ತದೆ. ಇದು ನಿಜಕ್ಕೂ ರೋಮಾಂಚನ. ಅವರು ಅನೇಕ ಹುಡುಗ ಮತ್ತು ಹುಡುಗಿಯರಿಗೆ ಸ್ಫೂರ್ತಿಯಾಗಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕೊಹ್ಲಿ ಅವರ ಸಾಧನೆ ಬಗ್ಗೆ ಅವರ ಅಂಕಿ - ಅಂಶಗಳು ಹೇಳುತ್ತವೆ. ಇವುಗಳೆಲ್ಲ ಪುಸ್ತಕದಲ್ಲಿ ಉಲ್ಲೇಖವಾಗುತ್ತಿವೆ. ಇದಕ್ಕೆಲ್ಲ ಕಾರಣ ಅವರ ಮಾಡಿದ ತ್ಯಾಗ ಹಾಗೂ ಪಟ್ಟ ಕಷ್ಟ. ಇದು ಹೊರಗಿನವರಿಗೆ ಯಾರಿಗೂ ಕಾಣಿಸುವುದಿಲ್ಲ. ಇದರ ಫಲವಾಗಿ ಅವರು ಇದೀಗ 500ನೇ ಪಂದ್ಯವಾಡುತ್ತಿದ್ದಾರೆ. ಅವರು ಇನ್ನೂ ತುಂಬಾ ಬಲಶಾಲಿಯಾಗಿದ್ದಾರೆ, ತುಂಬಾ ಫಿಟ್ ಆಗಿದ್ದಾರೆ. ಕೊಹ್ಲಿ ಸದ್ಯ 500 ಪಂದ್ಯಗಳನ್ನು ಆಡುವ ಮೂಲಕ ತಂಡಕ್ಕೆ ಶಕ್ತಿ ಮತ್ತು ಉತ್ಸಾಹವನ್ನು ತುಂಬಿದ್ದಾರೆ." ಎಂದು ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಕೊಹ್ಲಿಯ ಸಾಧನೆಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ಲೋಕದ ಪರಂಪರೆಯ ಪ್ರತಿಬಿಂಬ ಎಂದು ಅವರ ಸಾಧನಾ ಹಾದಿಯನ್ನು ಹಾಡಿ ಹೊಗಳಿರುವ ವಿಡಿಯೋ ಒಂದನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.
"ಕ್ರಿಕೆಟ್ಗಾಗಿ ವಿರಾಟ್ ಕೊಹ್ಲಿ ಅವರು ತೆಗೆದುಕೊಂಡ ನಿರ್ಧಾರ ಮತ್ತು ಸಮರ್ಪಣೆ ನಮಗೆಲ್ಲರಿಗೂ ಗೊತ್ತು. ಇದಕ್ಕಾಗಿ ಅವರು ಇಡೀ ತಮ್ಮ ಜೀವನವನ್ನು ಸನ್ಯಾಸಿಯಂತೆ ಕಳೆದರು. ಅವರ ಇಡೀ ಜೀವನವೇ ಕ್ರಿಕೆಟ್ ಆಗಿದ್ದರಿಂದ ಈ ಮಟ್ಟಕ್ಕೆ ಬಂದು ತಲುಪಿದ್ದಾರೆ. ವಿರಾಟ್ ಕೊಹ್ಲಿ ಅವರು ಈ ಸುಂದರ ಆಟದ ಬ್ರಾಂಡ್ ಅಂಬಾಸಿಡರ್. ಅವರ ಸೇವೆಗಳು ಭಾರತೀಯರಿಗೆ ಮಾತ್ರವಲ್ಲ, ಎಲ್ಲರಿಗೂ ಮಾದರಿ ಎಂದು ಭಾರತೀಯ ಮಾಜಿ ಕ್ರಿಕೆಟ್ ಪಟು ಆಕಾಶ್ ಚೋಪ್ರಾ ಬಣ್ಣಿಸಿದ್ದಾರೆ. ಪ್ರಗ್ಯಾನ್ ಓಜಾ ಕೂಡ ಟ್ವೀಟ್ ಮಾಡಿ ಕೊಹ್ಲಿಗೆ ವಿಶ್ ಮಾಡಿದ್ದಾರೆ. "ಕ್ರೀಡಾ ಜೀವನದಲ್ಲಿ ಇದೊಂದು ವಿಶೇಷ ಸಾಧನೆಯಾಗಿದೆ. ಕೆಲವೇ ಜನರು ಇಂತಹ ಸಾಧನೆ ಮಾಡುತ್ತಾರೆ. ಅವರು ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಇನ್ನಿಂಗ್ಸ್ ಆಡಲಿ ಎಂದು ಹಾರೈಸೋಣ ಎಂದಿದ್ದಾರೆ.
"ಎಲ್ಲರೂ 500 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಂತಹ ಸಾಧನೆ ಮಾಡುವುದು ಕಷ್ಟ. ವಿರಾಟ್ ಕೊಹ್ಲಿ ಅವರು ನಿರಂತರವಾಗಿ ರನ್ ದಾಹವನ್ನು ನೀಗಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಫಿಟ್ನೆಸ್ ಮಂತ್ರ ಅವರ ವಿಶೇಷತೆ. ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಇದುವರೆಗೆ 75 ಶತಕಗಳನ್ನು ಬಾರಿಸುವುದು ಸಾಮಾನ್ಯ ವಿಷಯವಲ್ಲ. ಅವರ ಶಿಸ್ತು, ಸಮರ್ಪಣಾ ಮನೋಭಾವ ಮತ್ತು ದೃಢಸಂಕಲ್ಪವು ಪ್ರಸ್ತುತ ಕ್ರಿಕೆಟ್‌ನಲ್ಲಿ ಅದ್ಭುತವಾಗಿದೆ. ಅವರು ವಿಶ್ವದಾದ್ಯಂತ ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ'' ಎಂದು ವಾಸಿಂ ಜಾಫರ್ ಕೂಡ ವಿರಾಟ್ ಅವರ ಸಾಧನೆಯನ್ನು ಶ್ಲಾಘಿಸಿದರು.
ವಿರಾಟ್ ಕೊಹ್ಲಿ 2008ರಲ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಗುರುವಾರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿದರೆ, ಕೊಹ್ಲಿ 500 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಹಾಗೂ ರಾಹುಲ್ ದ್ರಾವಿಡ್ ಕ್ರಮವಾಗಿ ಈ ಪಟ್ಟಿಯಲ್ಲಿದ್ದಾರೆ. ಇಂದಿನ ಪಂದ್ಯ ಉಭಯ ದೇಶಗಳ ನಡುವಿನ 100ನೇ ಟೆಸ್ಟ್ ಪಂದ್ಯವಾಗಿದೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ: ಇಂದು ಭಾರತ-ವೆಸ್ಟ್ ಇಂಡೀಸ್ 100ನೇ ಟೆಸ್ಟ್ ಪಂದ್ಯ: ಉಭಯ ತಂಡಗಳ ಟೆಸ್ಟ್ ಜರ್ನಿಯ ಕುರಿತು ಒಂದಿಷ್ಟು ಮಾಹಿತಿ..