ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ನ ಮೂರನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗುತ್ತಿದೆ. ಮೊದಲ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲು ಕಂಡಿದ್ದ ಗುಜರಾತ್ ಜೈಟ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನಿನ್ನೆ ಮಾಡಿದ ತಪ್ಪನ್ನು ಇಂದು ಗುಜರಾತ್ ತಿದ್ದಿಕೊಳ್ಳಲಿದೆಯೇ ಎಂಬುದನ್ನು ನೋಡಬೇಕಿದೆ.
ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ(ವಿಕೆಟ್ ಕೀಪರ್/ ನಾಯಕಿ), ಶ್ವೇತಾ ಸೆಹ್ರಾವತ್, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಕಿರಣ್ ನವಗಿರೆ, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್‌ವಾಡ್
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡನರ್, ಸೋಫಿಯಾ ಡಂಕ್ಲೆ, ಅನ್ನಾಬೆಲ್ ಸದರ್ಲ್ಯಾಂಡ್, ಕಿಮ್ ಗಾರ್ತ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ದಯಾಲನ್ ಹೇಮಲತಾ, ಸ್ನೇಹ ರಾಣಾ(ನಾಯಕಿ), ತನುಜಾ ಕನ್ವರ್, ಮಾನ್ಸಿ ಜೋಶಿ
-
🚨 Toss Update 🚨
— Women's Premier League (WPL) (@wplt20) March 5, 2023 " class="align-text-top noRightClick twitterSection" data="
The @GujaratGiants have opted to bat first against @UPWarriorz in Match 3️⃣ of the #TATAWPL. #UPWvGG pic.twitter.com/RLXgMZEL6P
">🚨 Toss Update 🚨
— Women's Premier League (WPL) (@wplt20) March 5, 2023
The @GujaratGiants have opted to bat first against @UPWarriorz in Match 3️⃣ of the #TATAWPL. #UPWvGG pic.twitter.com/RLXgMZEL6P🚨 Toss Update 🚨
— Women's Premier League (WPL) (@wplt20) March 5, 2023
The @GujaratGiants have opted to bat first against @UPWarriorz in Match 3️⃣ of the #TATAWPL. #UPWvGG pic.twitter.com/RLXgMZEL6P
ಮೊದಲ ಸೋಲಿನ ನಂತರ ಮಾತನಾಡಿದ ಗುಜರಾತ್ ಜೈಟ್ಸ್ನ ನಾಯಕಿ ಸ್ನೇಹ ರಾಣಾ,"ಪ್ರತಿ ವಿಭಾಗದಲ್ಲೂ ನಾವು ಹಿಂದುಳಿದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆರಂಭಿಕ ವಿಕೆಟ್ ಪಡೆಯುವುದರಲ್ಲಿ ಯಶಸ್ವಿಯಾದೆವು. ಬೃಹತ್ ಗುರಿ ಬೆನ್ನುತ್ತಿದ್ದ ನಮಗೆ ಒತ್ತಡದ ಕಾರಣ ಬೇಗ ವಿಕೆಟ್ ಕಳೆದುಕೊಂಡೆವು. ತಂಡವಾಗಿ ಉತ್ತಮವಾಗಿದ್ದೇವೆ. ಪ್ರತೀ ಪಂದ್ಯದಲ್ಲೂ ಕಲಿಯುವುದಿದೆ. ನಾವು ಇನ್ನಷ್ಟೂ ಬಲಿಷ್ಠವಾಗಿ ಕಣಕ್ಕೆ ಮರಳುತ್ತೇವೆ" ಎಂದಿದ್ದಾರೆ.
ಹರ್ಮನ್ಪ್ರತ್ ಕೌರ್ ಆಟದ ಬಗ್ಗೆ ಮಾತನಾಡಿದ ರಾಣ,"ಕಳೆದ ಕೆಲವು ಪಂದ್ಯಗಳಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಕೌರ್ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದು ಭಾರತೀಯ ಕ್ರಿಕೆಟ್‌ಗೆ ದೊಡ್ಡ ವಿಷಯವಾಗಿದೆ. ಅವರು ತಮ್ಮ ಕ್ಲಾಸ್ ಕ್ರಿಕೆಟನ್ನು ತೋರಿದ್ದಾರೆ ಮತ್ತು ನಾಯಕಿಯಾಗಿ ಇನ್ನಿಂಗ್ಸ್ ಅನ್ನು ಕಟ್ಟಿದ್ದಾರೆ" ಎಂದರು.
ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ: "ಇದು ಮೊದಲ ಪಂದ್ಯ, ಹಿಂದಿರುಗಿದ ನಂತರ ನಾವು ಇಂದಿನ ಪಂದ್ಯದಲ್ಲಿ ಮಾಡಿದ ತಪ್ಪುಗಳ ಬಗ್ಗೆ ಮಾತನಾಡಿಕೊಳ್ಳುತ್ತೇವೆ. ಈ ಸೋಲಿಗೆ ತಲೆ ತಗ್ಗಿಸುವ ಅಗತ್ಯ ಇಲ್ಲ. ಪಂದ್ಯಾವಳಿ ಇದೀಗ ಪ್ರಾರಂಭವಾಗಿದೆ. ಆದ್ದರಿಂದ, ನಾವು ಹುರಿದುಂಬಿಸೋಣ.. ನಾವು ಬಲವಾಗಿ ಹಿಂತಿರುಗುತ್ತೇವೆ" ಎನ್ನುವ ಮೂಲಕ ಮತ್ತೆ ಪುಟಿದೇಳುವ ಭರವಸೆಯನ್ನು ವ್ಯಕ್ತಪಡಿಸಿದರು.
"ಕೆಲವರು ಬೇಗನೆ ವಾತಾವರಣಕ್ಕೆ ಬೆರೆಯುತ್ತಾರೆ ಮತ್ತು ಸಮರ್ಥವಾಗಿ ಕಾಣುತ್ತಾರೆ. ಆದರೆ ಕೆಲವರಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಹಾಗಾಗಿ ನಾವು ನಮ್ಮ ಶಕ್ತಿಯ ಮೇಲೆ ಕೆಲಸ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಮ್ಮ ಇಲಾಖೆಗಳಲ್ಲಿ ನಾವು ಉತ್ತಮರು ಎಂದು ನಾನು ಭಾವಿಸುತ್ತೇನೆ. ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ, ಇದು ಪಂದ್ಯಾವಳಿಯ ಮೊದಲ ಪಂದ್ಯವಾಗಿದೆ. ನಾವು ತಲೆ ತಗ್ಗಿಸಬೇಕಾಗಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ತಂಡ ಮತ್ತು ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಗೆದ್ದರೂ, ಸೋತರೂ ಒಂದು ತಂಡವಾಗಿರುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ: WPL 2023: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮಂಧಾನ, ಸ್ಪೋರ್ಟ್ಸ್ ಫಾರ್ ಆಲ್ ಥೀಮ್ನಲ್ಲಿ ಆರ್ಸಿಬಿ ಟೀಂ