ETV Bharat / sports

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್: 5 ಪೀಳಿಗೆಯ 10 ದಿಗ್ಗಜರಿಗೆ ಹಾಲ್ ಆಫ್​ ಫೇಮ್ ಗೌರವ

ವಿಶ್ವ ಕ್ರಿಕೆಟ್​ ಮಂಡಳಿ ಗುರುವಾರ ಈ ವಿಚಾರದ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ದಿನದ ವಿಶೇಷವಾಗಿ ಐಸಿಸಿ ಹಾಲ್ ಆಫ್​ ಫೇಮ್​ಗೆ ಗೌರವಕ್ಕೆ ಪಾತ್ರರಾದ ಕ್ರಿಕೆಟಿಗರ ಹೆಸರನ್ನು ಘೋಷಿಸಲಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್
author img

By

Published : Jun 10, 2021, 3:25 PM IST

ದುಬೈ: ಜೂನ್​ 18ರಂದು ಸೌತಾಂಪ್ಟನ್​ ಏಜಿಯಸ್ ಬೌಲ್​ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವೆ ನಡೆಯಲಿರುವ ಚೊಚ್ಚಲ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಗುರುತಿಗಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿರುವ 5 ಪೀಳಿಗೆಯ 10 ದಂತಕತೆಗಳನ್ನು 93 ದಿಗ್ಗಜರಿರುವ ಹಾಲ್​ ಆಫ್​ ಫೇಮ್​ ಪಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಸೇರಿಸಲಿದೆ.

ವಿಶ್ವ ಕ್ರಿಕೆಟ್​ ಮಂಡಳಿ ಗುರುವಾರ ಈ ವಿಚಾರದ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ದಿನದ ವಿಶೇಷವಾಗಿ ಐಸಿಸಿ ಹಾಲ್ ಆಫ್​ ಫೇಮ್​ಗೆ ಗೌರವಕ್ಕೆ ಪಾತ್ರರಾದ ಕ್ರಿಕೆಟಿಗರ ಹೆಸರನ್ನು ಘೋಷಿಸಲಿದೆ.

ಈಗಾಗಲೇ 93 ದಂತಕತೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಇದೀಗ 5 ಪೀಳಿಗೆಯಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಗಮನಾರ್ಹ ಕೊಡುಗೆ ನೀಡಿರುವ 10 ಲೆಜೆಂಡ್​ಗಳನ್ನು ಸೇರಿಸಲಾಗುತ್ತದೆ. ಮತ್ತು ಈ ಪಟ್ಟಿಯಲ್ಲಿ 103ಕ್ಕೆ ಏರಿಸಲು ಐಸಿಸಿ ನಿರ್ಧರಿಸಿದೆ.

ನಾವು ಆ ದಿನ ಕ್ರಿಕೆಟ್​ ಐತಿಹಾಸಿಕ ಪಂದ್ಯವನ್ನು ಆಡಲಿದ್ದೇವೆ. ವಿವಿಧ ಪೀಳಿಗೆಯಲ್ಲಿ ಕ್ರಿಕೆಟ್​ ಆಡಿರುವ ಶ್ರೇಷ್ಠ ಕ್ರಿಕೆಟಿಗರನ್ನು ಗೌರವಿಸುವುದಕ್ಕೆ ಇದಕ್ಕಿಂತ ಉತ್ತಮ ದಿನ ಬೇರೆ ಯಾವುದಿದೆ ಹೇಳಿ, ಇವರೆಲ್ಲರೂ ಪರಂಪರೆಯೊಂದಗಿನ ಆಟಗಾರರಾಗಿದ್ದು, ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ ಎಂದು ಐಸಿಸಿ ತಿಳಿಸಿದೆ.

ಆರಂಭದ ಕ್ರಿಕೆಟ್​ ಯುಗ (1918), ಅಂತರ್​ ಯುದ್ದ ಕ್ರಿಕೆಟ್​ ಯುವ(1918-1945), ಮಹಾಯುದ್ದದ ನಂತರದ ಕ್ರಿಕೆಟ್​ ಯುಗ(1946-1970), ಏಕದಿನ ಕ್ರಿಕೆಟ್​ ಯುಗ(1971-1995) ಮತ್ತು ಆಧುನಿಕ ಕ್ರಿಕೆಟ್​ ಯುಗ(1996-2016)ದಲ್ಲಿ ತಲಾ ಇಬ್ಬರು ಆಟಗಾರರನ್ನು ಗೌರವಿಸಲು ಐಸಿಸಿ ನಿರ್ಧರಿಸಿದೆ.

ಈ ಆಟಗಾರರನ್ನು ಐಸಿಸಿ ಹಾಲ್ ಆಫ್ ಫೇಮ್ ವೋಟಿಂಗ್ ಅಕಾಡೆಮಿ, ಬದುಕಿರುವ ಹಾಲ್ ಆಫ್ ಫೇಮ್​ ಸದಸ್ಯರು, FICA ಸದಸ್ಯರು, ಕ್ರಿಕೆಟ್​ ಜರ್ನಲಿಸ್ಟ್​ ಮತ್ತು ಹಿರಿಯ ಐಸಿಸಿ ಅಧಿಕಾರಿಗಳು ಮತ ಚಲಾಯಿಸಿ ಆಯ್ಕೆ ಮಾಡಲಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ನಿಂದ ಹೊರಬಿದ್ದ ವಿಲಿಯಮ್ಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.