ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ಐಸಿಸಿ ನಡೆಸುವ ಟ್ರೋಫಿಗಳು ಪ್ರಮುಖವಾಗುತ್ತವೆ ಎಂದು ಹೇಳಲಾಗದು. ಆದರೆ ಆಶಸ್ ಮಾತ್ರ ಅತ್ಯಂತ ಪ್ರಮುಖವಾದದ್ದು. ಎರಡು ವರ್ಷಗಳಿಗೊಮ್ಮ ನಡೆಯುವ ಬೇಲ್ಸ್ನ ಬೂದಿ ಮುಚ್ಚಿದ ಕೆಂಡದಂತಿರುವ ಕದನ ಎರಡೂ ದೇಶಗಳ ಆಟಗಾರರಿಗೆ ಪ್ರತಿಷ್ಠೆಯ ಕಣವಾಗಿದೆ. ಇದರಲ್ಲಿ ವರ್ಷದಿಂದ ಫಾರ್ಮ್ನಲ್ಲಿರದ ವಾರ್ನರ್ (9) ಮತ್ತೆ ವೈಫಲ್ಯ ಎದುರಿಸಿದ್ದಾರೆ.
36ರ ಹರೆಯದ ವಾರ್ನರ್ ತಮ್ಮ ವೃತ್ತಿ ಜೀವನದ ಕಳಪೆ ಫಾರ್ಮ್ಅನ್ನು ಎದುರಿಸುತ್ತಿದ್ದಾರೆ. ಬೃಹತ್ ಇನ್ನಿಂಗ್ಸ್ ಕಟ್ಟುವಲ್ಲಿ ವಾರ್ನರ್ ಸತತವಾಗಿ ಎಡವುತ್ತಿದ್ದಾರೆ. ಆಶಸ್ನ ಎರಡನೇ ದಿನದಾಟ ಆರಂಭವಾಗುತ್ತಿದ್ದಂತೆ ವಾರ್ನರ್ ವಿಕೆಟ್ನ್ನು ಆಸ್ಟ್ರೇಲಿಯಾದ ಕಳೆದುಕೊಂಡಿತು. ಅದೂ ವಿಶೇಷ ಎಂದರೆ ಮತ್ತೆ ಸ್ಟುವರ್ಟ್ ಬ್ರಾಡ್ ಬೌಲಿಂಗ್ನಲ್ಲೇ ವಾರ್ನರ್ ವಿಕೆಟ್ ಕೊಟ್ಟಿರುವುದು. 9 ರನ್ ಗಳಿಸಿ ಆಡುತ್ತಿದ್ದ ವಾರ್ನರ್ಗೆ ದಿನದ 11ನೇ ಓವರ್ನಲ್ಲಿ ಬ್ರಾಡ್ ಕಾಡಿದರು. ಬ್ಯಾಟ್ ಸೈಡ್ ಎಡ್ಜ್ ಆದ ಬೌಲ್ ನೇರ ವಿಕೆಟ್ಗೆ ಬಡಿಯಿತು.
-
It's happened again! 😅
— England Cricket (@englandcricket) June 17, 2023 " class="align-text-top noRightClick twitterSection" data="
Live clips/Scorecard: https://t.co/TZMO0eJDwY
🏴 #ENGvAUS 🇦🇺 #Ashes pic.twitter.com/qhtIvpAYmn
">It's happened again! 😅
— England Cricket (@englandcricket) June 17, 2023
Live clips/Scorecard: https://t.co/TZMO0eJDwY
🏴 #ENGvAUS 🇦🇺 #Ashes pic.twitter.com/qhtIvpAYmnIt's happened again! 😅
— England Cricket (@englandcricket) June 17, 2023
Live clips/Scorecard: https://t.co/TZMO0eJDwY
🏴 #ENGvAUS 🇦🇺 #Ashes pic.twitter.com/qhtIvpAYmn
ಇಂಗ್ಲೆಂಡ್ ನಾಯಕ ಟೆಸ್ಟ್ ಪಂದ್ಯ ಪ್ರಾರಂಭಕ್ಕೂ ಮುನ್ನ ಮಾಧ್ಯಮ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ವಾರ್ನರ್ ಕಟ್ಟಿಹಾಕಲು ನಮ್ಮ ಬಳಿ ಸ್ಟುವರ್ಟ್ ಬ್ರಾಡ್ ಎಂಬ ಅಸ್ತ್ರ ಇದೆ ಎಂದಿದ್ದರು. ಅದರಂತೆ ವಾರ್ನರ್ ಸ್ಟುವರ್ಟ್ ಬ್ರಾಡ್ಗೆ ವಿಕೆಟ್ ಕೊಟ್ಟಿದ್ದಾರೆ. ಇದು ಡೇವಿಡ್ ವಾರ್ನರ್ 15ನೇ ಬಾರಿಗೆ ಸ್ಟುವರ್ಟ್ ಬ್ರಾಡ್ ವಿಕೆಟ್ ಒಪ್ಪಿಸಿದ್ದಾಗಿದೆ.
ಇಂಗ್ಲೆಂಡ್ ಇನ್ನಿಂಗ್ಸ್: ನಿನ್ನೆ ಆರಂಭವಾದ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ಗೆ ಬ್ರೆಂಡಮ್ ಮೆಕಲಮ್ ಕೋಚ್ ಮತ್ತು ಬೆನ್ ಸ್ಟೋಕ್ಸ್ ನಾಯಕರಾದ ಬಳಿಕ ಆದ ನಂತರ ತಂಡ ಆಡುವ ಟೆಸ್ಟ್ ಮಾದರಿಯೇ ಬದಲಾಗಿದೆ. ಏಕದಿನ ದಿನ ಮಾದರಿಯಲ್ಲಿ ಎಲ್ಲಾ ಬ್ಯಾಟರ್ಗಳು ಟೆಸ್ಟ್ನಲ್ಲಿ ರನ್ಗಳಿಸುತ್ತಿದ್ದಾರೆ. ಅದರಂತೆ ಜೋ ರೂಟ್ 118 ರನ್, ಜಾನಿ ಬೈರ್‌ಸ್ಟೋವ್ 78 ಮತ್ತು ಝಾಕ್ ಕ್ರಾಲಿ 61 ರನ್ ಗಳಿಸಿದರು. ಮೂವರು ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿದ ಪರಿಣಾಮ 78ನೇ ಓವರ್ನಲ್ಲಿ ಇಂಗ್ಲೆಂಡ್ 393 ರನ್ ಕಲೆಹಾಕಿತ್ತು. ಅಲ್ಲದೇ 8 ವಿಕೆಟ್ ಕಳೆದುಕೊಂಡು 393 ರನ್ ಗಳಿಸಿದ್ದ ಆಂಗ್ಲರು ಡಿಕ್ಲೆರ್ ಸಹ ಪ್ರಕಟಿಸಿದ್ದರು.
-
🤩 A golden morning for @StuartBroad8...
— England Cricket (@englandcricket) June 17, 2023 " class="align-text-top noRightClick twitterSection" data="
And Marnus Labuschagne 😉 #EnglandCricket | #Ashes https://t.co/rFwd2cGy92 pic.twitter.com/q5Dt2wLK7W
">🤩 A golden morning for @StuartBroad8...
— England Cricket (@englandcricket) June 17, 2023
And Marnus Labuschagne 😉 #EnglandCricket | #Ashes https://t.co/rFwd2cGy92 pic.twitter.com/q5Dt2wLK7W🤩 A golden morning for @StuartBroad8...
— England Cricket (@englandcricket) June 17, 2023
And Marnus Labuschagne 😉 #EnglandCricket | #Ashes https://t.co/rFwd2cGy92 pic.twitter.com/q5Dt2wLK7W
ನಂತರ ಆಸ್ಟ್ರೇಲಿಯಾ ಬ್ಯಾಟಿಂಗ್ ಬಂದಿತ್ತು ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್ ಡಿಕ್ಲೇರ್ ನಂತರ 4 ಓವರ್ಗೆ 14 ರನ್ ಆಸ್ಟ್ರೇಲಿಯಾ ಕಲೆಹಾಕಿತ್ತು. ಎರಡನೇ ದಿನವಾದ ಇಂದು ಬ್ಯಾಟಿಂಗ್ಗೆ ಬಂದ ಆಸಿಸ್ ಆಟಗಾರು ವಿಕೆಟ್ ಕಳೆದು ಕೊಂಡರು. ಮೊದಲಿಗೆ ವಾರ್ನರ್ ಪೆವಿಲಿಯನ್ಗೆ ತೆರಳಿದರೆ, ಅವರ ಬೆನ್ನಲ್ಲೇ ಶೂನ್ಯ ಮಾರ್ನಸ್ ಲಬುಶೇನ್ ವಿಕೆಟ್ ಕೊಟ್ಟರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಶತಕ ಗಳಿಸಿದ್ದ ಸ್ಟೀವ್ ಸ್ಮಿತ್ 16 ರನ್ಗೆ ವಿಕೆಟ್ ಕೊಟ್ಟರು
ಎರಡನೇ ದಿನದ ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ ದಿನದ 31ನೇ ಓವರ್ಗೆ 3 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿದೆ. ಕ್ರೀಸ್ನಲ್ಲಿ 40 ರನ್ ಗಳಿಸಿ ಉಸ್ಮಾನ್ ಖವಾಜಾ ಮತ್ತು 8 ರನ್ ಟ್ರಾವೆಸ್ ಹೆಡ್ ಇದ್ದಾರೆ.
ಇದನ್ನೂ ಓದಿ: Ashes 2023: ತಂಡಕ್ಕಾಗಿ ಏಕಾಂಗಿ ಪ್ರದರ್ಶನ ನೀಡಿ ತಮ್ಮದೇ ತಂಡದ ಆಟಗಾರನ ದಾಖಲೆ ಮುರಿದ ರೋಟ್