ತರೌಬಾ (ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಹಾಗೂ ಮೂರು ಏಕದಿನ ಸರಣಿ ಗೆದ್ದಿರುವ ಭಾರತ ಕ್ರಿಕೆಟ್ ತಂಡ 5 ಪಂದ್ಯಗಳ ಟಿ20 ಸರಣಿಯನ್ನು ಆಡಲು ಸಿದ್ಧತೆ ನಡೆಸಿದೆ. ನಾಳೆಯಿಂದಲೇ (ಆಗಸ್ಟ್ 3) ಈ ಸರಣಿ ಆರಂಭವಾಗಲಿದೆ. ಎರಡೂ ತಂಡಗಳು ಟಿ20 ಕ್ರಿಕೆಟ್‌ನಲ್ಲಿ ಪರಸ್ಪರ ಕಠಿಣ ಪೈಪೋಟಿ ನೀಡುತ್ತಿರುವುದನ್ನು ಕಾಣಬಹುದು. ಈ ಸರಣಿಯಲ್ಲಿ ಆಡುತ್ತಿರುವ ಹಲವು ಆಟಗಾರರು ಟಿ20 ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಹೆಸರುವಾಸಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಸರಣಿ ರೋಚಕವಾಗಿರಲಿದೆ.
-
Team India Squad For T20 Series Vs West Indies team 😊 pic.twitter.com/OgJqPLO16b
— Spotty_cricket (@spotty_cricket) August 1, 2023 " class="align-text-top noRightClick twitterSection" data="
">Team India Squad For T20 Series Vs West Indies team 😊 pic.twitter.com/OgJqPLO16b
— Spotty_cricket (@spotty_cricket) August 1, 2023Team India Squad For T20 Series Vs West Indies team 😊 pic.twitter.com/OgJqPLO16b
— Spotty_cricket (@spotty_cricket) August 1, 2023
ಟಿ20 ಪಂದ್ಯಗಳ ಐಸಿಸಿ ಶ್ರೇಯಾಂಕವನ್ನು ನೋಡುವುದಾದರೆ ಇದರಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಟೀಂ ಇಂಡಿಯಾ ತನ್ನ ಶ್ರೇಯಾಂಕವನ್ನು ಉಳಿಸಿಕೊಳ್ಳುವ ಜೊತೆಗೆ ಟೆಸ್ಟ್ ಮತ್ತು ಏಕದಿನ ಸರಣಿಯಂತೆಯೇ ಗೆಲ್ಲಲು ತಯಾರಿ ನಡೆಸುತ್ತಿದೆ. ಅಂದಹಾಗೆ, ವೆಸ್ಟ್ ಇಂಡೀಸ್ ತಂಡದಲ್ಲಿಯೂ ಅನೇಕ ಬ್ಯಾಟ್ಸ್‌ಮನ್‌ಗಳಿದ್ದಾರೆ, ಅವರು ಏಕಾಂಗಿಯಾಗಿ ಪಂದ್ಯದ ಅಲೆಯನ್ನು ಬಲದಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯು ಆಗಸ್ಟ್ 3 ರಿಂದ ಪ್ರಾರಂಭವಾಗಲಿದೆ. ಇದರ ನಂತರ ಮುಂದಿನ ನಾಲ್ಕು ಪಂದ್ಯಗಳು ಕ್ರಮವಾಗಿ ಆಗಸ್ಟ್ 6, 8, 12 ಮತ್ತು 13 ರಂದು ನಡೆಯಲಿವೆ. ಕಳೆದ ವರ್ಷದಂತೆ ಈ ವರ್ಷವೂ ಹೊಸ ಆಟಗಾರರಿಂದ ತುಂಬಿರುವ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟಿ20 ಸರಣಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಒಟ್ಟು 7 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದ್ದು, ಇದರಲ್ಲಿ ಟೀಂ ಇಂಡಿಯಾ 4 ಪಂದ್ಯಗಳನ್ನು ಗೆದ್ದು 3 ಪಂದ್ಯಗಳಲ್ಲಿ ಸೋತಿದೆ. ಇವರಿಬ್ಬರ ನಡುವಿನ ಕೊನೆಯ ಪಂದ್ಯ 2022ರಲ್ಲಿ ನಡೆದಿದ್ದು, ಇದರಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳಿಂದ ಗೆದ್ದಿತ್ತು. ಆ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಪರ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು, ಅದರ ಆಧಾರದ ಮೇಲೆ 165 ರನ್‌ಗಳ ಗುರಿಯನ್ನು ಸುಲಭವಾಗಿ ಸಾಧಿಸಲಾಯಿತು.
-
West Indies team Squad Vs India T20 Series 😊 pic.twitter.com/JV7uPELv40
— Spotty_cricket (@spotty_cricket) August 1, 2023 " class="align-text-top noRightClick twitterSection" data="
">West Indies team Squad Vs India T20 Series 😊 pic.twitter.com/JV7uPELv40
— Spotty_cricket (@spotty_cricket) August 1, 2023West Indies team Squad Vs India T20 Series 😊 pic.twitter.com/JV7uPELv40
— Spotty_cricket (@spotty_cricket) August 1, 2023
ವೆಸ್ಟ್ ಇಂಡೀಸ್‌ನಲ್ಲಿ 3 ಟಿ20 ಸರಣಿ ಗೆದ್ದಿದೆ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ಇದುವರೆಗೆ ಒಟ್ಟು 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯನ್ನು ಆಡಿದೆ. ಈ ಪೈಕಿ ಭಾರತ ತಂಡ 3 ಸರಣಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, 2 ಸರಣಿಗಳಲ್ಲಿ ಟೀಂ ಇಂಡಿಯಾ ಸೋಲಿನತ್ತ ಮುಖ ಮಾಡಿದೆ.
ಐಪಿಎಲ್ ಫಾರ್ಮ್ನಲ್ಲಿರುವ ಆಟಗಾರರು: ಕಿಶನ್, ಗಿಲ್, ಜೈಸ್ವಾಲ್, ಸೂರ್ಯ, ಹಾರ್ದಿಕ್ ಮತ್ತು ತಿಲಕ್ ವರ್ಮಾ ಐಪಿಎಲ್ ಫಾರ್ಮ್ನಲ್ಲಿದ್ದಾರೆ. ಎರಡು ತಿಂಗಳ ಕಾಲ ಸುದೀರ್ಘ ಲೀಗ್ ಪಂದ್ಯಗಳನ್ನು ಆಡಿರುವ ಆಟಗಾರರು ಅದೇ ಮೂಡ್ನಲ್ಲಿ ಮೈದಾನಕ್ಕಿಳಿಯ ಬೇಕಿದೆ. ಎದುರಾಳಿ ಪಡೆಯೂ ಬಲಿಷ್ಠವಾಗಿದ್ದು, ರೋವ್ಮನ್ ಪೊವೆಲ್ ನಾಯಕತ್ವದಲ್ಲಿ ಮೈದಾನಕ್ಕಿಳಿಯಲಿದೆ. ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್ ಮತ್ತು ನಿಕೋಲಸ್ ಪೂರನ್ ಟಿ20 ಮಾದರಿಯಲ್ಲಿ ಅದ್ಭುತ ಆಟಗಾರರಾಗಿದ್ದಾರೆ. ಇವರನ್ನು ಬೇಧಿಸಿ ಸರಣಿಗೆಲ್ಲುವುದು ಹಾರ್ದಿಕ್ ಪಾಳಯಕ್ಕೆ ಟಾಸ್ಕ್ ಆಗಿದೆ.
ತಂಡಗಳು ಇಂತಿವೆ..ಭಾರತ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ವಿಸಿ), ಸಂಜು ಸ್ಯಾಮ್ಸನ್ (ವಿಕೆ), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.
ವೆಸ್ಟ್ ಇಂಡೀಸ್: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಓಬೆಡ್ ಮೆಕಾಯ್, ನಿಕೋಲಸ್ ಪೂರನ್, ಒಮಾರಿಯೋ ಶೆಫರ್ಡ್, ರೊಮಾರಿಯೋ ಶೆಫರ್ಡ್ ಸ್ಮಿತ್, ಒಶಾನೆ ಥಾಮಸ್.
ಇದನ್ನೂ ಓದಿ: ವಿಶ್ವಕಪ್ಗೂ ಮುನ್ನ 5 ದ್ವಿಪಕ್ಷೀಯ ಸರಣಿ ಆಡಲಿರುವ ಭಾರತ: ಹಾರ್ದಿಕ್ ನಾಯಕತ್ವದಲ್ಲಿ ಯುವ ಪಡೆ!