ETV Bharat / sports

ಹೆಣ್ಣು ಮಗುವಿಗೆ ಜನ್ಮ ನೀಡಿದ ಕ್ರಿಕೆಟರ್​ ಭುವನೇಶ್ವರ್ ಕುಮಾರ್ ಪತ್ನಿ ನೂಪುರ್ - ಭಾರತ ತಂಡದ ಸ್ವಿಂಗ್ ಸ್ಪೆಷಲಿಸ್ಟ್​ ಭುವಿ

ಇದೇ ವರ್ಷ ಮೇ 20ರಂದು ಭುವನೇಶ್ವರ್ ತಂದೆ ಕಿರಣ್ ಪಾಲ್​ ಸಿಂಗ್ ಅನಾರೋಗ್ಯದಿಂದ ನಿಧನರಾಗಿದ್ದರು. ಇದರ ಬೆನ್ನಲ್ಲೇ ಅವರ ಕುಟುಂಬ ಸದಸ್ಯರು ಕೊರೊನಾದಿಂದ ತೊಂದರೆ ಅನುಭವಿಸಿದ್ದರು. ಹೀಗೆ, ಸತತವಾಗಿ ನೋವು ಅನುಭವಿಸಿರುವ ಕುಟುಂಬಕ್ಕೆ ಇದೀಗ ಹೆಣ್ಣು ಮಗು ಆಗಮಿಸಿದ್ದು, ಮನೆಯಲ್ಲಿ ಸಂತಸದ ಹೊನಲು ಆವರಿಸಿದೆ.

bhuvneshwar kumar becomes father of daughter
ಹೆಣ್ಣು ಮಗುವಿನ ತಂದೆಯಾದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್
author img

By

Published : Nov 24, 2021, 6:07 PM IST

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಸ್ವಿಂಗ್ ಸ್ಪೆಷಲಿಸ್ಟ್​ ಭುವನೇಶ್ವರ್ ಕುಮಾರ್ ಪತ್ನಿ ನೂಪುರ್ ನಗರ್​ ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿದರು. ವಿಶೇಷವೆಂದರೆ, ನವೆಂಬರ್​ 23ರಂದು(ನಿನ್ನೆ) ಈ ಜೋಡಿಯ ವಿವಾಹ ವಾರ್ಷಿಕೋತ್ಸವವಾಗಿತ್ತು.

ಮೀರತ್​ ಡಿಸ್ಟ್ರಿಕ್​ ಕ್ರಿಕೆಟ್​ ಅಸೋಸಿಯೇಷನ್​ನ ಖಜಾಂಚಿ ರಾಕೇಶ್​ ಗೋಯಲ್​ ಈ ಶುಭ ಸುದ್ದಿಯನ್ನು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಬುಧವಾರ ನವದೆಹಲಿಯ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ಗಂಟೆಗೆ ನೂಪುರ್​ ತಮ್ಮ ಮೊದಲ ಮಗುವಿಗೆ ಜನ್ಮನೀಡಿದ್ದಾರೆ.

ಇದೇ ವರ್ಷ ಮೇ 20ರಂದು ಭುವನೇಶ್ವರ್ ತಂದೆ ಕಿರಣ್‌ಪಾಲ್​ ಸಿಂಗ್ ಅನಾರೋಗ್ಯದಿಂದ ನಿಧನರಾಗಿದ್ದರು. ಇದರ ಬೆನ್ನಲ್ಲೇ ಕುಟುಂಬ ಸದಸ್ಯರು ಕೊರೊನಾ ಪಾಸಿಟಿವ್​ನಿಂದ ನರಳಾಡಿದ್ದರು. ಸತತ ನೋವುಗಳನ್ನೇ ಅನುಭವಿಸಿದ್ದ ಕುಟುಂಬಕ್ಕೆ ಹೆಣ್ಣು ಮಗವಿನ ಜನನ ಮನೆಯಲ್ಲಿ ಆನಂದವನ್ನು ಮರುಕಳಿಸುವಂತೆ ಮಾಡಿದೆ.

2012ರಂದು ಭುವನೇಶ್ವರ್ ಕುಮಾರ್ ತಮ್ಮ ಬಾಲ್ಯ ಸ್ನೇಹಿತೆಯಾಗಿದ್ದ ನೂಪುರ್ ನಗರ್​ ಅವರನ್ನು ವಿವಾಹವಾಗಿದ್ದರು.

ಭುವನೇಶ್ವರ್ ಕುಮಾರ್​ ಇತ್ತೀಚೆಗೆ ನಡೆದ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ತೋರಿದ್ದರು. ಭುವಿ 3 ಪಂದ್ಯಗಳಿಂದ 3 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: T20I rankings : 5ನೇ ಸ್ಥಾನಕ್ಕೇರಿದ ರಾಹುಲ್, 24 ಸ್ಥಾನ ಜಿಗಿದ ಸೂರ್ಯಕುಮಾರ್ ಯಾದವ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.