ಡಾಕಾ: ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಅಶಿಸ್ತು ಪ್ರದರ್ಶನ ತೋರಿದ್ದಕ್ಕಾಗಿ ಬಾಂಗ್ಲಾದೇಶ ತಂಡದ ನಾಯಕ ತಮೀಮ್ ಇಕ್ಬಾಲ್‌ಗೆ ಐಸಿಸಿ ಒಂದು ಡಿಮೆರಿಟ್ ಅಂಕ ಮತ್ತು ಪಂದ್ಯ ಸಂಭಾವನೆಯ ಶೇ.15ರಷ್ಟು ದಂಡವನ್ನು ವಿಧಿಸಿದೆ.
ಇಕ್ಬಾಲ್ ಐಸಿಸಿ ನೀತಿ ಸಂಹಿತೆಯ ಮೊದಲ ಹಂತವನ್ನು ಉಲ್ಲಂಘನೆ ಮಾಡಿದ್ದಾರೆ. ಇದು ಕಳೆದ 24 ತಿಂಗಳಲ್ಲಿ ಮೊದಲ ಉಲ್ಲಂಘನೆಯಾಗಿದೆ. ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರ ಅಥವಾ ಬೆಂಬಲ ಸಿಬ್ಬಂದಿಗೆ ಮಾತಿನ ಮೂಲಕ ಅಶ್ಲೀಲ ನಡೆ ತೋರಿಸಿದ್ದಕ್ಕಾಗಿ ಐಸಿಸಿ ನೀತಿ ಸಂಹಿತೆ 2.3ರಂತೆ ಇಕ್ಬಾಲ್‌ಗೆ ದಂಡ ವಿಧಿಸಲಾಗಿದೆ.
ನಿನ್ನೆಯ ಪಂದ್ಯದ ವೇಳೆ ಇಕ್ಬಾಲ್ ಬ್ಯಾಟ್ಗೆ ಬಡಿದಿದ್ದ ಚೆಂಡು ಕೀಪರ್ ಕೈ ಸೇರಿತು. ಆದರೆ, ಕ್ಯಾಚ್ ಔಟ್ ವಿರುದ್ಧ ಇಕ್ಬಾಲ್ ರಿವ್ಯೂ ತೆಗೆದುಕೊಂಡರು. ರಿವ್ಯೂನಲ್ಲೂ ಔಟ್ ಎಂದು ಬಂದಿದ್ದಕ್ಕೆ ಅವಾಚ್ಯ ಪದ ಬಳಸಿದ್ದರು ಎಂದು ತಿಳಿದುಬಂದಿದೆ.
" ನನ್ನ ಬ್ಯಾಟ್ಗೆ ಚೆಂಡು ತಾಗಿರಲಿಲ್ಲ ಎಂಬುದು ಶೇ.100 ರಷ್ಟು ಖಚಿತವಾಗಿರುವುದರಿಂದ ನಾನು ಆ ತೀರ್ಪಿನಿಂದ ನಿರಾಸೆಗೊಂಡಿದ್ದೇನೆ. ಚೆಂಡು ನನ್ನನ್ನು ಹಾದುಹೋದಾಗ, ಬ್ಯಾಟ್ ನೆಲಕ್ಕೆ ಬಡಿದಿತ್ತು. ಆನ್ - ಫೀಲ್ಡ್ ಅಂಪೈರ್ ನನ್ನನ್ನು ಔಟ್ ಎಂದು ನೀಡದಿದ್ದರೆ, ಅದು ಬೇರೆ ವಿಷಯವಾಗಿರುತ್ತಿತ್ತು" " ಎಂದು ತಮೀಮ್ ಪಂದ್ಯದ ನಂತರ ಹೇಳಿದ್ದಾರೆ.
ಇದನ್ನು ಓದಿ:WTC ಫೈನಲ್ನಲ್ಲಿ 90ರ ದಶಕದ ಜರ್ಸಿ ತೊಡಲಿದೆ ಟೀಂ ಇಂಡಿಯಾ