ETV Bharat / sports

ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​ ಮುಗಿಯುತ್ತಿದ್ದಂತೆ T20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ - ಭಾರತ ಕ್ರಿಕೆಟ್​

ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್​ ಟೂರ್ನಾಮೆಂಟ್​ಗೆ ಟೀಂ ಇಂಡಿಯಾ ಯಾವಾಗ ಪ್ರಕಟಗೊಳ್ಳಲಿದೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಆದರೆ ಕೊಹ್ಲಿ ಬಳಗದಲ್ಲಿ ಯಾರೆಲ್ಲ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

team india
team india
author img

By

Published : Sep 2, 2021, 4:41 AM IST

ಮುಂಬೈ: ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ ಆಂಗ್ಲರ ನಾಡಲ್ಲಿ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಿದ್ದು, ಇಂದಿನಿಂದ 4ನೇ ಟೆಸ್ಟ್​​ ಪಂದ್ಯ ಆರಂಭಗೊಳ್ಳಲಿದೆ. ಈ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಮುಂಬರುವ ಐಸಿಸಿ ಟಿ-20 ವಿಶ್ವಕಪ್​ಗೆ ಬ್ಲೂ ಬಾಯ್ಸ್​ ತಂಡ ಪ್ರಕಟಗೊಳ್ಳಲಿದೆ.

ಯಾವ ದಿನಾಂಕದಂದು ಟೀಂ ಇಂಡಿಯಾ ಪ್ರಕಟಗೊಳ್ಳಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ, ಮುಂಬರುವ ಸೋಮವಾರ ಅಥವಾ ಮಂಗಳವಾರದೊಳಗೆ ತಂಡ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. ಈ ಸಲದ ಟಿ-20 ವಿಶ್ವಕಪ್​ ಯುಎಇನಲ್ಲಿ ಆಯೋಜನೆಗೊಂಡಿದ್ದು, ಅದಕ್ಕೂ ಮುಂಚಿತವಾಗಿ 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿಯ ಉಳಿದ ಪಂದ್ಯಗಳು ನಡೆಯಲಿವೆ. ಹೀಗಾಗಿ ಬಹುತೇಕ ಎಲ್ಲ ದೇಶದ ಪ್ಲೇಯರ್ಸ್​​ ಇಲ್ಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ದಟ್ಟವಾಗಿದೆ.

ಟಿ-20 ವಿಶ್ವಕಪ್​ಗೋಸ್ಕರ ಈಗಾಗಲೇ ನ್ಯೂಜಿಲ್ಯಾಂಡ್​ ಹಾಗೂ ಆಸ್ಟ್ರೇಲಿಯಾ ತಮ್ಮ ತಂಡ ಪ್ರಕಟ ಮಾಡಿದ್ದು, ಭಾರತ, ಪಾಕ್​ ಸೇರಿದಂತೆ ಕೆಲವೊಂದು ದೇಶಗಳು ಮುಂದಿನ ಕೆಲ ದಿನಗಳಲ್ಲಿ ತಂಡ ಪ್ರಕಟ ಮಾಡಲಿವೆ. ಅಕ್ಟೋಬರ್​​ 17ರಿಂದ ಟಿ-20 ವಿಶ್ವಕಪ್​ ಆರಂಭಗೊಳ್ಳಲಿದ್ದು, ಅಕ್ಟೋಬರ್​ 24ರಂದು ಭಾರತ-ಪಾಕಿಸ್ತಾನ ತಂಡ ಮುಖಾಮುಖಿಯಾಗಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.