ಟೀಂ ಇಂಡಿಯಾ ಮಾಜಿ ಆಟಗಾರ, ಎಡಗೈ ಸ್ಫೋಟಕ ಬ್ಯಾಟರ್ ಸುರೇಶ್ ರೈನಾ ಎಲ್ಲ ಮಾದರಿ ಕ್ರಿಕೆಟ್ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ ಮೂಲಕ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
"ನನ್ನ ದೇಶ ಮತ್ತು ಉತ್ತರ ಪ್ರದೇಶ ರಾಜ್ಯ ಪ್ರತಿನಿಧಿಸುವುದು ನನಗೆ ಸಿಕ್ಕ ದೊಡ್ಡ ಗೌರವ. ಇದೀಗ ಕ್ರಿಕೆಟ್ನ ಎಲ್ಲ ಮಾದರಿಯಿಂದಲೂ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ. ಬಿಸಿಸಿಐ, ಉತ್ತರ ಪ್ರದೇಶ ಕ್ರಿಕೆಟ್ ಬೋರ್ಡ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಐಪಿಎಲ್ಗೆ ಧನ್ಯವಾದಗಳು. ನನ್ನೆಲ್ಲಾ ಅಭಿಮಾನಿಗಳು ಹಾಗೂ ಅವರ ಬೆಂಬಲಕ್ಕಾಗಿ ಧನ್ಯವಾದಗಳು. ನನ್ನ ಸಾಮರ್ಥ್ಯದ ಮೇಲೆ ಅಚಲ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಆಭಾರಿ" ಎಂದಿದ್ದಾರೆ.
-
It has been an absolute honour to represent my country & state UP. I would like to announce my retirement from all formats of Cricket. I would like to thank @BCCI, @UPCACricket, @ChennaiIPL, @ShuklaRajiv sir & all my fans for their support and unwavering faith in my abilities 🇮🇳
— Suresh Raina🇮🇳 (@ImRaina) September 6, 2022 " class="align-text-top noRightClick twitterSection" data="
">It has been an absolute honour to represent my country & state UP. I would like to announce my retirement from all formats of Cricket. I would like to thank @BCCI, @UPCACricket, @ChennaiIPL, @ShuklaRajiv sir & all my fans for their support and unwavering faith in my abilities 🇮🇳
— Suresh Raina🇮🇳 (@ImRaina) September 6, 2022It has been an absolute honour to represent my country & state UP. I would like to announce my retirement from all formats of Cricket. I would like to thank @BCCI, @UPCACricket, @ChennaiIPL, @ShuklaRajiv sir & all my fans for their support and unwavering faith in my abilities 🇮🇳
— Suresh Raina🇮🇳 (@ImRaina) September 6, 2022
2020ರ ಆಗಸ್ಟ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ವಿದಾಯ ಪಡೆದುಕೊಂಡಿದ್ದ ಸುರೇಶ್ ರೈನಾ, ಐಪಿಎಲ್ನಲ್ಲಿ ಮಾತ್ರ ಭಾಗಿಯಾಗುತ್ತಿದ್ದರು. ಆದರೆ, ಇದೀಗ ಎಲ್ಲ ಮಾದರಿ ಕ್ರಿಕೆಟ್ನಿಂದ ದೂರ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಧೋನಿ ಭಾಯ್ ಮುಂದಿನ ವರ್ಷದ IPL ಆಡದಿದ್ದರೆ, ನಾನೂ ಆಡಲ್ಲ: ಸುರೇಶ್ ರೈನಾ
ಮಿಸ್ಟರ್ ಐಪಿಎಲ್ ಎಂದು ಖ್ಯಾತಿ ಗಿಟ್ಟಿಸಿಕೊಂಡಿದ್ದ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ರೈನಾ, ಭಾರತೀಯ ಕ್ರಿಕೆಟ್ನಲ್ಲಿ ವಿಶೇಷ ಛಾಪು ಮೂಡಿಸಿದವರು. 2022ರ ಐಪಿಎಲ್ನಿಂದಲೂ ಹೊರಗುಳಿದಿದ್ದ ರೈನಾ, 2023ರ ಟೂರ್ನಿಯಲ್ಲಿ ಕಾಣಿಸಿಕೊಳ್ಳಬಹುದು ಎಂಬ ಮಾತು ಕೇಳಿ ಬರುತ್ತಿತ್ತು. 2020ರಲ್ಲಿ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದರು.
ಮೂಲಗಳ ಪ್ರಕಾರ, ಸುರೇಶ್ ರೈನಾ ವಿದೇಶಿ ಕ್ರಿಕೆಟ್ ಲೀಗ್ಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸೆಪ್ಟೆಂಬರ್ 10ರಂದು ಶುರುವಾಗಲಿರುವ ರೋಡ್ ಸೇಫ್ಟಿ ಸರಣಿಯಲ್ಲೂ ಪಾಲ್ಗೊಳ್ಳಲಿರುವ ರೈನಾ, ದಕ್ಷಿಣ ಆಫ್ರಿಕಾ, ಯುಎಇ ಮತ್ತು ಶ್ರೀಲಂಕಾದ ಫ್ರಾಂಚೈಸಿಗಳ ಪರ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಐಪಿಎಲ್ನಲ್ಲಿ 5 ಸಾವಿರ ರನ್ ಗಡಿ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಇವರದ್ದು. ರೈನಾ ಒಟ್ಟು 205 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ 176 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 32.32ರ ಸರಾಸರಿಯಲ್ಲಿ 4,787 ರನ್ ಕಲೆ ಹಾಕಿದ್ದಾರೆ.
2005ರಿಂದ 2018ರವರೆಗೆ ಟೀಂ ಇಂಡಿಯಾ ಪರ ಬ್ಯಾಟ್ ಬೀಸಿರುವ ಕ್ರಿಕೆಟಿಗ, 2005ರಲ್ಲಿ ಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಡಿ ಇಟ್ಟಿದ್ದರು. ಟೀಂ ಇಂಡಿಯಾ ಪರವಾಗಿ 18 ಟೆಸ್ಟ್, 226 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಮಾದರಿಯ ಕ್ರಿಕೆಟ್ನಲ್ಲಿ ಕ್ರಮವಾಗಿ 768, 5,615 ಹಾಗೂ 1,605 ರನ್ ಗಳಿಸಿದ್ದಾರೆ.