ಲಂಡನ್: ಜೋ ರೂಟ್ ರಾಜೀನಾಮೆಯಿಂದ ತೆರವಾಗಿದ್ದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನ ಸ್ಥಾನಕ್ಕೆ ಆಲ್ರೌಂಡರ್ ಬೆನ್ಸ್ಟೋಕ್ಸ್ ನೇಮಕವಾಗಿದ್ದಾರೆ. ಕಳೆದ 17 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಗೆಲ್ಲಲು ಮಾತ್ರ ಸಾಧ್ಯವಾಗಿದ್ದು ರೂಟ್ ಎರಡು ವಾರಗಳ ಹಿಂದೆ ನಾಯಕನ ಜವಾಬ್ದಾರಿಯಿಂದ ಕೆಳಗಿಳಿದಿದ್ದರು.
ಮಾನಸಿಕ ಆರೋಗ್ಯವ ದೃಷ್ಟಿಯಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದ ಸ್ಟೋಕ್ಸ್ ಇತ್ತೀಚೆಗೆ ತಂಡಕ್ಕೆ ಮರಳಿದ್ದರು. ಇಂಗ್ಲೆಂಡ್ ತಂಡ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಳೆದ ವಾರವಷ್ಟೇ ನೇಮಕವಾಗಿದ್ದ ರಾಬ್ ಕೀ ಅವರು, ಸ್ಟೋಕ್ಸ್ರನ್ನು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿ ನೇಮಕ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ.
"ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಈ ತಂಡವನ್ನು ಮುಂದಿನ ಯುಗಕ್ಕೆ ಕೊಂಡೊಯ್ಯಲು ನಾವು ಬಯಸುವ ಮನಸ್ಥಿತಿ ಮತ್ತು ವಿಧಾನವನ್ನು ಬೆನ್ ಸ್ಟೋಕ್ಸ್ ಹೊಂದಿದ್ದಾರೆ. ಅವರು ನಮ್ಮ ನಿರ್ಧಾರವನ್ನು ಸ್ವೀಕರಿಸಿರುವುದಕ್ಕೆ ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ಅವರೂ ಕೂಡ ಜವಾಬ್ದಾರಿ ಮತ್ತು ಗೌರವ ಪಡೆಯುವುದಕ್ಕೆ ಸಿದ್ಧರಿದ್ದಾರೆ" ಎಂದು ಕೀ ಹೇಳಿದ್ದಾರೆ.
ಇಂಗ್ಲೆಂಡ್ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ನನಗೆ ಗೌರವ ತಂದಿದೆ. ಇದು ನೈಜ ಸವಾಲಾಗಿದ್ದು, ಬೇಸಿಗೆಯಲ್ಲಿ ಹೊಸ ಜವಾಬ್ಧಾರಿ ಆರಂಭಿಸಲು ಉತ್ಸುಕನಾಗಿದ್ದೇನೆ ಎಂದು ಬೆನ್ಸ್ಟೋಕ್ಸ್ ತಿಳಿಸಿದರು. ಬೆನ್ ಸ್ಟೋಕ್ಸ್ ನಾಯಕನಾಗಿ ವಿಶ್ವಚಾಂಪಿಯನ್ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಸರಣಿಯನ್ನಾಡಲಿದ್ದಾರೆ. 2 ಪಂದ್ಯಗಳ ಈ ಸರಣಿ ಜೂನ್ 2ರಿಂದ ಶುರುವಾಗಲಿದೆ.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಸೀಮಿತ ಓವರ್ಗಳ ಸರಣಿಗೆ ಉಮ್ರಾನ್ಗೆ ಅವಕಾಶ ಕೊಡಿ: ಗವಾಸ್ಕರ್