ETV Bharat / sports

Sourav Ganguly: ಗಂಗೂಲಿ "ದಾದಾ"ಗೆ 51ನೇ ವಸಂತದ ಸಂಭ್ರಮ.. ಬಂಗಾಳದಿಂದ ಬಿಸಿಸಿಐ ಅಧ್ಯಕ್ಷಗಿರಿವರೆಗೆ ಸೌರವ್​ ಪಯಣ..

ಬ್ಯಾಟಿಂಗ್​ನ ಅಗ್ರೆಸಿವ್ ಆ್ಯಕ್ಷನ್​ನಿಂದಲೇ ದಾದಾ ಎಂದು ಕರೆಯಲ್ಪಟ್ಟ ಸೌರವ್​ ಗಂಗೂಲಿ 51 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

Sourav Ganguly
Sourav Ganguly
author img

By

Published : Jul 8, 2023, 1:14 PM IST

ನವದೆಹಲಿ: ಭಾರತ ಕ್ರಿಕೆಟ್​ನಲ್ಲಿ ದಾದಾ ಎಂದೇ ಖ್ಯಾತರಾಗಿರುವ ಲೆಜೆಂಡರಿ ಬ್ಯಾಟರ್ ಸೌರವ್ ಗಂಗೂಲಿ ಅವರಿಂದು 51ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭಾರತ ಕ್ರಿಕೆಟ್​ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಮತ್ತು ನಾಯಕರಲ್ಲಿ ಒಬ್ಬರು ಗಂಗೂಲಿ. ಕಳೆದ ನಾಲ್ಕು ವರ್ಷ ಬಿಸಿಸಿಐನ ಅಧ್ಯಕ್ಷರಾಗಿ ಸ್ಥಾನವನ್ನು ಅಲಂಕರಿಸಿದ್ದರು.

1992ರಲ್ಲಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ, ಗಂಗೂಲಿ ಅವರ ದಿಟ್ಟ, ಉಗ್ರ ವ್ಯಕ್ತಿತ್ವ ಮತ್ತು ಸ್ಟ್ರೋಕ್‌ಪ್ಲೇ ಅವರಿಗೆ 'ದಾದಾ' ಎಂಬ ಇನ್ನೊಂದು ಹೆಸರನ್ನು ತಂದುಕೊಟ್ಟಿತು. ಅವರ ಆಟದ ಶೈಲಿಯಿಂದಲೇ ಭಾರತದ ನಾಯಕರಾಗಿಯೂ ಮುಂದುವರೆದರು. ಭಾರತ ಕ್ರಿಕೆಟ್​ ತಂಡಕ್ಕೆ ಅಂಟಿಕೊಂಡಿದ್ದ ಮ್ಯಾಚ್-ಫಿಕ್ಸಿಂಗ್ ಎಂಬ ಕಪ್ಪು ಚುಕ್ಕೆಯನ್ನು ಅಳಿಸಿ ವಿಶ್ವ ಚಾಂಪಿಯನ್​ ಆಗುವ ರೀತಿ ಮಾಡಿದ ಕೀರ್ತಿ ದಾದಾ ಪಾಲಿಗಿದೆ. ಗಂಗೂಲಿ ಅವರ ಆಫ್-ಸೈಡ್ ಆಟ ಅತ್ಯುತ್ತಮವಾಗಿತ್ತು ಮತ್ತು ಅವರು ಫೀಲ್ಡ್​ನಲ್ಲಿ ಕಟ್ ಮತ್ತು ಡ್ರೈವ್‌ಗಳಿಂದ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದರು. ಇದರಿಂದ ಅವರಿಗೆ 'ಗಾಡ್ ಆಫ್ ಆಫ್‌ಸೈಡ್' ಎಂಬ ಅಡ್ಡಹೆಸರು ಸಹ ಇತ್ತು.

  • 4️⃣2️⃣4️⃣ intl. matches
    1️⃣8️⃣5️⃣7️⃣5️⃣ intl. runs 👌🏻
    3️⃣8️⃣ intl. centuries 💯

    Here's wishing former #TeamIndia Captain and former BCCI President @SGanguly99 a very Happy Birthday. 👏 🎂 pic.twitter.com/fd1IdQzy24

    — BCCI (@BCCI) July 8, 2023 " class="align-text-top noRightClick twitterSection" data=" ">

ಟೆಸ್ಟ್​​ ಸ್ವರೂಪದಲ್ಲಿ ಸೌರವ್ 113 ಪಂದ್ಯಗಳನ್ನು ಆಡಿದ್ದಾರೆ. ಅವರು 42.17 ರ ಸರಾಸರಿಯಲ್ಲಿ 7,212 ರನ್ ಗಳಿಸಿದ್ದಾರೆ. ಅವರು 188 ಇನ್ನಿಂಗ್ಸ್‌ಗಳಲ್ಲಿ 16 ಶತಕಗಳು ಮತ್ತು 35 ಅರ್ಧ ಶತಕಗಳನ್ನು ಸಿಡಿಸಿದ್ದಾರೆ, 239 ರ ಅತ್ಯುತ್ತಮ ಸ್ಕೋರ್‌ ಆಗಿದೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಏಳನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು 1996 ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು.

ನಾಯಕನಾಗಿ ಅವರು 49 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು. ಇದರಲ್ಲಿ ಭಾರತ 21 ಪಂದ್ಯಗಳನ್ನು ಗೆದ್ದು, 13 ಸೋಲು ಮತ್ತು 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 42.85 ರ ಗೆಲುವಿನೊಂದಿಗೆ, ಅವರು ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. 2001 ರಲ್ಲಿ, ಗಂಗೂಲಿ ನೇತೃತ್ವದ ತಂಡವು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು 2-1 ರಿಂದ ಸೋಲಿಸಿತು.

ಸ್ಟೀವ್ ವಾ ನಾಯಕತ್ವದ ಆಸ್ಟ್ರೇಲಿಯನ್ ತಂಡವು ಸರಣಿಯನ್ನು ಆಡಿತ್ತು. ಅದರಲ್ಲಿ ವಿವಿಎಸ್​ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಕೋಲ್ಕತ್ತಾದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದು ಶ್ರೇಷ್ಠ ಪುನರಾಗಮನವನ್ನು ಪ್ರದರ್ಶಿಸಿದ್ದರು. ಈ ಟೆಸ್ಟ್ ಸರಣಿ ಗೆಲುವು ಭಾರತದ ಅತ್ಯುತ್ತಮ ಪಂದ್ಯಗಳಲ್ಲಿ ಒಂದಾಗಿದೆ. 2004 ರಲ್ಲಿ, ಅವರು ಪಾಕಿಸ್ತಾನದಲ್ಲಿ ಏಕದಿನ ಮತ್ತು ಟೆಸ್ಟ್ ಸರಣಿಯನ್ನು ನಾಯಕತ್ವ ವಹಿಸಿದ್ದರು. ಇದು ಪಾಕಿಸ್ತಾನದ ನೆಲದಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಸರಣಿ ಜಯವಾಗಿದೆ. ಭಾರತ ಏಕದಿನ ಸರಣಿಯನ್ನೂ ಗೆದ್ದುಕೊಂಡಿದೆ.

ಗಂಗೂಲಿ 311 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 41.02 ಸರಾಸರಿಯಲ್ಲಿ 11,363 ರನ್ ಗಳಿಸಿದ್ದಾರೆ. ಅವರು 300 ಇನ್ನಿಂಗ್ಸ್‌ಗಳಲ್ಲಿ 22 ಶತಕಗಳು ಮತ್ತು 72 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 183 ಆಗಿದೆ. ಅವರು ODI ಕ್ರಿಕೆಟ್‌ನಲ್ಲಿ ಒಂಬತ್ತನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ ಮತ್ತು ಏಕದಿನದಲ್ಲಿ ಭಾರತದ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 147 ಏಕದಿನ ಪಂದ್ಯಗಳನ್ನು ಗಂಗೂಲಿ ಮುನ್ನಡೆಸಿದ್ದಾರೆ. ಅದರಲ್ಲಿ 76 ರಲ್ಲಿ ಗೆದ್ದಿದ್ದು, 66 ರಲ್ಲಿ ಸೋಲಾಗಿದೆ ಮತ್ತು ಐದು ಫಲಿತಾಂಶ ರಹಿತ ಪಂದ್ಯಗಳಾಗಿವೆ.

2002 ರಲ್ಲಿ ನ್ಯಾಟ್ವೆಸ್ಟ್ ಟ್ರೋಫಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದಾಗ ಗಂಗೂಲಿ ಅವರು ಲಾರ್ಡ್ಸ್ ಬಾಲ್ಕನಿಯಲ್ಲಿ ತಮ್ಮ ಅಂಗಿಯನ್ನು ತೆಗೆದು ಅದನ್ನು ಬೀಸಲು ಪ್ರಾರಂಭಿಸಿದರು. 2003 ರಲ್ಲಿ ಭಾರತ ಗಂಗೂಲಿ ನಾಯಕತ್ವದಲ್ಲಿ ವಿಶ್ವಕಪ್ ಫೈನಲ್​ವರೆಗೆ ಆಡಿತು. ಆದರೆ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ರನ್ನರ್​ ಅಪ್​ ಆಯಿತು.

ಗಂಗೂಲಿ 424 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 488 ಇನ್ನಿಂಗ್ಸ್‌ಗಳಲ್ಲಿ 41.46 ಸರಾಸರಿಯಲ್ಲಿ 18,575 ರನ್ ಗಳಿಸಿದ್ದಾರೆ. ಅವರು ಒಟ್ಟು 38 ಶತಕಗಳು ಮತ್ತು 107 ಅರ್ಧಶತಕಗಳನ್ನು ಗಳಿಸಿದ್ದಾರೆ, 239 ಅವರ ಅತ್ಯುತ್ತಮ ಸ್ಕೋರ್ ಆಗಿದೆ.

ಇದನ್ನೂ ಓದಿ: 10ನೇ ತರಗತಿ 66%, 12ರಲ್ಲಿ 56%: 3 ICC ಟ್ರೋಫಿ ಗೆದ್ದ ಏಕೈಕ ನಾಯಕ! ಕ್ರಿಕೆಟ್‌ ಲೋಕದ ಕಣ್ಮಣಿ ಧೋನಿಗೆ 42ನೇ ಹುಟ್ಟುಹಬ್ಬ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.