ETV Bharat / sports

ಐಪಿಎಲ್ ವೇಳೆ ರೋಹಿತ್​ಗೆ ಬೆದರಿಕೆಯೊಡ್ಡಿದ್ದಾರಂತೆ ಬೌಲ್ಟ್​

author img

By

Published : Jun 16, 2021, 9:04 PM IST

ನಾನು ರೋಹಿತ್ ಶರ್ಮಾ ಆಟಗಾರನನ್ನು ತುಂಬಾ ಇಷ್ಟಪಡುತ್ತೇನೆ. ಅವರು ಹೆಚ್ಚು ಕಡಿಮೆ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್​ರಂತಹ ಆಟಗಾರ. ಕಠಿಣ ಸಂದರ್ಭದಲ್ಲಿ ಹೋದರೂ ತಾವೇ ಎಲ್ಲವನ್ನು ಹೊತ್ತು ಆಡುತ್ತಾರೆ. ಫೈನಲ್​ನಲ್ಲಿ ಬೌಲ್ಟ್​ ಮತ್ತು ರೋಹಿತ್ ನಡುವಿನ ಕಾದಾಟ ನೋಡಲು ನಾನಂತೂ ಕಾತುರದಿಂದಿದ್ದೇನೆ ಎಂದು ಹೇಳಿದ್ದಾರೆ..

ಟ್ರೆಂಟ್ ಬೌಲ್ಟ್​ vs ರೋಹಿತ್ ಶರ್ಮಾ
ಟ್ರೆಂಟ್ ಬೌಲ್ಟ್​ vs ರೋಹಿತ್ ಶರ್ಮಾ

ಮುಂಬೈ : ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಶುಕ್ರವಾರದಿಂದ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಕಳೆದ ತಿಂಗಳು ಒಂದೇ ತಂಡದಲ್ಲಿ ಐಪಿಎಲ್ ಆಡಿದ್ದ ಆಟಗಾರರು ಇನ್ನೆರಡು ದಿನಗಳಲ್ಲಿ ನಡೆಯುವ ಮಹಾನ್ ಪಂದ್ಯದಲ್ಲಿ ಎದುರಾಳಿಗಳಾಗಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಕಿವೀಸ್​ ವೇಗಿ ಟ್ರೆಂಟ್ ಬೌಲ್ಟ್​ ಮತ್ತು ನಾಯಕ ರೋಹಿತ್ ಶರ್ಮಾ ನಡುವೆ ನೆಟ್ಸ್​ನಲ್ಲಿ ಅಭ್ಯಾಸ ​ನಡೆಸುವ ವೇಳೆ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ಮುಂಬೈ ಬೌಲಿಂಗ್ ಕೋಚ್ ಶೇನ್ ಬಾಂಡ್ ಬಹಿರಂಗಪಡಿಸಿದ್ದಾರೆ.​

ಐಸಿಸಿ WTC ಫೈನಲ್ ಪಂದ್ಯಕ್ಕೂ ಮುನ್ನ ಸ್ಟಾರ್​ ಸ್ಪೋರ್ಟ್ಸ್​ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಂಡ್​, ಬೌಲ್ಟ್ ಮತ್ತು ರೋಹಿತ್​ ನಡುವಿನ ಕಾದಾಟ ಫೈನಲ್ ಪಂದ್ಯದಲ್ಲಿ ಎದುರು ನೋಡಬಹುದಾದ ಅತ್ಯುತ್ತಮ ಕ್ಷಣವಾಗಲಿದೆ ಎಂದು ತಿಳಿಸಿದ್ದಾರೆ.

ಐಪಿಎಲ್​ ನಡೆಯುತ್ತಿದ್ದ ಸಂದರ್ಭದಲ್ಲಿ ಟ್ರೆಂಟ್​ ಬೌಲ್ಟ್​ ನೆಟ್ಸ್​ನಲ್ಲಿ ಬೌಲಿಂಗ್ ಮಾಡುವ ವೇಳೆ ರೋಹಿತ್​ ಪ್ಯಾಡ್​ಗೆ ತಗುಲಿತು. ನಂತರ ಬೌಲ್ಟ್​ ಮುಂಬರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಇದೇ ರೀತಿ ಆಗಲಿದೆ ಎಂದು ಹೇಳಿದ್ದರು ಎಂದು ಬಾಂಡ್ ಬಹಿರಂಗ ಪಡಿಸಿದ್ದಾರೆ.

ಈ ಘಟನೆ ಫೈನಲ್​ ಪಂದ್ಯ ನಡೆಯುವುದಕ್ಕೂ ಒಂದು ತಿಂಗಳ ಮುನ್ನ ನಡೆದಿದೆ. ಆದರೆ, ಆ ಇಬ್ಬರಿಗೂ ಮುಂದೆ ತಾವೂ ಪರಸ್ಪರ ಎದುರಾಳಿಗಳು ಎಂಬುದರ ಬಗ್ಗೆ ಜಾಗೃತಿ ಹೊಂದಿದ್ದರು ಎಂದು ಕಿವೀಸ್ ಮಾಜಿ ಪೇಸರ್​ ತಿಳಿಸಿದ್ದಾರೆ.

ನಾನು ರೋಹಿತ್ ಶರ್ಮಾ ಆಟಗಾರನನ್ನು ತುಂಬಾ ಇಷ್ಟಪಡುತ್ತೇನೆ. ಅವರು ಹೆಚ್ಚು ಕಡಿಮೆ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್​ರಂತಹ ಆಟಗಾರ. ಕಠಿಣ ಸಂದರ್ಭದಲ್ಲಿ ಹೋದರೂ ತಾವೇ ಎಲ್ಲವನ್ನು ಹೊತ್ತು ಆಡುತ್ತಾರೆ. ಫೈನಲ್​ನಲ್ಲಿ ಬೌಲ್ಟ್​ ಮತ್ತು ರೋಹಿತ್ ನಡುವಿನ ಕಾದಾಟ ನೋಡಲು ನಾನಂತೂ ಕಾತುರದಿಂದಿದ್ದೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: ನಾವು WTC ಫೈನಲ್ ಪ್ರವೇಶಿಸಲು ಇವರೇ ಕಾರಣ: ಪೂಜಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.