ರಾಯ್‌ಪುರ (ಛತ್ತೀಸ್ಗಢ್) : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವ ಯುವ ಆಟಗಾರ ರಿಯಾನ್ ಪರಾಗ್ (155) ರಣಜಿ ಟ್ರೋಫಿ ಇತಿಹಾಸದಲ್ಲೇ ಎರಡನೇ ಅತಿ ವೇಗದ ಶತಕವನ್ನು ಬಾರಿಸಿದ್ದಾರೆ.
ಇಂದು ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಛತ್ತೀಸ್ಗಢ್ ಮತ್ತು ಅಸ್ಸೋಂ ನಡುವೆ ನಡೆದ ರಣಜಿ ಟ್ರೋಫಿಯ 2024 ಎಲೈಟ್ ಗ್ರೂಪ್ ಬಿ ಪಂದ್ಯದಲ್ಲಿ ಪರಾಗ್ ದಾಖಲೆ ಬರೆದಿದ್ದಾರೆ. ದೇಶಿ ಪಂದ್ಯಾವಳಿಯಲ್ಲಿ ಅಸ್ಸೋಂ ತಂಡವನ್ನು ನಾಯಕನಾಗಿ ರಿಯಾನ್ ಪರಾಗ್ ಮುನ್ನಡೆಸುತ್ತಿದ್ದು, ಕೇವಲ 87 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 11 ಬೌಂಡರಿ ಹೊಡೆಯುವ ಮೂಲಕ ಬಿರುಸಿನ 155 ರನ್ ಗಳಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಿಯಾನ್ ವೃತ್ತಿಜೀವನದ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಆಗಿದೆ.
-
🔥 Second-fastest Ranji hundred
— Rajasthan Royals (@rajasthanroyals) January 8, 2024 " class="align-text-top noRightClick twitterSection" data="
💯 His highest score in FC
Assam’s rescue man, Riyan Parag 💗 pic.twitter.com/RZ1sSxdgv5
">🔥 Second-fastest Ranji hundred
— Rajasthan Royals (@rajasthanroyals) January 8, 2024
💯 His highest score in FC
Assam’s rescue man, Riyan Parag 💗 pic.twitter.com/RZ1sSxdgv5🔥 Second-fastest Ranji hundred
— Rajasthan Royals (@rajasthanroyals) January 8, 2024
💯 His highest score in FC
Assam’s rescue man, Riyan Parag 💗 pic.twitter.com/RZ1sSxdgv5
ಇದಕ್ಕೂ ಮುಂಚೆ ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ವೇಗದ ಶಕತ ಸಿಡಿಸಿದ ಏಕೈಕ ಆಟಗಾರ ಭಾರತದ ವಿಕೆಟ್-ಕೀಪರ್ ಮತ್ತು ಬ್ಯಾಟರ್ ರಿಷಬ್ ಪಂತ್ ಹೆಸರಿನಲ್ಲಿತ್ತು. ದೆಹಲಿ ತಂಡವನ್ನು ಪ್ರತಿನಿಧಿಸುವ ರಿಷಬ್ ಪಂತ್ 2016-17ರ ಋತುವಿನಲ್ಲಿ ಜಾರ್ಖಂಡ್ ವಿರುದ್ಧ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು. ನಂತರ 2014-15ರಲ್ಲಿ ಇಂದೋರ್‌ನಲ್ಲಿ ನಡೆದ ಮಧ್ಯಪ್ರದೇಶ ಮತ್ತು ಕರ್ನಾಟಕದ ವಿರುದ್ಧ ಪಂದ್ಯದಲ್ಲಿ ಭಾರತದ ಮಾಜಿ ವಿಕೆಟ್ ಕೀಪರ್ ನಮನ್ ಓಜಾ ಅವರು 69 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇದು ಈವರೆಗೆ ಎರಡನೇ ವೇಗದ ಶತಕವಾಗಿತ್ತು. ಆದರೇ ಇದೀಗ ಈ ದಾಖಲೆಯನ್ನು ಸರಿಗಟ್ಟಿದ ಪರಾಗ್ ತಮ್ಮ ಹೆಸರನ್ನು 2ನೇ ಸ್ಥಾನದಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಪಂದ್ಯದ ಫಲಿತಾಂಶ : ಟಾಸ್ ಗೆದ್ದ ಅಸ್ಸೋಂ ಬೌಲಿಂಗ್ ಆಯ್ಕೆ ಮಾಡಿಕೊಂಡು ಛತ್ತೀಸ್‌ಗಢ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಆದರೇ ನಿರೀಕ್ಷೆಗೆ ತಕ್ಕಂತೆ ಅಸ್ಸೋಂ ಬೌಲರ್‌ಗಳು ಪ್ರದರ್ಶನ ತೋರಲಿಲ್ಲ. ಇದರ ಪರಿಣಾಮ ಛತ್ತೀಸ್‌ಗಢ ತಂಡದ ನಾಯಕ ಅಮನದೀಪ್ ಖರೆ ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 327 ರನ್‌ಗಳ ಪೇರಿಸಿತು. ಉತ್ತರವಾಗಿ, ಬ್ಯಾಟಿಂಗ್ ಆರಂಭಿಸಿದ ಅಸ್ಸೋಂ ಬ್ಯಾಟ್ಸ್‌ಮನ್‌ಗಳು ಕೂಡ ರನ್ ಕಲೆಹಾಕುವಲ್ಲಿ ವಿಫಲವಾದರು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 159 ರನ್‌ಗಳಿಗೆ ಅಸ್ಸೋಂ ಆಲೌಟ್ ಆಯಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಪರಾಗ್ ಹೊಡೆದ ಅತಿವೇಗದ ಶತಕ ತಂಡ 254 ರನ್‌ಗಳ ಮೊತ್ತವನ್ನು ತಲುಪಲು ಸಹಾಯವಾಯಿತು. ಇದರಿಂದ 87 ರನ್‌ಗಳ ಗುರಿಯನ್ನು ಛತ್ತೀಸ್‌ಗಢಕ್ಕೆ ನೀಡಲಾಯಿತು. ಕೇವಲ 20 ಓವರ್‌ಗಳಲ್ಲಿ ಈ ಗುರಿಯನ್ನು ಬೆನ್ನಟ್ಟಿ ಛತ್ತೀಸ್‌ಗಢ ಎಲೈಟ್ ಗ್ರೂಪ್ ಬಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು.
ಇದನ್ನೂ ಓದಿ : ಅಮಾನತಾಗಿರುವ ಕುಸ್ತಿ ಫೆಡರೇಶನ್ ಸಮಿತಿ ನಡೆಸುವ ಕ್ರೀಡೆಗಳು ಅಮಾನ್ಯ: ಕ್ರೀಡಾ ಸಚಿವಾಲಯ